ETV Bharat / state

ಬಿಳೇಕಹಳ್ಳಿಯಲ್ಲಿ ಅನಂತ ಕುಮಾರ್ ಕ್ರೀಡಾಂಗಣ ಲೋಕಾರ್ಪಣೆ

author img

By

Published : Dec 18, 2022, 8:26 PM IST

ಬೊಮ್ಮನಹಳ್ಳಿಯ ಬಿಳೇಕಹಳ್ಳಿ ವಿಜಯಾಬ್ಯಾಂಕ್ ಬಡಾವಣೆಯಲ್ಲಿ ದಿವಂಗತ ಹೆಚ್​ಎನ್ ಅನಂತ್ ಕುಮಾರ್ ಕ್ರೀಡಾಂಗಣವನ್ನು ಶಾಸಕ ಎಂ ಸತೀಶ್ ರೆಡ್ಡಿ ಮತ್ತು ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸಿದರು.

Etv BharatInauguration of  HN Ananth Kumar Stadium
ದಿವಂಗತ ಹೆಚ್​ಎನ್ ಅನಂತ್ ಕುಮಾರ್ ಕ್ರೀಡಾಂಗಣವನ್ನು ಶಾಸಕ ಎಂ ಸತೀಶ್ ರೆಡ್ಡಿ ಮತ್ತು ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸಿದರು.
ದಿವಂಗತ ಹೆಚ್​ಎನ್ ಅನಂತ್ ಕುಮಾರ್ ಕ್ರೀಡಾಂಗಣ ಉದ್ಘಾಟನೆ

ಬೆಂಗಳೂರು: ಬೊಮ್ಮನಹಳ್ಳಿಯ ಬಿಳೇಕಹಳ್ಳಿ ವಿಜಯಾಬ್ಯಾಂಕ್ ಬಡಾವಣೆಯಲ್ಲಿ ದಿವಂಗತ ಹೆಚ್​ಎನ್ ಅನಂತ್ ಕುಮಾರ್ ಕ್ರೀಡಾಂಗಣವನ್ನು ಶಾಸಕ ಎಂ ಸತೀಶ್ ರೆಡ್ಡಿ ಮತ್ತು ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸಿದರು.

ಶಾಸಕ ಸತೀಶ್​ ರೆಡ್ಡಿ ಮಾತನಾಡಿ 5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಗ್ಯಾಲರಿ, ಸುತ್ತಲೂ ತಂತಿ ಬೇಲಿ ಒಳಗೊಂಡ ಕ್ರೀಡಾಂಗಣವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ದಿ ಅನಂತ್ ಕುಮಾರ್ ಇದ್ದಿದ್ದರೆ ಬಹಳಷ್ಟು ಸಂತಸ ವ್ಯಕ್ತಪಡಿಸುತಿದ್ದರು ಎಂದು ಸ್ಮರಿಸಿದರು.

ನಂತರ ಮಾತನಾಡಿ ಬೇಗೂರು ನ್ಯಾನಪನಹಳ್ಳಿ ಬಳಿ 14 ಎಕರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ತಲೆ ಎತ್ತಲಿದೆ, ಒಳಾಂಗಣ ಹೊರಾಂಗಣ ಕ್ರೀಡೆಗಳಿಗೆ ಅದು ಸಾಕ್ಷಿಯಾಗಲಿದೆ ಎಂದರು. 400ಕೋಟಿಗೂ ಅಧಿಕ ಅನುದಾನವನ್ನು ಬೊಮ್ಮನಹಳ್ಳಿ ಭಾಗಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ ಕೊರೊನಾದಲ್ಲಿ ಉಚಿತವಾಗಿ ಲಸಿಕೆಯನ್ನು ಯಾವ ದೇಶವೂ ಭಾರತದಂತೆ ನೀಡಲಿಲ್ಲ. ನೂರು ಜನೌಷಧಿ ಕೇಂದ್ರಗಳನ್ನು ತೆರೆಯುವ ಮುಖಾಂತರ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ದಾಖಲೆ ಬರೆಯಲಿದೆ. ಈ ತಿಂಗಳು ಜಯನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ತೆರೆಯಲಾಗುತ್ತದೆ. ಅದೂ ಕೌಂಟರ್ ಇಲ್ಲದೆಯೇ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿದ್ಯಾನಿಧಿ ಯೋಜನೆಯಾಡಿ 8 ರಿಂದ ಪಿಯುಸಿವರೆಗೆ 75% ಅಂಕ ಗಳಿಸಿದವರಿಗೆ 5 ರಿಂದ 10ಸಾವಿರ ರೂ. ಚೆಕ್ ನೀಡಿ ಶುಲ್ಕ ಭರಿಸಲಾಗುವುದು ಎಂದರು. ಈ ಬಾರಿ ಚುನಾವಣೆಯಲ್ಲಿ ಸತೀಶಣ್ಣ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಮತದಿಂದ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್​ನಿಂದ ಮತ ಬ್ಯಾಂಕ್ ರಾಜಕಾರಣ: ನಂತರ ಮಾತನಾಡಿದ ಅವರು ಎಲ್ಲೆಲ್ಲಿ ಟೆರರ್​ರಿಸಂ ನಡೆದಿದೆಯೋ ಅಲ್ಲೆಲ್ಲಾ ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣವನ್ನು ಮಾಡಿದೆ. ಅದರ ಭಾಗವಾಗಿ ಮಂಗಳೂರು ಸ್ಪೋಟವನ್ನು ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಇದ್ದಾಗ ನಡೆಸಿರುವ ಭಯೋತ್ಪಾದಕ ದಾಳಿಗಳೆಷ್ಟು? ಹಾಗೆಯೇ ಬಿಜೆಪಿ ಆಡಳಿದಲ್ಲಿರುವಾಗ ನಡೆದಿರುವ ಭಯೋತ್ಪಾದಕ ದಾಳಿಗಳೆಷ್ಟು ಎನ್ನುವುದನ್ನ ನೋಡಿದಾಗ ಬಿಜೆಪಿ ಭಯೋತ್ಪಾದನೆಯನ್ನು ಹುಟ್ಟಡಗಿಸಿದೆ ಎಂಬುದು ಅರ್ಥವಾಗುತ್ತದೆ ಎಂದು ಕಾಂಗ್ರೆಸ್​ಗೆ ಟಾಂಗ್​ ಕೊಟ್ಟರು.

ಇದನ್ನೂ ಓದಿ:ಅಮೃತ ಕಾಲದ ಕನಸು ನನಸಾಗಿಸಲು 25 ವರ್ಷ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ: ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.