ETV Bharat / state

ದೇಶದಲ್ಲಿರುವ ಒಂದು ಮಿಲಿಯನ್​ನಷ್ಟು ನಕಲಿ ವೈದ್ಯರಿಗೆ ಬ್ರೇಕ್​ ಹಾಕಿ: ಸರ್ಕಾರಕ್ಕೆ ಭಾರತೀಯ ವೈದ್ಯಕೀಯ ಸಂಘ ಆಗ್ರಹ

author img

By

Published : Nov 17, 2022, 7:57 PM IST

ನಕಲಿ ವೈದ್ಯರ ಹಾವಳಿ ನಿಲ್ಲಬೇಕಾದರೆ ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ಸರ್ಕಾರಕ್ಕೆ ಆಗ್ರಹಿಸಿದರು.

indian medical association press meet
ಭಾರತೀಯ ವೈದ್ಯಕೀಯ ಸಂಘದಿಂದ ಪತ್ರಿಕಾಗೋಷ್ಠಿ

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಘವು ವಿಶ್ವದ ಅತಿದೊಡ್ಡ ವೈದ್ಯರ ಸಂಘವಾಗಿದ್ದು, ಆಧುನಿಕ ವೈದ್ಯ ಪದ್ಧತಿಯನ್ನು ವೃತ್ತಿಯಾಗಿ ಸ್ವೀಕರಿಸಿರುವ ಭಾರತದ ವೈದ್ಯರ ಸ್ವಯಂ ಸೇವಾ ಸಂಸ್ಥೆಯಾಗಿದೆ. ಇದರಡಿಯಲ್ಲಿ 3 ಲಕ್ಷ ವೈದ್ಯರು 686 ಜಿಲ್ಲೆಯ 1745 ಶಾಖೆಗಳ ಮೂಲಕ ಸದಸ್ಯತ್ವ ಹೊಂದಿದ್ದಾರೆ. ಅದರಲ್ಲಿ ಕರ್ನಾಟಕದ 180 ಶಾಖೆಗಳು ಹಾಗೂ ನಮ್ಮ 28000 ಸದಸ್ಯರುಗಳು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರ ಸುಧಾರಿಸಲು ಸರ್ಕಾರಗಳಿಗೆ ವೈದ್ಯ ಮತ್ತು ರೋಗಿಗಳ ಸಂಬಂಧ ಗಟ್ಟಿಗೊಳಿಸುವ ಜವಾಬ್ದಾರಿ ಇದೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ ಶಿವಕುಮಾರ್ ಬಿ ಲಕ್ಕೋಲ್ ಹೇಳಿದರು.

ಗುರುವಾರ ನಗರದ ಪ್ರೆಸ್​ ಕ್ಲಬ್​ನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಮುದಾಯ ಆರೋಗ್ಯದಲ್ಲಿ ವೈದ್ಯರು ಭಾಗವಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಳ್ಳಿಯ ಕಡೆ ಕೊಂಡೊಯ್ಯಬೇಕು. ವೈದ್ಯ ಬರಹಗಾರರ ಸಮಿತಿಯ ಮುಖಾಂತರ ಸಾರ್ವಜನಿಕರಿಗೆ ಸಾಮಾನ್ಯ ಖಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಕೈಪಿಡಿಗಳನ್ನು ಪ್ರಕಟಿಸಬೇಕು‌. ನಮ್ಮ ದೇಶದಲ್ಲಿ ಕುಟುಂಬ ವೈದ್ಯರ ಸೇವೆಯು ಅತ್ಯವಶ್ಯಕ. ಈಗಿನ ತಜ್ಞವೈದ್ಯರ ಹಾಗೂ ಕಾರ್ಪೊರೇಟ್ ಸಂಸ್ಕೃತಿಯಿಂದಾಗಿ ವೈದ್ಯಕೀಯ ಸೇವೆ ಜನಸಾಮಾನ್ಯರ ಕೈಗೆಟುಕದಂತಾಗಿದೆ. ರೋಗಿಯನ್ನು ಅತಿ ಹತ್ತಿರದಿಂದ ಸಂಪೂರ್ಣವಾಗಿ ನೋಡುವ ಕುಟುಂಬವನ್ನು ಮುಖ್ಯವಾಹಿನಿಗೆ ತರುವ ಸಮಯ ಬಂದಿದೆ. ಈ ನಿಟ್ಟಿನಲ್ಲಿ ಕುಟುಂಬ ವೈದ್ಯಶಾಸ್ತ್ರ, ವೈದ್ಯ ಪದ್ಧತಿಯನ್ನು ಹೊಸದಾಗಿ ಸ್ನಾತಕೋತ್ತರ ಪದವಿಗಳಲ್ಲಿ ಸೃಷ್ಟಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ನಕಲಿ ವೈದ್ಯರ ಹಾವಳಿ: ಅಧಿಕೃತ ಅಧ್ಯಯನದ ಪ್ರಕಾರ ನಮ್ಮ ದೇಶದಲ್ಲಿ ನೋಂದಾಯಿಸಿದ ಅನರ್ಹ ವೈದ್ಯರು ಒಂದು ಮಿಲಿಯನಷ್ಟಿದ್ದು, ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇವರ ಉಪಟಳ ನಿಲ್ಲಬೇಕಾದರೆ ಸರ್ಕಾರ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ವೈದ್ಯರ ಕೊರತೆ: ದೇಶದಲ್ಲಿ ವೈದ್ಯರ ಕೊರತೆ ಇದ್ದು, ಗ್ರಾಮೀಣ ಪ್ರದೇಶಗಳಿಗೆ ಸೇವೆ ಸಲ್ಲಿಸಲು ವೈದ್ಯರು ಹಿಂದೇಟು ಹಾಕುತ್ತಾರೆ. ಅಲ್ಲದೇ ಇರುವ ಖಾಸಗಿ ವೈದ್ಯರು ದುಬಾರಿ ಎನ್ನುವುದು ಸತ್ಯಕ್ಕೆ ದೂರವಾದದ್ದು. ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಹಲ್ಲೆಗಳು ವೈದ್ಯರ ಮಾನಸಿಕ ಬಲವನ್ನು ಕುಗ್ಗಿಸಿದೆ. ಜನರ ಆರೋಗ್ಯ ರಕ್ಷಣೆಗೆ ಅಹೋರಾತ್ರಿ ಹೋರಾಡುವವರಿಗೆ ಈ ಸ್ಥಿತಿ ಉಂಟಾಗಿದೆ. ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಸೂಕ್ತ ರಕ್ಷಣೆ ಓದಗಿಸುವುದರ ಜೊತೆಗೆ ಹಲ್ಲೆ ಮಾಡುವವರನ್ನು ಬೇಗನೆ ಬಂಧಿಸಿ ಶಿಕ್ಷಿಸುವ ಕಾನೂನು ಜಾರಿಗೊಳಿಸಲು ಮುಂದಾಗಬೇಕು ಎಂಬ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.

ಈ ವೇಳೆ ಕಾರ್ಯದರ್ಶಿ ಡಾ.ಬಿ .ಪಿ ಕರುಣಾಕರ, ಡಾ. ಶ್ರೀನಿವಾಸ್ ಎಸ್, ಡಾ.ಪವನ್ ಕುಮಾರ್ ಪಾಟೀಲ್, ಡಾ. ಮಧುಸೂಧನ್ ಕರಿಗನೂರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬಳ್ಳಾರಿಯಲ್ಲಿ ನಕಲಿ ವೈದ್ಯನ ಕ್ಲಿನಿಕ್​ ಮೇಲೆ ಅಧಿಕಾರಿಗಳ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.