ETV Bharat / state

ಅಂಚೆ ಇಲಾಖೆಯ 12,828 ಗ್ರಾಮೀಣ ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನ - ಉದ್ಯೋಗ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ

ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

india Post Vacancy in for  Gramin Dak Sevak

author img

By

Published : May 22, 2023, 2:27 PM IST

ಬೆಂಗಳೂರು: ಭಾರತೀಯ ಅಂಚೆ ಸೇವೆಯಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್​ ಸೇವಕ್​ ಉದ್ಯೋಗ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ ಒಟ್ಟು 12,828 ಹುದ್ದೆಗಳಿವೆ. ಬ್ರಾಂಚ್​ ಪೋಸ್ಟ್​ ಮಾಸ್ಟರ್​ (ಬಿಪಿಎಂ) ಅಸಿಸ್ಟೆಂಟ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​​ (ಎಬಿಪಿಎಂ) ಸೇರಿದಂತೆ ಹಲವು ಹುದ್ದೆಗಳಿವೆ. 10 ನೇ ತರಗತಿ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು ಅರ್ಜಿ ಸಲ್ಲಿಕೆ, ವೇತನ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ: ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದೇಶಾದ್ಯಂತ ಈ ಹುದ್ದೆಗಳ ಅರ್ಜಿ ಹಾಕಬಹುದು. ಕರ್ನಾಟಕಕ್ಕೆ 48 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ತುಂಬಿರಬೇಕು. ಗರಿಷ್ಟ 40 ವರ್ಷಗಳಾಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ತಿಗಳಿಗೆ 5 ವರ್ಷ, ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲ ಚೇತನ, ತೃತೀಯ ಲಿಂಗಿಗಳಿಗೆ ಯಾವುದೇ ಅರ್ಜಿ ಶುಲ್ಕ ನಿಗದಿಸಿಲ್ಲ. ಇತರೆ ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ. ಅರ್ಜಿ ಶುಲ್ಕವನ್ನು ಆನ್​ಲೈನ್​ ಮೂಲಕ ಸಲ್ಲಿಕೆ ಮಾಡಬೇಕಾಗಿದೆ.

ಗ್ರಾಮೀಣ ಡಾಕ್​ ಸೇವಕ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​ (ಬಿಪಿಎಂ) ಹುದ್ದೆಗೆ 12,000-29,380ರೂವರೆಗೆ ಗ್ರಾಮೀಣ ಡಕ್​ ಸೇವಕ್​ ಅಸಿಸ್ಟೆಂಟ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್​​ (ಎಬಿಪಿಎಂ) ಹುದ್ದಗೆ 10000-24470ರೂವರೆಗೆ ವೇತನ ನಿಗದಿಸಲಾಗಿದೆ.

ಮೇ 22 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 11 ಆಗಿದೆ. ಅರ್ಜಿ ತಿದ್ದುಪಡಿಗೆ ಜೂನ್​ 12ರಿಂದ 14ರವರೆಗೆ ಸಮಯವಿದೆ.

ಈ ಹುದ್ದೆ ಕುರಿತ ಸಂಪೂರ್ಣ ವಿವರ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಈ indiapost.gov.in ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಅಂಚೆ ಇಲಾಖೆಯ ಹುದ್ದೆಗಳು: ಗ್ರಾಮೀಣ ಡಾಕ್ ಸೇವಕ್ (ಜಿಪಿ- ಜಿಡಿಎಸ್) ಭಾರತೀಯ ಅಂಚೆ ಇಲಾಖೆಯಿಂದ ನೇಮಕಗೊಂಡ ಸರ್ಕಾರಿ ಉದ್ಯೋಗವಾಗಿದೆ. ಭಾರತೀಯ ಸಂವಹನ ಸಚಿವಾಲಯದ ವಿಭಾಗವಾದ ಅಂಚೆ ಇಲಾಖೆಯು ಜಿಡಿಎಸ್ ಆನ್‌ಲೈನ್ ಎಂಗೇಜ್‌ಮೆಂಟ್ ಮೂಲಕ ಗ್ರಾಮೀಣ ಡಾಕ್ ಸೇವಕರನ್ನು ನೇಮಿಸಿಕೊಳ್ಳುತ್ತದೆ. ಗ್ರಾಮ ಪಂಚಾಯಿತಿಯ ಸಂಪೂರ್ಣ ಅಂಚೆ ಜಾಲದ ಉಸ್ತುವಾರಿಯನ್ನು ಬ್ರಾಂಚ್​ ಪೋಸ್ಟ್​ ಮಾಸ್ಟರ್ ಕಾರ್ಯ ನಿರ್ವಹಿಸುತ್ತಾರೆ. ಅಸಿಸ್ಟೆಂಟ್​ ಬ್ರಾಂಚ್​ ಪೋಸ್ಟ್​ ಮಾಸ್ಟರ್ ಅಂಚೆ ಕಛೇರಿಯ ದಕ್ಷ ಕಾರ್ಯಾಚರಣೆಗಳಲ್ಲಿ ಬ್ರಾಂಚ್​ ಪೋಸ್ಟ್​ ಮಾಸ್ಟರ್​​ಗೆ ಇವರು ಸಹಾಯ ಮಾಡುತ್ತಾರೆ

ಇದನ್ನೂ ಓದಿ: ₹2,000 ನೋಟಿನ ಕಥೆ ಮುಗಿದರೂ ಕಾಫಿನಾಡ ಯುವಕನಿಗೆ ಸ್ಮರಣೀಯ ನೆನಪು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.