ETV Bharat / state

ಸಿಲಿಕಾನ್​ ಸಿಟಿಯಲ್ಲಿ ಭಾರತದ ಪ್ರಥಮ ಸಂಗೀತ ಸಂವಾದಿ ಸಂಗ್ರಹಾಲಯ ಉದ್ಘಾಟನೆ..!

ಸಿಲಿಕಾನ್​ ಸಿಟಿಯಲ್ಲಿ ಭಾರತದ ಪ್ರಥಮ ಸಂಗೀತ ಸಂವಾದಿ ಸಂಗ್ರಹಾಲಯ (ಇಂಟರಾಕ್ಟಿವ್‌ ಮ್ಯೂಸಿಕ್‌ ಮ್ಯೂಸಿಯಂ) ಉದ್ಘಾಟನೆಗೊಂಡಿದೆ.

ಭಾರತದ ಪ್ರಥಮ ಸಂಗೀತ ಸಂವಾದಿ ಸಂಗ್ರಹಾಲಯ ಉದ್ಘಾಟನೆ
author img

By

Published : Jul 28, 2019, 4:09 AM IST

ಬೆಂಗಳೂರು : ಸಿಲಿಕಾನ್ ಸಿಟಿಯ ಜೆ.ಪಿ. ನಗರದ 7ನೇ ಫೇಸ್​ನಲ್ಲಿನ ಬ್ರಿಗೇಡ್ ಮಿಲೇನಿಯಂ ಎನ್​ಕ್ಲೇವ್​ನಲ್ಲಿ 'ಭಾರತದ ಪ್ರಥಮ ಸಂಗೀತ ಸಂವಾದಿ ಸಂಗ್ರಹಾಲಯ'ವೊಂದು (ಇಂಡಿಯನ್ ಮ್ಯೂಸಿಕ್ ಎಕ್ಸ್​ಪೀರಿಯನ್ಸ್​​) ಉದ್ಘಾಟನೆಗೊಂಡಿತು.

ಇಂಡಿಯನ್ ಮ್ಯೂಸಿಕ್ ಎಕ್ಸ್​ಪೀರಿಯನ್ಸ್​​ (ಐಎಂಇ) ಅನ್ನೋದು ಭಾರತದ ಮೊದಲ ಸಂವಾದಿ ಸಂಗೀತ ವಸ್ತು ಸಂಗ್ರಹಾಲಯ. ಬ್ರಿಗೇಡ್ ಗ್ರೂಪ್ ಸಂಸ್ಕೃತಿ ಸಚಿವಾಲಯ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿದಂತೆ ಹಲವು ಕಾರ್ಪೋರೇಟ್​ ಹಾಗೂ ಲೋಕೋಪಕಾರಿಗಳ ಸಹಕಾರದಿಂದ ಈ ಲಾಭರಹಿತ ಇಂಡಿಯನ್ ಮ್ಯೂಸಿಕ್ ಎಕ್ಸ್​ಪೀರಿಯನ್ಸ್​ ಟ್ರಸ್ಟ್​ ಸ್ಥಾಪನೆಗೊಂಡಿದೆ.

ಭಾರತದ ಪ್ರಥಮ ಸಂಗೀತ ಸಂವಾದಿ ಸಂಗ್ರಹಾಲಯ ಉದ್ಘಾಟನೆ

ಇನ್ನು ಈ ಐಎಂಇಯು ಹೌಸ್ ಸ್ಟೇಟ್ ಆಫ್ ದಿ ಆರ್ಟ್ ಇಂಟರ್ ಆ್ಯಕ್ಟಿವ್ ಎಕ್ಸಿಬಿಟ್ ಎರಿಯಾ, ಸೌಂಡ್ ಗಾರ್ಡನ್, ಲರ್ನಿಂಗ್ ಸೆಂಟ್ ಎಂಬ ಮೂರು ವಿಭಾಗಗಳನ್ನು ಹೊಂದಿದೆ. ಎಕ್ಸಿಬಿಟ್​​ ಎರಿಯಾದ 8 ವಿಷಯಾಧರಿತ ಗ್ಯಾಲರಿಗಳು ಭಾರತೀಯ ಸಂಗೀತದ ವಿವಿಧ ಅಂಶಗಳನ್ನು ಪ್ರದರ್ಶಿಸುತ್ತದೆ. ಇನ್ನು ಇನ್​ಸ್ಟ್ರುಮೆಂಟ್​​ ಗ್ಯಾಲರಿಯಲ್ಲಿ 100ಕ್ಕೂ ಹೆಚ್ಚು ಸಂಗೀತ ಉಪಕರಣಗಳ, ಮೂರು ಮಿನಿ ಥಿಯೇಟರ್ ಹಾಗೂ ಅನೇಕ ಕಂಪ್ಯೂಟರ್​​ ಆಧರಿತ ಸಂವಾದಾತ್ಮಕ ಅಳವಡಿಕೆಗಳು ಭೇಟಿ ನೀಡುವವರಿಗೆ ಸಂಗೀತದ ಪ್ರಕ್ರಿಯೆಯನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಲಾಸ್ ಏಂಜಲೀಸ್​ನ ಗ್ರ್ಯಾಮಿ ಮ್ಯೂಸಿಯಂ ಸಂಸ್ಥಾಪಕ ಹಾಗೂ ಕಾರ್ಯ ನಿರ್ವಾಹಕರೂ ಆದ ರಾಬರ್ಟ್ ಸ್ಯಾಂಟೆಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

Intro:Indian music experienceBody:ಭಾರತದ ಮೊದಲ ಸಂವಾದಾತ್ಮಕ ಮ್ಯೂಸಿಕ್ ಮ್ಯೂಸಿಯಂ ಇಂಡಿಯನ್ ಮ್ಯೂಸಿಕ್ ಎಕ್ಸ್ ಪಿರಿಯನ್ಸ್ (ಐಎಂಇ) ಇಂದು ಉದ್ಘಾಟನೆಗೊಂಡಿತು

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ, ಲಾಸ್ ಎಂಜಲಿಸ್ ನ ಗ್ರ್ಯಾಮಿ ಮ್ಯೂಸಿಯಂ ನ ಸಂಸ್ಥಾಪಕ ಕಾರ್ಯ ನಿರ್ವಾಹಕ ರಾಬರ್ಟ್ ಸ್ಯಾಂಟೆಲ್ಲಿ ಭಾಗವಹಿಸಿದರು

ಇದು ಜೆ.ಪಿ ನಗರ 7ನೇ ಫೇಸ್ ನಲ್ಲಿನ ಬ್ರಿಗೇಡ್ ಮಿಲೇನಿಯಂ ಎನ್ ಕ್ಲೇವ್ ನಲ್ಲಿದೆ. ಇಂಡಿಯನ್ ಮ್ಯೂಸಿಕ್ ಎಕ್ಸ್ ಪಿರಿಯನ್ಸ್ (ಐಎಂಇ) ಭಾರತದ ಮೊದಲ ಸಂವಾದಾತ್ಮಕ ಸಂಗೀತ ವಸ್ತುಸಂಗ್ರಹಾಲಯವಾಗಿದೆ. ಈ ಲಾಭರಹಿತ ಇಂಡಿಯನ್ ಮ್ಯೂಸಿಕ್ ಎಕ್ಸ್ ಪಿರಿಯನ್ಸ್ ಟ್ರಸ್ಟ್ ಅನ್ನು ಬ್ರಿಗೇಡ್ ಗ್ರೂಪ್ ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಹಲವಾರು ಕಾರ್ಪೋರೇಟ್ ಹಾಗೂ ಲೋಕೋಪಕಾರಿಗಳ ಸಹಕಾರದಿಂದ ಇದನ್ನು ಸ್ಥಾಪನೆಗೊಂಡಿದೆ. ಇನ್ನು ಈ ಐಎಂಇ ಹೌಸ್ ಸ್ಟೇಟ್ –ಆಫ್-ದಿ ಆರ್ಟ್ ಇಂಟರ್ ಆ್ಯಕ್ಟಿವ್ ಎಕ್ಸಿಬಿಟ್ ಎರಿಯಾ, ಸೌಂಡ್ ಗಾರ್ಡನ್, ಲರ್ನಿಂಗ್ ಸೆಂಟ್ ಎಂಬ ಮೂರು ವಿಭಾಗಗಳನ್ನು ಹೊಂದಿದೆ.

ಎಕ್ಸಿಬಿಟ್ ಎರಿಯಾದ 8 ವಿಷಯಾಧರಿತ ಗ್ಯಾಲರಿಗಳು ಭಾರತೀಯ ಸಂಗೀತದ ವಿವಿಧ ಅಂಶಗಳನ್ನು ಪ್ರದರ್ಶಿಸುತ್ತದೆ,ಇನ್ನು ಇನ್ ಸ್ಟ್ರುಮೆಂಟ್ ಗ್ಯಾಲರಿಯಲ್ಲಿ 100ಕ್ಕೂ ಹೆಚ್ಚು ಸಂಗೀತ ಉಪಕರಣಗಳ, ಮೂರು ಮಿನಿ ಥಿಯೇಟರ್, ಹಾಗೂ ಅನೇಕ ಕಂಪ್ಯೂಟರ್ ಆಧರಿತ ಸಂವಾದಾತ್ಮಕ ಅಳವಡಿಕೆಗಳು ಭೇಟಿ ನೀಡುವವರಿಗೆ ಸಂಗೀತದ ಪ್ರಕ್ರೀಯೆಯನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಇನ್ನು ಸೌಂಡ್ ಗಾರ್ಡನ್ ಸಂಗೀತ ಶಿಲ್ಪಗಳನ್ನು ಹೊಂದಿದ್ದು ಇದು ಭೇಟಿ ನೀಡುವವರಿಗೆ ಧ್ವನಿಯ ತತ್ವಗಳನ್ನು ಪರಿಚಯಿಸುತ್ತದೆ. ಈ ಲರ್ನಿಂಗ್ ಸೆಂಟರ್ ಉತ್ತಮ ಗುಣಮಟ್ಟದ ಸಂಗೀತ ಶಿಕ್ಷಣವನ್ನು ತನ್ನ ಔಟ್ ರೀಚ್ ಪ್ರೋಗ್ರಾಂ ಮೂಲಕ ಐಎಂಇ ಹಾಗೂ ಸ್ಕೂಲ್ ಗೆ ತಲುಪಿಸುವಲ್ಲಿ ಮುಂಚೂಣಿಯಲ್ಲಿದೆ. ಇವೆಲ್ಲದರ ಜತೆಗೆ ಐಎಂಇ ಹೌಸ್ ರೂಪ್ ಟಾಪ್ ಆಂಪಿಥಿಯೇಟರ್, ಪರ್ಫಾಮೆನ್ಸ್ ಥಿಯೇಟರ್, ಸೆಮಿನಾರ್ ಹಾಲ್ ಅನ್ನು ಹೊಂದಿದೆ. ಹಾಗೂ ಸಂಗೀತ ಕಾರ್ಯಕ್ರಮ, ಬೇಸಿಗೆ ಶಿಬಿರ, ಮಾತುಕತೆಗಳು, ಕಾರ್ಯಾಗಾರಗಳು ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳನ್ನು ಐಎಂಇ ಆಯೋಜಿಸುತ್ತದೆ.

ಮ್ಯೂಸಿಯಂ ಇದನ್ನು ಆಚರಿಸಲಿದೆ, ಐಎಂಇ ಸಂಗೀತ ಶಿಕ್ಷಣ ಮತ್ತು ಸಂಶೋಧನೆಯ ಕೇಂಧ್ರವಾಗುವ ಗುರಿ ಹೊಂದಿದೆ. ಕಲಾವಿದರು ಮತ್ತು ಕಲಾ ಪ್ರಿಯರಿಗೆ ಸಂಗೀತವನ್ನು ಅನುಭವಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆConclusion:Video sent from mojo
ETV Bharat Logo

Copyright © 2024 Ushodaya Enterprises Pvt. Ltd., All Rights Reserved.