ETV Bharat / state

ಸಾವರ್ಕರ್ ಅವರ ಜನ್ಮದಿನದಂದು 'ಟೆಂಪಲ್ ಆಫ್ ಡೆಮಾಕ್ರಸಿ' ಲೋಕಾರ್ಪಣೆ: ಬಿ. ಎಲ್. ಸಂತೋಷ್

ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಂದು ಸಾವರ್ಕರ್ ಸಮಗ್ರ ಸಂಪುಟ 6 - ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು.

inauguration-of-temple-of-democracy-on-savarkar-birthday-bl-santosh
ಸಾವರ್ಕರ್ ಅವರ ಜನ್ಮದಿನದಂದು 'ಟೆಂಪಲ್ ಆಫ್ ಡೆಮಾಕ್ರಸಿ' ಲೋಕಾರ್ಪಣೆ: ಬಿ.ಎಲ್. ಸಂತೋಷ್
author img

By

Published : May 21, 2023, 7:07 PM IST

ಬೆಂಗಳೂರು: ದೆಹಲಿಯಲ್ಲಿ 'ಟೆಂಪಲ್ ಆಫ್ ಡೆಮಾಕ್ರಸಿ'ಯನ್ನು ಸಾವರ್ಕರ್ ಅವರ ಜನ್ಮದಿನದಂದು ಲೋಕಾರ್ಪಣೆಗೊಳ್ಳುತ್ತಿದೆ. ಅವರ ಉತ್ಕಟ ದೇಶಪ್ರೇಮದ ಪ್ರತೀಕವಾಗಿ ಅಂದು ದೇಶದ ಜನರಿಗೆ ಸಮರ್ಪಣೆ ಮಾಡಲಾಗುತ್ತಿದೆ. ಅವರನ್ನು ಸರ್ವಾಧಿಕಾರಿ ಎಂದು ಜರಿದವರಿಗೆ ತಕ್ಕ ಉತ್ತರ ಕೊಡಲು ಕೇಂದ್ರದಲ್ಲಿ ತಕ್ಕ ವ್ಯಕ್ತಿಗಳು ಕುಳಿತಿದ್ದಾರೆ ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಪ್ರತಿಪಾದಿಸಿದರು.

ಸಾವರ್ಕರ್ ಸಾಹಿತ್ಯ ಸಂಘ ಹಾಗೂ ದಿ ಮಿಥಿಕ್ ಸೊಸೈಟಿ ವತಿಯಿಂದ ಸಾವರ್ಕರ್ ಸಮಗ್ರ ಸಂಪುಟ 6 - ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು ಪುಸ್ತಕ ಲೋಕಾರ್ಪಣೆ ಸಮಾರಂಭ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್​​ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದ ಬಿ. ಎಲ್. ಸಂತೋಷ್ ಸಾವರ್ಕರ್ ಎಂದೂ ಸತ್ಯವನ್ನು ಮುಚ್ಚಿಡಲಿಲ್ಲ. ಅದರೆ ಅವರ ತತ್ವಗಳನ್ನು ಮುಚ್ಚಿಡುವ ಪ್ರಯತ್ನ ನಡೆಯಿತು ಎಂದರು.

ಶಿವಾಜಿ, ಸಾವರ್ಕರ್, ನೇತಾಜಿಯನ್ನು ಒಂದು ಚಿಂತನೆಯ ಕಡೆ ನೂಕುವ, ಪರದೆ ಹಾಕುವ ಕೆಲಸ ಮಾಡಲಾಯಿತು. ಆದರೆ ಇವರ ವಿಚಾರಗಳ ಪ್ರವಾಹವನ್ನು ಎಂದೂ ಶಾಶ್ವತವಾಗಿ ತಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಇಂದು ಇಬ್ಬರೂ ಮಹನಿಯರು ಎಲ್ಲರಿಗೂ ಅರ್ಥವಾಗುತ್ತಿದ್ದಾರೆ. ಅವರ ಚಿಂತನೆಗಳನ್ನು ಬಹುತೇಕ ಮಂದಿ ಅಳವಡಿಸಿಕೊಳ್ಳಲಾಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದ್ರು.

ಸಾವರ್ಕರ್ ಸಮಗ್ರ ಸಂಪುಟ 6 ಪುಸ್ತಕ ಬಿಡುಗಡೆ ಕಾರ್ಯಕ್ರಮ

ಜಗತ್ತಿಗೆ ಮೋಸ ಮಾಡಿದವರು ಬ್ರಿಟಿಷರು, ಅದನ್ನು ಇಲ್ಲೂ ಮಾಡಲು ಪ್ರಯತ್ನಿಸಿದರು. ಅಪಾತ್ರರಿಗೆ ಸರ್ಕಾರದ ಪ್ರಯತ್ನದಿಂದ ಮೂರೂ ಮಹಾನ್ ವ್ಯಕ್ತಿಗಳಾದ ಸಾವರ್ಕರ್, ನೇತಾಜಿ ಮತ್ತು ಸರ್ದಾರ್ ಪಟೇಲ್​ರನ್ನು ಯಶಸ್ವಿಯಾಗಿ ಮರೆ ಮಾಚಲು ಬ್ರಿಟಿಷರ ಬಂಟರು ಪ್ರಯತ್ನಿಸಿದರು. ನೆಹರೂ ಕೆಲವೇ ತಿಂಗಳುಗಳು ಜೈಲಿನಲ್ಲಿ ಇದ್ದರೂ ದೊಡ್ಡದಾಗಿ ಬಿಂಬಿಸಲಾಯಿತು ಎಂದು ಬಿ ಎಲ್​ ಸಂತೋಷ್​ ಬೇಸರ ವ್ಯಕ್ತಪಡಿಸಿದರು.

ಒಳ್ಳೆಯ ನಾಳೆಗಳ ಕಡೆ ಸಾಗುತ್ತಿದ್ದೇವೆ: ಸಾವರ್ಕರ್ ಅವರನ್ನು ನೇಣು ಬಿಗಿಯುವ ಜಾಗದ ನೇರ ಮೇಲಿನ ಕೊಠಡಿಯಲ್ಲಿ ಚೀತ್ಕಾರ ಕೇಳುವ ರೀತಿಯಲ್ಲಿ ಬೇಕೆಂದು ಇಡಲಾಗಿತ್ತು. ಆದರೆ ಸಮಚಿತ್ತ, ದೇಶದ ಬಗೆಗಿನ ಉತ್ಕಟ ಪ್ರೇಮವನ್ನು ಸ್ವಲ್ಪವೂ ಅಲುಗಾಡಿಸಲು ಆಗಲಿಲ್ಲ. ಯಾರಿಗೋ ಬೇಸರವಾಗುತ್ತದೆ ಎಂದು ಇತಿಹಾಸದಲ್ಲಿ ಇದನ್ನು ಮರೆಮಾಚಲಾಯಿತು. ಆದರೆ ಈಗ ವೈಚಾರಿಕವಾಗಿ ದೇಶ ಮುಂದುವರೆಯುತ್ತಿದ್ದು, ಒಳ್ಳೆಯ ನಾಳೆಗಳ ಕಡೆ ಸಾಗುತ್ತಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೀರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಮಾತನಾಡಿ, ಸಾವರ್ಕರ್ ಯಾವಾಗಲೂ ವಿವಾದಾತ್ಮಕ ವ್ಯಕ್ತಿಯಾಗಿ ಉಳಿದಿದ್ದರು. ಕಾರಣ ಅವರ ರಾಷ್ಟ್ರೀಯವಾದ ಮತ್ತು ಹಿಂದುತ್ವ ಸಿದ್ಧಾಂತ. ಅವರು ತೀರಿಕೊಂಡ 57 ವರ್ಷಗಳ ನಂತರ ಅವರನ್ನು ಗುರುತಿಸಲಾಗುತ್ತಿದೆ. ಆದರೆ ಇಷ್ಟು ವರ್ಷಗಳ ನಂತರ ನಾವು ಹಿಂದೂಗಳೆಂದು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ. ಇಂದಿಗೂ ಸಹ ನಾವು ಅಸುರಕ್ಷಿತ ಭಾವನೆ ಹೊಂದಿದ್ದೇವೆ ಎಂದು ಹೇಳಿದ್ರು.

ಲೋಕಮಾನ್ಯ ತಿಲಕ್ ಮತ್ತು ಸಾವರ್ಕರ್ ಸಿಂಧೂ ನದಿಯಿಂದಲೇ ನಮ್ಮ ಸಂಸ್ಕೃತಿ ಪ್ರಾರಂಭ, ಇದು ನಮ್ಮ ಪಿತೃಭೂಮಿ ಮತ್ತು ಪುಣ್ಯ ಭೂಮಿ ಎಂದು ಹೇಳಿದ್ದಾರೆ. ಈ ನೆಲದಲ್ಲಿ ನಾಸ್ತಿಕರಾಗಿರುವವರನ್ನು ಹಿಂದೂ ಎಂದು ಕರೆಯಲಾಗುತ್ತದೆ. ಅನೇಕ ನ್ಯಾಯಾಲಯದ ತೀರ್ಪು ಕೂಡ ಇದನ್ನು ಪುನರುಚ್ಚರಿಸಿದೆ. ಸ್ವಾತಂತ್ರ್ಯಕ್ಕೂ ಮೊದಲು ಮುಸ್ಲಿಂ ಲೀಗ್ ಶೇ. 40ರಷ್ಟು ಪ್ರಾತಿನಿಧ್ಯವನ್ನು ಒತ್ತಾಯಿಸುತ್ತಿತ್ತು ಮತ್ತು ಕಾಂಗ್ರೆಸ್ ಅದನ್ನು ತಕ್ಷಣವೇ ಒಪ್ಪಿಕೊಂಡಿತ್ತು.

ಸಾವರ್ಕರ್ ಪ್ರಕಾರ ಹಿಂದುತ್ವವೇ ಭಾರತತ್ವ. ಕೆಲವು ಶಕ್ತಿಗಳು ಯಾವಾಗಲೂ ದೇಶವನ್ನು ವಿಭಜಿಸಲು ಬಯಸುತ್ತವೆ. ಎರಡು ವಿಭಿನ್ನ ಧರ್ಮಗಳು ತಮ್ಮ ಆಲೋಚನೆಗಳು ಮತ್ತು ನಂಬಿಕೆಗಳಲ್ಲಿ ಸಂಪೂರ್ಣವಾಗಿ ವಿರುದ್ಧವಾಗಿರುವಾಗ ಬಹುಸಂಖ್ಯಾತರ ನಂಬಿಕೆ ಮುಖ್ಯ, ಆದ್ದರಿಂದ ರಾಷ್ಟ್ರದ ಒಳಿತಿಗಾಗಿ ಹಿಂದುತ್ವವು ರಾಷ್ಟ್ರೀಯ ಮಾನದಂಡವಾಗಬೇಕು ಎಂದು ಹೇಳಿದರು.

ಸಾವರ್ಕರ್​​​​ರನ್ನು ಶ್ರೇಷ್ಠರ ಪಟ್ಟಿಯಲ್ಲಿ ಸೇರಿಸಬೇಕು: ಸಾವರ್ಕರ್ ಅವರನ್ನು ರಾಹುಲ್ ಗಾಂಧಿ ಹಿಟ್ಲರ್ ಎಂದು ಕರೆಯುತ್ತಿದ್ದಾರೆ. ಆದರೆ ಅವರೇ ತಮ್ಮ ಸ್ವಂತ ಕ್ಷೇತ್ರದಿಂದ ಗೆಲ್ಲಲು ಸಾಧ್ಯವಾಗದೆ ಕೇರಳಕ್ಕೆ ಓಡಿ ಹೋಗಿ ಹೇಡಿಯಂತೆ ಬದುಕುತ್ತಿದ್ದಾರೆ. ಇತರ ದೇಶಗಳಲ್ಲಿ ಭಾರತ ಮತ್ತು ಹಿಂದೂ ಧರ್ಮದ ವಿರುದ್ಧ ದ್ವೇಷವನ್ನು ಹರಡುತ್ತಿದ್ದಾರೆ. ಆದರೆ ಸಾವರ್ಕರ್ ಎಂದಿಗೂ ತಮ್ಮ ಜನರ ಮೇಲೆ ಹಿಂಸೆಯನ್ನು ಪ್ರೋತ್ಸಾಹಿಸಲಿಲ್ಲ, ಅವರು ಎಂದಿಗೂ ಕೋಮುವಾದಿಯಾಗಿರಲಿಲ್ಲ, ಇದು ಅವರ ಜೀವನದ ಹಲವು ನಿದರ್ಶನಗಳಲ್ಲಿ ಕಂಡುಬಂದಿದೆ. ಇದಕ್ಕೆ ಉತ್ತರವಾಗಿ ಸಾರ್ವಕರ್​​ ಹೆಸರನ್ನು ಶ್ರೇಷ್ಠರ ಪಟ್ಟಿಯಲ್ಲಿ ಸೇರಿಸಬೇಕು ಎಂದು ಹೇಳಿದರು.

ಕೇರಳ ಸ್ಟೋರಿ ಕೇವಲ ಒಂದು ರಾಜ್ಯದ ಕಥೆಯಲ್ಲ, ಇದು ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ ವಾಸ್ತವ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ನೈಜ ಇತಿಹಾಸದ ಬಗ್ಗೆ ತಿಳಿ ಹೇಳಬೇಕು ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡಬೇಕು. ತಮ್ಮನ್ನು, ಕುಟುಂಬವನ್ನು ಮತ್ತು ಸಮಾಜವನ್ನು ರಕ್ಷಿಸಿಕೊಳ್ಳಲು ಅವರಿಗೆ ಪ್ರೇರೇಪಿಸಬೇಕು ಎಂದು ಹೇಳಿದರು.

ಮರಾಠ ಸಾಹಿತ್ಯದ ಶ್ರೇಷ್ಠ ಲೇಖಕ ಸಾವರ್ಕರ್: ಚಿಂತಕ ಡಾ. ಜಿ. ಬಿ. ಹರೀಶ ಮಾತನಾಡಿ, ಸಾವರ್ಕರ್ ಬಗೆಗೆ ಸಮಗ್ರ ಸಾಹಿತ್ಯದ ಅವಶ್ಯಕತೆ ಇತ್ತು, ಅದು ಇಂದು ಒಂದು ಹಂತಕ್ಕೆ ತಲುಪಿದೆ. ತಮ್ಮ ಮರಣಶಯ್ಯೆಯಲ್ಲಿ ಸಾವರ್ಕರ್ ಸಮಗ್ರ ಸಂಪುಟಗಳನ್ನು ರಚಿಸಿದರು. ಅವರ ಸಾಹಿತ್ಯ ಉನ್ನತವಾಗಿದ್ದು, ದೇಶದ ಸಮಕಾಲೀನರ ಲೇಖಕರ ಸಾಲಿಗೆ ಅವರು ಸೇರುತ್ತಾರೆ. ಆಚಾರ್ಯ ಅತ್ರಿ ಜ್ಞಾನೇಶ್ವರರ ನಂತರ ಮರಾಠ ಸಾಹಿತ್ಯದ ಶ್ರೇಷ್ಠ ಲೇಖಕ ಸಾವರ್ಕರ್ ಎಂದು ವ್ಯಾಖ್ಯಾನಿಸಿದ್ದಾರೆ ಎಂದು ತಿಳಿಸಿದರು.

ಗಾಂಧಿ ಹತ್ಯೆಯ ಆರೋಪದಲ್ಲಿ 13 ತಿಂಗಳು ಅವರನ್ನು ಬಂಧಿಸಿ ಅವರ ಪುಸ್ತಕಗಳನ್ನು, ಸಾಹಿತ್ಯವನ್ನು ಜಪ್ತಿ ಮಾಡಿ ನಾಶಪಡಿಸಲಾಯಿತು. ನೆಹರೂ ಅವರಿಗೆ ತಾವೇ ಶ್ರೇಷ್ಠ ರಾಜಕೀಯ ಸಾಹಿತಿ ಎಂದು ಬಿಂಬಿಸಿಕೊಳ್ಳುಲು ಹೀಗೆ ಪ್ರಯತ್ನ ನಡೆಸಿದರು. ಇದು ದೇಶಕ್ಕೆ ಮಾಡಿದ ದ್ರೋಹ ಎಂದು ಅಭಿಪ್ರಾಯಪಟ್ಟರು. ಸಾವರ್ಕರ್ ಅವರು ಉತ್ತಮ ನಾಟಕಾರರಾಗಿದ್ದರು. ರವೀಂದ್ರ ನಾಥ್ ಟ್ಯಾಗೋರ್ ಅವರನ್ನು ಕೂಡ ಅವರು ಹೊಗಳಿ ಬರೆದಿದ್ದಾರೆ.

ಇದನ್ನೆಲ್ಲವನ್ನೂ ಒಳಗೊಂಡಂತೆ ಒಟ್ಟು 10 ಸಂಪುಟಗಳು ಆಗಲಿವೆ ಅವರ ಸಾಹಿತ್ಯ ನಷ್ಟವಾಗದಿದ್ದರೆ 20 ಸಂಪುಟಗಳು ಆಗುತ್ತಿದ್ದವು. ಇಂದು ಬಿಡುಗಡೆ ಮಾಡಿದ 6ನೇ ಸಂಪುಟ ಶಿವಾಜಿ ಮಹಾರಾಜರಿಗೆ ಸಮರ್ಪಿತ ಮಾಡಿದ್ದೇವೆ. ಅವರ ಎಲ್ಲ ಸಂಪುಟಗಳೂ ದೇಶಪ್ರೇಮ, ರಾಷ್ಟ್ರ ಪ್ರೇಮ, ಹೋರಾಟ, ಸ್ವಾಭಿಮಾನ ಮುಂತಾದ ಸಕಾರಾತ್ಮಕ ವಿಚಾರಗಳ ಕುರಿತು ಪ್ರಚುರಪಡಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನ ಆರ್ಭಟ.. ಮಳೆಗೆ ಮಹಿಳೆ ಬಲಿ, 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.