ETV Bharat / state

ಮಾಸ್ಕ್ ಹಾಕಿದ ಕೊರೊನಾ, ವಾಲುವ ಗೋಪುರ: ಕಣ್ಮನ ಸೆಳೆಯುತ್ತಿದೆ ರಾಜಧಾನಿಯ ಕೇಕ್ ಶೋ - ಕ್ರಿಸ್ ಮಸ್ ಹಿನ್ನೆಲೆ ಬೆಂಗಳೂರಿನಲ್ಲಿ ಕೇಕ್ ಶೋ

ಕ್ರಿಸ್ ಮಸ್ ಮತ್ತು ಹೊಸ ವರ್ಷದ ಹಿನ್ನೆಲೆ ಪ್ರತೀ ವರ್ಷದಂತೆ ಈ ಬಾರಿಯೂ ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್​ ಜೋಸೆಫ್ ಹೈಸ್ಕೂಲ್ ಗ್ರೌಂಡ್​ನಲ್ಲಿ ಕೇಕ್ ಶೋ ಆಯೋಜಿಸಲಾಗಿದ್ದು, ವಿವಿಧ ವಿನ್ಯಾಸ, ವಿಶಿಷ್ಟ ಥೀಮ್​ನ ಕೇಕ್​ಗಳು ಜನರನ್ನು ಆಕರ್ಷಿಸುತ್ತಿವೆ.

India's largest cake festival at Bengaluru
ಕಣ್ಮನ ಸೆಳೆಯುತ್ತಿದೆ ರಾಜಧಾನಿಯ ಕೇಕ್ ಶೋ
author img

By

Published : Dec 17, 2020, 8:44 PM IST

ಬೆಂಗಳೂರು: ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಎಲ್ಲೆಲ್ಲೂ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಿಸಲು ಬಗೆ ಬಗೆಯ ಕೇಕ್‌ಗಳು ರೆಡಿಯಾಗುತ್ತವೆ. ಈ ಬಾರಿ ಕೋವಿಡ್​ ನಡುವೆಯೂ ನಗರದಲ್ಲಿ ವಿಭಿನ್ನ ಹಾಗೂ ಪ್ರಸ್ತುತ ವಿದ್ಯಮಾನದ ಥೀಮ್‌ನೊಂದಿಗೆ ಕೇಕ್‌ ಶೋ‌ ಆಯೋಜಿಸಲಾಗಿದೆ.

ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್​ ಜೋಸೆಫ್ ಹೈಸ್ಕೂಲ್ ಗ್ರೌಂಡ್​ನಲ್ಲಿ ಈ ಬಾರಿ ಮಕ್ಕಳಿಗಾಗಿ ವಿಶೇಷವಾದ ಕೇಕ್ ಶೋ ಆಯೋಜಿಸಲಾಗಿದೆ. ಈ ಕೇಕ್​ ಶೋನ ಥೀಮ್‌ ಕೂಡ ವಿಶಿಷ್ಟವಾಗಿದ್ದು, ಮಕ್ಕಳನ್ನು ಆಕರ್ಷಿಸುವ ಸಲುವಾಗಿ‌ ಕಾರ್ಟೂನ್‌ ಥೀಮ್‌ ಇರಿಸಲಾಗಿದೆ.

ಭಾರತದ ಅತೀ ದೊಡ್ಡ ಕೇಕ್ ಶೋ ಬೆಂಗಳೂರಿನಲ್ಲಿ

ಕೇಕ್​ ಶೋ ಆಯೋಜಿಸಿರುವ ಗ್ರೌಂಡ್​ನ ಮುಖ್ಯದ್ವಾರ ಪ್ರವೇಶಿಸುತ್ತಿದ್ದಂತೆ ಲಯನ್‌ ಕಿಂಗ್ ಚಿತ್ರದ ಒಂದು ದೃಶ್ಯವನ್ನಾಧಾರಿಸಿ ತಯಾರಿಸಿದ ಕೇಕ್, ಅದರ ಪಕ್ಕದಲ್ಲಿ ಇಟಲಿಯ ವಾಲುವ ಪೀಸ್ ಗೋಪುರ, ಕೊರೊನಾ ವೈರಸ್‌ ಮಾಸ್ಕ್ ಹಾಕಿರುವುದು, ನಾಟ್ಯ ದೇವರು ನಟರಾಜ್, ಮದುವೆಯ ಕೇಕ್, ಚಿನ್ನದ ಡ್ರ್ಯಾಗನ್, ಟಾಮ್ ಅಂಡ್​ ಜೆರಿ, ಗಣಪತಿ ದೇವರು‌, ಪ್ಯಾರಿಸ್‌ನ ಐಫೆಲ್ ಟವರ್. ಹೀಗೆ ಹತ್ತು ಹಲವು ಆಕರ್ಷಕ‌ ಕೇಕ್‌ಗಳು ನಮ್ಮನ್ನು ಕೈ ಬೀಸಿ‌ ಕರೆಯುತ್ತವೆ.

ಡಿಸೆಂಬರ್ 17 ರಿಂದ ಜನವರಿ 3ರ ವರೆಗೆ ನಡೆಯುತ್ತಿರುವ ಭಾರತದ ಅತೀ ದೊಡ್ಡ ಕೇಕ್ ಉತ್ಸವ ಇದಾಗಿದೆ. ಈ ಪ್ರದರ್ಶನದಲ್ಲಿ ಶುಗರ್ ಸ್ಕಲ್ಪ್ಟ್‌ನ ಸುಮಾರು 60 ಕ್ಕೂ ಹೆಚ್ಚು ನಳಪಾಕ ಪ್ರವೀಣರು ವಿವಿಧ ವಿನ್ಯಾಸಗಳ ಕೇಕ್‌ಗಳನ್ನ ತಯಾರಿಸಿದ್ದಾರೆ. ಈ ಬಾರಿಯ 46ನೇ ವರ್ಷದ ಈ ಕೇಕ್ ಶೋನಲ್ಲಿ ಸಿಂಹರಾಜನ‌ ಬಂಡೆ, ನಟರಾಜ, ವಾಲುವ ಪೀಸ್ ಗೋಪುರ ಮುಖ್ಯ ಆಕರ್ಷಣೆಯಾಗಿದೆ. ಸುಮಾರು 9 ಅಡಿ ಅಗಲ ಹಾಗೂ 12 ಅಡಿ ಉದ್ದವಿರುವ ಈ ಕೇಕ್ ಅನ್ನು 70 ದಿನಗಳಲ್ಲಿ 6 ಜನರ ತಂಡ ವಿನ್ಯಾಸ ಮಾಡಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಯೇಸುವಿನ ಜನನ ಹಾಗೂ ಕೊರೊನಾ ವೈರಸ್‌ಗೆ ಮಾಸ್ಕ್​ ಹಾಕಿರುವ ಕೇಕ್​ ಈ ಬಾರಿಯ ಮತ್ತೊಂದು ಆಕರ್ಷಣೆಯಾಗಿದೆ.

ನಗರದ ಮೂಲೆ‌ ಮೂಲೆಗಳಿಂದ ಜನರು ಕೇಕ್ ಶೋನ ಅಂದವನ್ನು ಕಣ್ತುಂಬ್ಬಿಕೊಳ್ಳಲು ಆಗಮಿಸುತ್ತಿದ್ದಾರೆ.‌ ಕೋವಿಡ್​ ಹಿನ್ನೆಲೆ, ಒಂದು ಬಾರಿಗೆ ಕೇವಲ 200 ಜನರಿಗೆ ಮಾತ್ರ ಅವಕಾಶವಿದೆ. ಕೇಕ್ ಶೋ ಜೊತೆ ಇತರ ಮಾರಾಟ ಮಳಿಗೆಗಳಿಗೂ ಇದ್ದು, ಶೇ. 50 ರಷ್ಟು ಸ್ಟಾಲ್‌ಗಳನ್ನು ಇರಿಸಲು ಅವಕಾಶ ಕಲ್ಪಿಸಲಾಗಿದೆ.‌ ಪ್ರತಿ ವರ್ಷ ಕೇಕ್​ ಶೋ ವೇಳೆ ಸುಮಾರು 150 ಮಾರಾಟ ಮಳಿಗಳು ಇರುತ್ತಿತ್ತು. ಈ ಬಾರಿ ಕೇವಲ 60 ರಿಂದ 65 ಮಳಿಗೆಗಳಿಗೆ ಮಾತ್ರ ಅವಕಾಶ‌ ನೀಡಲಾಗಿದೆ. ಕೇಕ್ ಶೋ ಆಯೋಜಿಸಿರುವ ಮೈದಾನದ ಮುಖ್ಯ ದ್ವಾರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರತಿಯೊಬ್ಬರನ್ನೂ ಥರ್ಮಲ್‌ ಚೆಕ್ ಮಾಡಿ ಒಳಗೆ ಬಿಡಲಾಗುತ್ತಿದೆ. ಕೋವಿಡ್‌ನಿಂದಾಗಿ ಜನ ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಈ ಬಾರಿ ಪ್ರವೇಶ‌ ದರವನ್ನು ಕೊಂಚ ಕಡಿಮೆ‌ ಮಾಡಲಾಗಿದ್ದು, 90 ರೂಪಾಯಿ ನಿಗದಿಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.