ETV Bharat / state

ನಾಳೆ ವೀರ ಸಾವರ್ಕರ್ ಮೇಲ್ಸೇತುವೆ ಲೋಕಾರ್ಪಣೆ - ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್

ಬೆಂಗಳೂರು ಯಲಹಂಕದ ಡೈರಿ ಸರ್ಕಲ್ ಬಳಿಯ ನಿರ್ಮಿಸಲಾಗಿರುವ ವೀರ ಸಾವರ್ಕರ್ ಮೇಲ್ಸೆತುವೆಯನ್ನು ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಲೋಕಾರ್ಪಣೆಗೊಳಿಸಲಿದ್ದಾರೆ.

dsads
ಯಲಹಂಕದಲ್ಲಿ ನಾಳೆ ವೀರ ಸಾವರ್ಕರ್ ಸೇತುವೆ ಉದ್ಘಾಟನೆ
author img

By

Published : May 27, 2020, 6:05 PM IST

ಬೆಂಗಳೂರು: ಯಲಹಂಕದ ಡೈರಿ ಸರ್ಕಲ್ ಬಳಿ 34 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಮೇಲ್ಸೆತುವೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಉದ್ಘಾಟಿಸಲಿದ್ದಾರೆ.

ನಾಳೆ ವೀರ ಸಾವರ್ಕರ್ ಸೇತುವೆ ಉದ್ಘಾಟನೆ

ಈ ಬಗ್ಗೆ ಮಾತನಾಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಸಾವರ್ಕರ್ ಹೆಸರಿಗೆ ಪ್ರತಿಪಕ್ಷದ ಮುಖಂಡರಿಂದ ವಿರೋಧ ವ್ಯಕ್ತವಾಗಿದೆ. ಆದರೆ ಅವರ ಹೋರಾಟದ ಇತಿಹಾಸ ತಿಳಿದವರು ಆ ರೀತಿ ಮಾತನಾಡಲ್ಲ. ನಾಳೆ ವೀರ ಸವಾರ್ಕರ್ ಜನ್ಮದಿನಾಚರಣೆ ಪ್ರಯುಕ್ತ ಮೇಲ್ಸೇತುವೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ನಾವು ಈಗಾಗಲೇ ಬಿಬಿಎಂಪಿಯಿಂದ ಅನುಮತಿ ಪಡೆದಿದ್ದೇವೆ ಎಂದರು.

ಈ ಮೇಲ್ಸೆತುವೆಯಿಂದ ಯಶವಂತಪುರ ಮಾರ್ಗವಾಗಿ ಯಲಹಂಕ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಾಹನಗಳ ದಟ್ಟನೆ ಇಲ್ಲದೆ ತಲುಪಬಹುದು. ಮೇಲ್ಸೆತುವೆಯಲ್ಲಿ ನಾಲ್ಕು ಪಥಗಳಿದ್ದು, ಸರ್ವಿಸ್ ರಸ್ತೆ ಸಹ ನಿರ್ಮಿಸಲಾಗಿದೆ. 400 ಮೀಟರ್ ಉದ್ದ, 17 ಮೀಟರ್ ಅಗಲ ವಿಸ್ತೀರ್ಣವನ್ನು ಹೊಂದಿದೆ. 2017 ಸೆಪ್ಟೆಂಬರ್​ನಿಂದ ಕಾಮಗಾರಿ ಪ್ರಾರಂಭವಾಗಿದ್ದು, ನಾಳೆ ಅವರ ಜನ್ಮದಿನದ ಪ್ರಯುಕ್ತ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.