ETV Bharat / state

ಮಕ್ಕಳ ಸಂಚಾರ ಪೊಲೀಸ್ ಉದ್ಯಾನವನ ಉದ್ಘಾಟನೆ... ಇದರ ವಿಶೇಷತೆ ಏನು ಗೊತ್ತಾ? - ಬಸವಾರಾಚ್ ಬೊಮ್ಮಾಯಿ, ಡಿಜಿ ಪ್ರವೀಣ್ ಸೂದ್, ಟ್ರಾಫಿಕ್ ಆಯುಕ್ತ ರವಿಕಾಂತೇಗೌಡ

ಸೇಂಟ್ ಮಾರ್ಕ್ಸ್ ರಸ್ತೆಯ ಎಸ್.ಬಿ.ಐ. ವೃತ್ತದ ಬಳಿ ನಗರ ಸಂಚಾರ ಪೊಲೀಸರು ವಾಸ್ವಾನಿ ಸಂಸ್ಥೆಯ ಸಹಯೋಗದೊಂದಿಗೆ ಮಕ್ಕಳ ಸಂಚಾರ ಪೊಲೀಸ್ ಉದ್ಯಾನವನ್ನ ಇಂದು ಗೃಹ ಸಚಿವ ಬಸವಾರಾಜ್​ ಬೊಮ್ಮಾಯಿ, ಡಿಜಿ ಪ್ರವೀಣ್ ಸೂದ್, ಟ್ರಾಫಿಕ್ ಆಯುಕ್ತ ರವಿಕಾಂತೇಗೌಡ ಉದ್ಘಾಟಿಸಿದ್ದಾರೆ.

inauguration-of-the-childrens-traffic-police-park
ಗೃಹ ಸಚಿವ ಬಸವಾರಾಜ್​ ಬೊಮ್ಮಾಯಿ
author img

By

Published : Mar 10, 2020, 12:56 AM IST

ಬೆಂಗಳೂರು: ಸೇಂಟ್ ಮಾರ್ಕ್ಸ್ ರಸ್ತೆಯ ಎಸ್.ಬಿ.ಐ. ವೃತ್ತದ ಬಳಿ ನಗರ ಸಂಚಾರ ಪೊಲೀಸರು ವಾಸ್ವಾನಿ ಸಂಸ್ಥೆಯ ಸಹಯೋಗದೊಂದಿಗೆ ಮಕ್ಕಳ ಸಂಚಾರ ಪೊಲೀಸ್ ಉದ್ಯಾನವನ್ನ ಸೋಮವಾರ ಗೃಹ ಸಚಿವ ಬಸವಾರಾಜ್​​ ಬೊಮ್ಮಯಿ, ಡಿಜಿ ಪ್ರವೀಣ್ ಸೂದ್, ಟ್ರಾಫಿಕ್ ಆಯುಕ್ತ ರವಿಕಾಂತೇಗೌಡ ಉದ್ಘಾಟಿಸಿದರು.

ಮಕ್ಕಳ ಸಂಚಾರ ಪೊಲೀಸ್ ಉದ್ಯಾನವನ ಉದ್ಘಾಟನೆ

ಚಿಕ್ಕ ವಯಸ್ಸಿನಿಂದಲೇ ಮಕ್ಕಳ ಮನಸ್ಸಿನಲ್ಲಿ ಟ್ರಾಫಿಕ್ ಬಗ್ಗೆ ಅರಿವು ಮೂಡಿಸಲು ಈ ಮಕ್ಕಳ ಟ್ರಾಫಿಕ್ ಪಾರ್ಕ್​ನ್ನು ಮಾಡಲಾಗಿದೆ. ಇಲ್ಲಿ ಟ್ರಾಫಿಕ್ ಸಿಗ್ನಲ್, ಟ್ರಾಫಿಕ್ ನಿಯಮದ ಅರಿವು , ರಸ್ತೆಯನ್ನು ಉಪಯೋಗಿಸುವ ರೀತಿ, ಸಂಚಾರ ನಿಯಮಗಳನ್ನು ಅರ್ಥಮಾಡಿಕೊಂಡು ಅನುಸರಿಸುವಂತೆ ಮಕ್ಕಳನ್ನು ಪ್ರೇರೇಪಿಸುವ ಸಲುವಾಗಿ, ರಸ್ತೆಯಲ್ಲಿ ಸುರಕ್ಷತೆಯನ್ನು ಪಾಲಿಸುವ ಕೌಶಲ್ಯ ಬೆಳೆಸಲು ರಸ್ತೆಗಳ ಮಾರ್ಕಿಂಗ್‌ಗಳು, ಕಡ್ಡಾಯ ಮತ್ತು ಮಾಹಿತಿ ಚಿಹ್ನೆಗಳು, ಸಿಗ್ನಲ್ ಲೈಟ್​ಗಳನ್ನ ಪಾರ್ಕ್‌ನಲ್ಲಿ ಸ್ಥಾಪಿಸಲಾಗಿದೆ.

ಇನ್ನು ಗೃಹ ಸಚಿವ ಬಸವಾರಾಜ್ ಬೊಮ್ಮಾಯಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಪ್ರದೇಶಗಳ ಸಂಚಾರ ದಟ್ಟಣೆ ನಿಯಂತ್ರಿಸಿ ಪಾರ್ಕಿಂಗ್ ಪ್ರದೇಶ ಸೇರಿ ಹಲವು ಸೌಲಭ್ಯ ಕಲ್ಪಿಸಿ, ಸುಗಮ ಹಾಗೂ ಸರಳವಾಗಿ ವಾಹನ ಸಂಚರಿಸಲು ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ನಿತ್ಯ 5 ಸಾವಿರ ವಾಹನಗಳು ರಸ್ತೆಗಿಳಿಯುತ್ತಿದ್ದು, ಇದರ ಜತೆಗೆ ಜನ ಸಂಖ್ಯೆಯ ಪ್ರಮಾಣವೂ ಏರಿಕೆಯಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸುವುದು ಸಂಚಾರ ಪೊಲೀಸರಿಗೆ ಸವಾಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.