ETV Bharat / state

ಐಎಂಎ ಸಂಸ್ಥೆಯಿಂದ ಪಡೆದ ದೇಣಿಗೆ ಹಿಂದಿರುಗಿಸುವ ನಿಲುವು ತಿಳಿಸಿ: ಹೈಕೋರ್ಟ್ - High Court Directs

ಐಎಂಎಯಿಂದ 10 ಕೋಟಿ ರೂ. ದೇಣಿಗೆ ಪಡೆದ ಸರ್ಕಾರಿ ಶಾಲೆಯ ಕಟ್ಟಡ ಹಾಗೂ ಅದರ ಚರಾಸ್ತಿ ಜಪ್ತಿ ಮಾಡುವ ಸಂಬಂಧ ಸಕ್ಷಮ ಪ್ರಾಧಿಕಾರ ಜೂ.30ರಂದು ಬರೆದಿರುವ ಪತ್ರ ಮತ್ತು ದೇಣಿಗೆ ರೂಪದಲ್ಲಿ ಪಡೆದಿರುವ ಹೂಡಿಕೆದಾರರ ಹಣವನ್ನು ಹಿಂಪಾವತಿಸುವ ಕುರಿತು ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

High Court
ಹೈಕೋರ್ಟ್
author img

By

Published : Jul 7, 2021, 10:30 PM IST

ಬೆಂಗಳೂರು: ಹೂಡಿಕೆದಾರರಿಗೆ ವಂಚಿಸಿರುವ ಐಎಂಎ ಸಂಸ್ಥೆ ರಕ್ಷಣೆಗೆ ಸರ್ಕಾರ ಆಸಕ್ತಿ ವಹಿಸಿರುವಂತೆ ಕಾಣುತ್ತಿದೆ ಎಂದು ಕಟುವಾಗಿ ಟೀಕಿಸಿರುವ ಹೈಕೋರ್ಟ್, ಐಎಂಎಯಿಂದ ಸರ್ಕಾರಿ ಶಾಲೆಗೆ ಪಡೆದಿರುವ 10 ಕೋಟಿ ರೂ. ದೇಣಿಗೆ ಮೊತ್ತವನ್ನು ಮರುಪಾವತಿಸುವ ಕುರಿತು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿದೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠೇವಣಿದಾರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆರ್. ರೋಷನ್ ಬೇಗ್ ಅವರ ಎಲ್ಲ ಸ್ಥಿರಾಸ್ತಿ, ಚರಾಸ್ತಿ, ಬ್ಯಾಂಕ್ ಖಾತೆಗಳು, ವಾಣಿಜ್ಯ ಆಸ್ತಿಗಳು, ಚಿನ್ನಾಭರಣ ಜಪ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ನಮೂದಿಸಿದ್ದ ವಿವರಗಳ ಮೇರೆಗೆ ಆಸ್ತಿಗಳ ಜಪ್ತಿ ಮಾಡಲಾಗುತ್ತದೆ. ಇನ್ನು ಸರ್ಕಾರಿ ಶಾಲೆಗೆ ಐಎಂಎ ಸಂಸ್ಥೆ ನೀಡಿರುವ ದೇಣಿಗೆ ಹಣವನ್ನು ಮರು ಪಾವತಿಸಲು ಸಾಧ್ಯವಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಆಕ್ಷೇಪಿಸಿದ ಪೀಠ, ದೇಣಿಗೆ ಪಡೆದುಕೊಂಡ ಹಣದ ಮೂಲ ಯಾವುದು? ಅದು ಹೂಡಿಕೆದಾರರ ಹಣ ಎಂಬುದನ್ನು ಸರ್ಕಾರ ಪರಿಶೀಲಿಸಿಲ್ಲವೇ?, ಹೂಡಿಕೆದಾರರ ಹಣ ದೇಣಿಗೆ ರೂಪದಲ್ಲಿ ಪಡೆದುಕೊಂಡಿದ್ದಾದರು ಹೇಗೆ? ಎಂದು ಪ್ರಶ್ನಿಸಿತು. ಅಲ್ಲದೇ ಮಾಜಿ ಸಚಿವರ ಆಸ್ತಿ ಜಪ್ತಿಗೆ ನ್ಯಾಯಾಲಯ ಐದಾರು ಆದೇಶಗಳನ್ನು ನೀಡಬೇಕಾಯಿತು. ಇವೆಲ್ಲ ನೋಡಿದರೆ ಸರ್ಕಾರ ಆರೋಪಿತ ಸಂಸ್ಥೆಯನ್ನು ರಕ್ಷಿಸಲು ಆಸಕ್ತಿ ಹೊಂದಿರುವಂತೆ ಕಾಣುತ್ತದೆ ಎಂದು ಕಟುವಾಗಿ ಟೀಕಿಸಿತು.

ಅಲ್ಲದೇ ಐಎಂಎಯಿಂದ 10 ಕೋಟಿ ರೂ. ದೇಣಿಗೆ ಪಡೆದ ಸರ್ಕಾರಿ ಶಾಲೆಯ ಕಟ್ಟಡ ಹಾಗೂ ಅದರ ಚರಾಸ್ತಿ ಜಪ್ತಿ ಮಾಡುವ ಸಂಬಂಧ ಸಕ್ಷಮ ಪ್ರಾಧಿಕಾರ ಜೂ.30ರಂದು ಬರೆದಿರುವ ಪತ್ರ ಮತ್ತು ದೇಣಿಗೆ ರೂಪದಲ್ಲಿ ಪಡೆದಿರುವ ಹೂಡಿಕೆದಾರರ ಹಣವನ್ನು ಹಿಂಪಾವತಿಸುವ ಕುರಿತು ಸರ್ಕಾರ ತನ್ನ ನಿಲುವನ್ನ ತಿಳಿಸಬೇಕು ಎಂದು ನಿರ್ದೇಶಿಸಿತು. ಇಲ್ಲದಿದ್ದಲ್ಲಿ ಸರ್ಕಾರದ ವೆಚ್ಚದಲ್ಲಿ ಬೇರೊಬ್ಬ ವಕೀಲರನ್ನು ನಿಯೋಜಿಸಿಕೊಳ್ಳುವಂತೆ ಸಕ್ಷಮ ಪ್ರಾಧಿಕಾರಕ್ಕೆ ಅನುಮತಿ ನೀಡಲಾಗುವುದು ಎಂದು ಎಚ್ಚರಿಕೆ ನೀಡಿತು.

ಸಕ್ಷಮ ಪ್ರಾಧಿಕಾರಿ ವಾದ:

ವಿಚಾರಣೆ ವೇಳೆ ಸಕ್ಷಮ ಪ್ರಾಧಿಕಾರಿಯಾದ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ ವಾದ ಮಂಡಿಸಿ, ವಿ.ಕೆ. ಓಬೇದುಲ್ಲಾ ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣ, ದುರಸ್ತಿ ಹಾಗೂ ಪಿಠೋಪಕರಣ ಖರೀದಿಗೆ ಐಎಂಎ ಸಂಸ್ಥೆ 10 ಕೋಟಿ ರೂ. ದೇಣಿಗೆ ನೀಡಿದೆ. ಅಲ್ಲದೇ 2 ವರ್ಷದ ಮಟ್ಟಿಗೆ ಶಾಲೆಯ ನಿರ್ವಹಣೆಗೆ 2.82 ಕೋಟಿ ರೂ. ವೆಚ್ಚ ಮಾಡಿದೆ. ಒಟ್ಟು 12.82 ಕೋಟಿ ರೂ. ಶಾಲೆಗೆ ನೀಡಲಾಗಿದೆ. ಇದೆಲ್ಲವೂ ಹೂಡಿಕೆದಾರರ ಹಣವಾಗಿದ್ದು, ಹಿಂಪಾವತಿಸಲು ಶಿಕ್ಷಣ ಇಲಾಖೆ ನಿರಾಕರಿಸಿದೆ.

ಈ ಹಿನ್ನೆಲೆಯಲ್ಲಿ ಶಾಲೆಯ ಕಟ್ಟಡ ಹಾಗೂ ಚರಾಸ್ತಿ ಜಪ್ತಿಗೆ ಅನುಮತಿ ಕೋರಿ ಜೂ.30ರಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ, ಸರ್ಕಾರದಿಂದ ಈವರೆಗೆ ಉತ್ತರ ಬಂದಿಲ್ಲ. ಹೀಗಾಗಿ, ಠೇವಣಿದಾರರ ಹಿತರಕ್ಷಣೆ ಕಾಯ್ದೆ ಅನ್ವಯ ಸರ್ಕಾರಿ ಶಾಲೆಯ ಕಟ್ಟಡ ಹಾಗೂ ಚರಾಸ್ತಿ ಜಪ್ತಿ ಮಾಡಲು ಸಕ್ಷಣ ಪ್ರಾಧಿಕಾರಕ್ಕೆ ಅಧಿಕಾರವಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಐಎಂಎ ಹಗರಣ : ಐಪಿಎಸ್ ಅಧಿಕಾರಿಗಳಾದ ನಿಂಬಾಳ್ಕರ್, ಅಜಯ್ ಹಿಲೋರಿಗೆ ಎದುರಾಯ್ತು ಸಂಕಷ್ಟ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.