ಬೆಂಗಳೂರು: ಭಾರತ ದೇಶವನ್ನು ಒಡೆದು ಹಿಂದುತ್ವ ಪ್ರತಿಪಾದಿಸುವ ಉದ್ದೇಶದಿಂದ ಪೌರತ್ವ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಆಪಾದಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರದ ದೀಪಾ ಆಸ್ಪತ್ರೆ ಬಳಿಯ ಮೈದಾನದಲ್ಲಿ ಬೆಂಗಳೂರು ಪೂರ್ವ ತಾಲೂಕು ಪ್ರಗತಿಪರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಜನ ವಿರೋಧಿ ಪೌರತ್ವ ಕಾಯ್ದೆ ಸಿಎಎ, ಎನ್ಆರ್ ಸಿ ಹಾಗೂ ಎನ್ ಪಿ ಆರ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ದೇಶದ ಸಂವಿಧಾನದ ರಚನೆಗೊಂಡಾಗ ಹದಿನಾಲ್ಕು ಶೇಕಡಾದಷ್ಟು ಮುಸ್ಲಿಮರು ಈ ದೇಶದಲ್ಲಿದ್ದರು. ಪ್ರಸ್ತುತ ಹದಿನೇಳರಷ್ಟು ಮುಸ್ಲಿಂ ಸಮುದಾಯದವರು ನಮ್ಮ ದೇಶದಲ್ಲಿದ್ದಾರೆ. ಅಂದು ಗಾಂಧಿಯವರ ತತ್ತ್ವದಂತೆ ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ 3 ಸಮುದಾಯಗಳು ಹಿಂದೂ, ಮುಸ್ಲಿಂ ಸಂಧಾನದಂತೆ ಈ ದೇಶದ ಅಸ್ತಿತ್ವ ಪಡೆದಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಚಿಂತಕಿ ಭವ್ಯ ನರಸಿಂಹ ಮೂರ್ತಿ, ಜಮಿಯತುಲ್ ಉಲಮ ಎ ಕರ್ನಾಟಕ ರಾಜ್ಯ ಅಧ್ಯಕ್ಷ ಮುಫ್ತಿ ಇಫ್ತೆಕಾರ್ ಅಹಮದ್ ಸಾಬ್ ಸೇರಿದಂತೆ ಎಲ್ಲ ಭಾಷಣಕಾರರು ಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದು, ಕೇಂದ್ರ ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.