ETV Bharat / state

ನಾನು ಅಮೂಲ್ಯಗೆ ಇನ್ವೈಟ್‌ ಮಾಡಿರಲಿಲ್ಲ.. ಬೇರೆ ಯಾರು ಕರೆದಿದ್ದರೋ ಗೊತ್ತಿಲ್ಲ: ಇಮ್ರಾನ್ ಪಾಷ - ಪಾಕಿಸ್ತಾನ ಜಿಂದಾಬಾದ್ ಎಂಬ ಘೊಷಣೆ ಕೂಗಿದ ಅಮೂಲ್ಯ

ಇಂತಹ ದೇಶ ದ್ರೋಹಿಗಳಿಗೆ ಯಾರೂ ವೇದಿಕೆ ಕೊಡಲ್ಲ. ನಾವೂ ಕೊಡಲ್ಲ, ನಾನೇ ಪೊಲೀಸರಿಗೆ ಒಂದು ಕಂಪ್ಲೇಂಟ್ ಕೊಡುತ್ತೇನೆ. ಈ ತರ ಯಾಕೆ ಅಮೂಲ್ಯ ಘೋಷಣೆ ಕೂಗಿದ್ರು ಎಂಬ ಬಗ್ಗೆ ತನಿಖೆಯಾಗಬೇಕು. ಅಮೂಲ್ಯ ಹಿಂದೆ ಯಾರು ಇದ್ದಾರೆ ಅದರ ಬಗ್ಗೆ ತನಿಖೆಯಾಗಬೇಕು ಎಂದರು.

imran-pasha
ಇಮ್ರಾನ್ ಪಾಷ
author img

By

Published : Feb 21, 2020, 1:04 PM IST

ಬೆಂಗಳೂರು: ಸಿಎಎ ವಿರೋಧಿಸಿ ನಿನ್ನೆ ಪ್ರತಿಭಟನೆ ಇತ್ತು. ಈ ವೇಳೆ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಎಂಬ ಘೊಷಣೆ ಕೂಗಿದ್ದು ನಾವೇ ಹೋಗಿ ತಡೆದಿದ್ವಿ. ಅಮೂಲ್ಯ ಯಾಕೆ ಈ ರೀತಿ ಮಾಡಿದ್ದಾಳೆ ಅಂತ ಗೊತ್ತಿಲ್ಲ ಎಂದು ಪ್ರತಿಭಟನೆ ಆಯೋಜಿಸಿದ್ದ ಕಾರ್ಪೊರೇಟರ್ ಇಮ್ರಾನ್ ಪಾಷ ಹೇಳಿದ್ದಾರೆ.

ಎನ್‌ಆರ್‌ಸಿ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಿದ್ದು, ಇದನ್ನ ಎಫ್‌ಎಸ್‌ಎಂ ಸೇರಿ ವಿವಿಧ ಸಂಘಟನೆಯ ಮುಖಾಂತರ ಆಯೋಜನೆ ಮಾಡಿದ್ದೆವು. ನಾನು ಅಂತೂ ಅಮೂಲ್ಯಗೆ ಇನ್ವೈಟ್ ಮಾಡಿರಲಿಲ್ಲ. ಬೇರೆ ಯಾರು ಕರೆದಿದ್ದರೋ ಗೊತ್ತಿಲ್ಲ. ಅಮೂಲ್ಯಗೆ ವಾಲೆಂಟಿಯರ್ ಎಲ್ಲೇ ಹೋದ್ರು ವೇದಿಕೆ ಬಿಟ್ಟು ಕೊಡ್ತಾರೆ. ಹುಬ್ಬಳ್ಳಿ, ರಾಯಚೂರು, ಮೈಸೂರುನಲ್ಲಿಯೂ ಹೋಗಿ ಅಮೂಲ್ಯ ಸಿಎಎ ವಿರುದ್ಧದ ಸಮಾವೇಶ ಅಟೆಂಡ್ ಮಾಡಿದ್ದಾಳೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.