ETV Bharat / state

ದೇಶದ ಪ್ರಗತಿಗೆ ವಿಜ್ಞಾನ - ತಂತ್ರಜ್ಞಾನದ ಕೊಡುಗೆ ಅಪಾರ: ಸಚಿವ ಅಶ್ವತ್ಥನಾರಾಯಣ - ಮುಂದಿನ ವರ್ಷದಿಂದ ವಿಜ್ಞಾನ-ತಂತ್ರಜ್ಞಾನ ಇಲಾಖೆಯಿಂದಲೇ `ವಿಜ್ಞಾನ ದಿನ’ ಆಚರಣೆ: ಅಶ್ವತ್ಥನಾರಾಯಣ

ಮಕ್ಕಳ ಕಲಿಕೆಯಲ್ಲಿ ಮೂರರಿಂದ ಹನ್ನೆರಡನೇ ವರ್ಷದವರೆಗೆ ನಿರ್ಣಾಯಕ ಹಂತವಾಗಿದೆ. ಈ ಹಂತದಲ್ಲೇ ಮಕ್ಕಳು ಶೇ.85ರಷ್ಟು ಕಲಿಕೆ ನಡೆಯುತ್ತದೆ. ಆದ್ದರಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವೈಜ್ಞಾನಿಕ ಕಲಿಕೆಗೆ ಒತ್ತು ಕೊಡಲಾಗಿದೆ..

Science Day celebration from next year's Department of Science and Technology
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ 29ನೇ ವರ್ಷದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ
author img

By

Published : Feb 25, 2022, 10:06 PM IST

ಬೆಂಗಳೂರು: ಮುಂದಿನ ವರ್ಷದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದಲೇ ರಾಜ್ಯದಾದ್ಯಂತ`ರಾಷ್ಟ್ರೀಯ ವಿಜ್ಞಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಶುಕ್ರವಾರ ಇಲ್ಲಿ ಏರ್ಪಡಿಸಿದ್ದ 29ನೇ ವರ್ಷದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ರಾಜ್ಯವು ಇಂದು ಗಳಿಸಿರುವ ಆರ್ಥಿಕ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪಾತ್ರ ಅಗಾಧವಾಗಿದೆ ಎಂದರು. ರಾಜ್ಯವು ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಮೊದಲಿನಿಂದಲೂ ದೇಶದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ನೂರಾರು ವರ್ಷಗಳ ಹಿಂದೆಯೇ ರಾಜ್ಯದಲ್ಲಿ ಭದ್ರ ಬುನಾದಿ ಬಿದ್ದಿದೆ. ರಾಜ್ಯವು ಸಾಧಿಸಿರುವ ಸಾಮಾಜಿಕ ಸುಧಾರಣೆಗಳ ಹಿಂದೆಯೂ ತಂತ್ರಜ್ಞಾನದ ಕೊಡುಗೆ ಇದೆ ಎಂದು ಬಣ್ಣಿಸಿದರು.

ಮಕ್ಕಳ ಕಲಿಕೆಯಲ್ಲಿ ಮೂರರಿಂದ ಹನ್ನೆರಡನೇ ವರ್ಷದವರೆಗೆ ನಿರ್ಣಾಯಕ ಹಂತವಾಗಿದೆ. ಈ ಹಂತದಲ್ಲೇ ಮಕ್ಕಳು ಶೇ.85ರಷ್ಟು ಕಲಿಕೆ ನಡೆಯುತ್ತದೆ. ಆದ್ದರಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವೈಜ್ಞಾನಿಕ ಕಲಿಕೆಗೆ ಒತ್ತು ಕೊಡಲಾಗಿದೆ ಎಂದು ಅಶ್ವತ್ಥನಾರಾಯಣ ನುಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಪರಿಷತ್ತಿನ ಅಧ್ಯಕ್ಷ ಗಿರೀಶ್ ಕಡ್ಲೇವಾಡ, ವಿಜ್ಞಾನಿ ಡಾ.ಅನುರಾಧಾ, ಕೆ.ವಿ.ಮಾಲಿನಿ, ಬಿ.ಎನ್. ಶ್ರೀನಾಥ್, ಶ್ರೀಮತಿ ಹರಿಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ಬಾಲವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ: ಉಕ್ರೇನ್​ನಿಂದ ಪಾರಾಗಲು 8 ಕಿ.ಮೀ. ನಡೆದು ಪೋಲೆಂಡ್ ಗಡಿಗೆ ಬಂದ 40 ಭಾರತೀಯ ವಿದ್ಯಾರ್ಥಿಗಳು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.