ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ತುಸು ಏರಿಕೆಯಾಗಿದೆ. ಕಳೆದ ಮೂರು ದಿನದಿಂದ ಎರಡಂಕಿಯಲ್ಲಿದ್ದ ಸೋಂಕಿನ ಸಂಖ್ಯೆ ಗುರುವಾರ ಮೂರಂಕಿ ತಲುಪಿದೆ. 109 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. 1,792 ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಶೇ. 0.34 ಮತ್ತು ಸಾವಿನ ಪ್ರಮಾಣ ಶೇ.1.83ರಷ್ಟಿದೆ. ಇದುವರೆಗೆ 39.45 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು 40,044 ಮಂದಿ ಮೃತರಾಗಿದ್ದಾರೆ. ಗುರುವಾರ 117 ಜನರು ಗುಣಮುಖರಾಗಿದ್ದು, ಇಲ್ಲಿಯ ತನಕ ಗುಣಮುಖರಾದವರ ಸಂಖ್ಯೆ 39.03 ಲಕ್ಷಕ್ಕೇರಿದೆ.
ಬೆಂಗಳೂರು ನಗರದಲ್ಲಿ 74 ಹಾಗೂ ಬೆಳಗಾವಿಯಲ್ಲಿ 11 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 15 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಶೂನ್ಯಕ್ಕಿಳಿದಿದೆ. 13 ಜಿಲ್ಲೆಗಳಲ್ಲಿ ಸೋಂಕಿನ ಸಂಖ್ಯೆ ಒಂದಂಕಿಯಲ್ಲಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಕಂದಕಕ್ಕೆ ಉರುಳಿದ ಖಾಸಗಿ ಬಸ್, ಐವರು ಪ್ರಯಾಣಿಕರು ಗಂಭೀರ
ರಾಜಧಾನಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ. ಗುರುವಾರ 32,015 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 8,960 ರ್ಯಾಪಿಡ್ ಆ್ಯಂಟಿಜೆನ್ ಹಾಗೂ 23,055 ಜನರಿಗೆ ಆರ್‌ಟಿ-ಪಿಆರ್ ಪರೀಕ್ಷೆ ನಡೆಸಲಾಗಿದೆ.