ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನ ರಾಜ್ಯ ಸರ್ಕಾರ ಈಗಾಗ್ಲೇ ಸಿಬಿಐಗೆ ವರ್ಗಾವಣೆ ಮಾಡಿದೆ. ಹೀಗಾಗಿ ಸಿಬಿಐ ತಂಡ ಎಫ್ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಎಸ್‌ಐಟಿ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡ ಮತ್ತು ತನಿಖಾಧಿಕಾರಿ ಗಿರೀಶ್ ತಂಡ ಐಎಂಎ ಪ್ರಕರಣದಲ್ಲಿ ಮನ್ಸೂರ್ ಸೇರಿದಂತೆ ಹಲವಾರು ಮಂದಿಯನ್ನ ಬಂಧನ ಮಾಡಿದ್ರು. ಹೀಗಾಗಿ ಸಿಬಿಐ ಎಫ್ಐಆರ್ ದಾಖಲು ಮಾಡಿದ್ದು, ಈಗಾಗ್ಲೇ ಸಿಬಿಐ ತಂಡ ಎಸ್ಐಟಿಯಿಂದ ಮಾಹಿತಿ ಕಲೆ ಹಾಕಿದೆ.
ಎಫ್ಐರ್ನಲ್ಲಿ ಕಂಪನಿಯ ಮಾಲೀಕ ಮನ್ಸೂರ್ ಖಾನ್, ನಿರ್ದೇಶಕ ಹಾಗೂ ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ನಿರ್ದೇಶಕರಿಗೆ ಹಾಗೂ ಐಎಂಎಗೆ ಸಂಬಂಧಿಸಿದ ಇತರ 30 ಸಂಸ್ಥೆಗಳನ್ನ ಎಫ್ಐಆರ್ನಲ್ಲಿ ಉಲ್ಲೇಖ ಮಾಡಿ ತನಿಖೆಗೆ ಹೈದರಾಬಾದ್ ಹಾಗೂ ಬೆಂಗಳೂರು ಅಧಿಕಾರಿಗಳನ್ನು ಒಳಗೊಂಡ ತಂಡ ರಚನೆ ಮಾಡಿ, ಪ್ರಕರಣದ ಮಾಹಿತಿಯನ್ನು ಸಾಕ್ಷಿ ಸಮೇತ ಸಿಬಿಐ ಅಧಿಕಾರಿಗಳು ಕಲೆ ಹಾಕ್ತಿದ್ದಾರೆ.
ಏನಿದು ಪ್ರಕರಣ:
ಕಮರ್ಷಿಯಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಐಎಂಎ ಜ್ಯೂವೆಲರಿ ಮಾಲೀಕ ಮನ್ಸೂರ್ ಜ್ಯೂವೆಲರಿ ಮೇಲೆ ಹೂಡಿಕೆ ಮಾಡಿಸಿ ಪಂಗನಾಮ ಹಾಕಿದ್ದ. ಈ ಸಂಬಂಧ ಮೊದಲು ಕಮರ್ಷಿಯಲ್ ಠಾಣೆಯಲ್ಲಿ ದೂರು ದಾಖಲಾಗಿ, ನಂತ್ರ ಈ ಪ್ರಕರಣ ಗಂಭೀರವಾದ ಕಾರಣ ಎಸ್ಐಟಿಗೆ ವರ್ಗಾವಣೆಯಾಗಿತ್ತು. ಸಿಬಿಐಗೆ ಕೋರಿ ಹೈಕೋರ್ಟ್ಗೆ ಕೂಡ ಪಿಐಎಲ್ ಸಲ್ಲಿಕೆಯಾಗಿತ್ತು. ಸದ್ಯ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ನೀಡಿದೆ.