ETV Bharat / state

ಬೆಂಗಳೂರು: ಮನೆಗೆ ನುಗ್ಗಿ ಬಾಡಿಗೆದಾರ ಮಹಿಳೆಗೆ ಆವಾಜ್ - ಅಕ್ರಮವಾಗಿ ನುಗ್ಗಿ ಬಾಡಿಗೆದಾರ ಮಹಿಳೆಗೆ ಬೆದರಿಕೆ

ಹೆಚ್​​​​ಬಿಆರ್​​ ಲೀಔಟ್​ನಲ್ಲಿ ವಾಸವಿರುವ ಮಹಿಳೆಯ ಮನೆಗೆ 10 ರಿಂದ 15 ಜನರಿದ್ದ ಗುಂಪೊಂದು ನುಗ್ಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಮಹಿಳೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಗುಂಪು
Illegally rushed to house and threatening women
author img

By

Published : Apr 12, 2021, 1:37 PM IST

ಬೆಂಗಳೂರು: ಅಕ್ರಮವಾಗಿ ನುಗ್ಗಿ ವಾಸವಿದ್ದ ಬಾಡಿಗೆದಾರ ಮಹಿಳೆಗೆ 10 ರಿಂದ 15 ಜನರಿದ್ದ ಗುಂಪೊಂದು ಬೆದರಿಕೆ ಹಾಕಿ ತೊಂದರೆ ನೀಡಿರುವ ಆರೋಪ ಕೇಳಿ ಬಂದಿದೆ.

ಹೆಚ್​​​​ಬಿಆರ್​​ ಲೀಔಟ್​ನಲ್ಲಿ ವಾಸವಿರುವ ಪರ್ವೀನ್ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಮಾಲೀಕರಿಲ್ಲದ ವೇಳೆ ಮಹಮ್ಮದ್ ಸಲೀಂ ಎಂಬಾತ ಸೇರಿ 12 ಕ್ಕೂ ಅಧಿಕ ಮಂದಿ ಮನೆಗೆ ನುಗ್ಗಿ ಮಹಿಳೆಗೆ ತೊಂದರೆ ನೀಡಿದ್ದಾರೆ. ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂಬುದರ ಕುರಿತಂತೆ ಖಚಿತ ಮಾಹಿತಿ ಇಲ್ಲ.

ಘಟನೆಯ ಸಂಬಂಧ ಮಹಿಳೆ, ಮಹಮ್ಮದ್ ಸಲೀಂ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವು ವಿಡಿಯೋಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.