ETV Bharat / state

ಬೆಂಗಳೂರು: ಹೊಟೇಲ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ; ಯುವಕನ ವಿರುದ್ಧ ಎಫ್‌ಐಆರ್‌ - ಬೆಂಗಳೂರು

ಡಿಸೆಂಬರ್​ 30ರಂದು ಬೆಂಗಳೂರಿನ ಹೊಟೇಲೊಂದರಲ್ಲಿ ಆರೋಪಿಯು ಯುವತಿಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಪ್ರಕರಣ ದಾಖಲು
ಪ್ರಕರಣ ದಾಖಲು
author img

By ETV Bharat Karnataka Team

Published : Jan 18, 2024, 11:48 AM IST

ಬೆಂಗಳೂರು: ಹೊಟೇಲ್‌ಗೆ ಬಂದಿದ್ದ ಯುವತಿಯನ್ನು ಅಸಭ್ಯವಾಗಿ ಸ್ಪರ್ಶಿಸಿ ಲೈಂಗಿಕ‌ ಕಿರುಕುಳ ನೀಡಿದ ಆರೋಪದಡಿ ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಡಿಸೆಂಬರ್ 30ರ ಸಂಜೆ ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿರುವ ಹೊಟೇಲ್‌ನಲ್ಲಿ ಘಟನೆ ನಡೆದಿದೆ. ಜನವರಿ 10ರಂದು ಹೊಟೇಲ್ ಕ್ಯಾಶಿಯರ್ ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೋಟೆಲ್‌ಗೆ ಬಂದಿದ್ದ ಮೂವರು ಯುವಕರು ದೋಸೆ ತಿನ್ನುತ್ತಾ ಕೆಲಕಾಲ ಅಲ್ಲಿಯೇ ನಿಂತು ಹರಟೆ ಹೊಡೆಯುತ್ತಿದ್ದರು. ಇದೇ ವೇಳೆ ಹೊಟೇಲ್‌ಗೆ ಬಂದಿದ್ದ ಯುವತಿ ಕ್ಯಾಶ್ ಕೌಂಟರ್ ಸಮೀಪ ನಿಂತಿದ್ದಾಗ ಆರೋಪಿಗಳ ಪೈಕಿ ಒಬ್ಬ ಉದ್ದೇಶಪೂರ್ವಕವಾಗಿ ಆಕೆಯನ್ನು ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದಾನೆ. ಆತನ ದುಷ್ಕೃತ್ಯವನ್ನು ಉಳಿದಿಬ್ಬರು ಆರೋಪಿಗಳು ನೋಡಿ ನಗುತ್ತಾ ನಿಂತಿರುವುದು ಹೊಟೇಲ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಆರೋಪಿಯ ಕೃತ್ಯವನ್ನು ಪ್ರತಿರೋಧಿಸಿದ್ದ ಯುವತಿ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಜನರು ಜಮಾಯಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ದೂರು ಸ್ವೀಕರಿಸಿರುವ ವಿಜಯನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಮಹಿಳೆಯ ಕಾರಿನ ಬಳಿ ವ್ಯಕ್ತಿಯಿಂದ ಅಸಭ್ಯ ವರ್ತನೆ: ಮಹಿಳೆಯೊಬ್ಬರ ಕಾರಿಗೆ ಅಡ್ಡಲಾಗಿ ನಿಂತ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಭಾಗಮನೆ ಟೆಕ್​ಪಾರ್ಕ್​ ಸಮೀಪದ ಸರ್ವೀಸ್​​ ರಸ್ತೆಯಲ್ಲಿ ಜನವರಿ 4ರಂದು ಗುರುವಾರ ನಡೆದಿತ್ತು. ಈ ಕುರಿತು ಸಂತ್ರಸ್ತೆ ಸಾಮಾಜಿಕ ಜಾಲತಾಣದಲ್ಲಿ ತನಗಾದ ಕಹಿ ಅನುಭವ ಹಂಚಿಕೊಂಡಿದ್ದರು. ನಗರ ಪೊಲೀಸ್​ ಆಯುಕ್ತ ಬಿ.ದಯಾನಂದ ಈ ಕುರಿತು ತನಿಖೆ ನಡೆಸುವಂತೆ ಮಹಾದೇವಪುರ ಠಾಣಾ ಪೊಲೀಸರಿಗೆ ಸೂಚಿಸಿದ್ದರು.

ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯ ಕಾರು ಸುತ್ತುವರಿದು ಅಸಭ್ಯ ವರ್ತನೆ: ಮಹಾದೇವಪುರದಲ್ಲಿ ಘಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.