ಬೆಂಗಳೂರು: ಲಿಂಗಾಯತ ಮತ್ತು ವೀರಶೈವ ಧರ್ಮದ ನಡುವೆ ಭಿನ್ನಾಭಿಪ್ರಾಯ ಉಂಟು ಮಾಡಿ, ಕಾನೂನು ಬಾಹಿರ ಕೃತ್ಯ ನಡೆಸಲು ಪ್ರಚೋದನೆ ಮಾಡಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಅವಿನಾಶ್ ಭೂಸೀಕರ ಎಂಬಾತನ ವಿರುದ್ಧ, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ವೀರಶೈವ ಮಹಾಸಭಾದ ಕಾರ್ಯಕರ್ತ ಸಾಗರಹಳ್ಳಿ ನಟರಾಜ್ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರನ್ನು ನಿಂದಿಸಿ, ಫೇಸ್ಬುಕ್ಲ್ಲಿ ನಕಲಿ ಖಾತೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಈ ವ್ಯಕ್ತಿ ವಿಡಿಯೋ ಹರಿ ಬಿಟ್ಟಿದ್ದ.
ವೀರಶೈವ ಮಹಾಸಭಾದವರು ಲಿಂಗಾಯತ ಧರ್ಮದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ರಾಜಕೀಯ ಮುಖಂಡರು ಹಾಗೂ ಧರ್ಮದ ಅನುಯಾಯಿಗಳಲ್ಲಿ ಭಿನ್ನಾಭಿಪ್ರಾಯ ತರುವ ವಿಡಿಯೋ ಮಾಡಿದ್ದ.
- https://www.facebook.com/story.php?story_fbid=570934410199355&id=100018484036748
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿತ್ತು. ಹೀಗಾಗಿ ಸದ್ಯ ಧರ್ಮದ ಹೆಸರಿನಲ್ಲಿ ತಪ್ಪು ಮಾಹಿತಿ ಹರಡುತ್ತಿರುವ ಕಾರಣ ದೂರು ದಾಖಲಾಗಿದೆ.