ಬೆಂಗಳೂರು: ಗುದನಾಳದಲ್ಲಿ ಕ್ಯಾಪ್ಸುಲ್ ಮಾದರಿಯಲ್ಲಿ ಚಿನ್ನ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುವ ಯತ್ನ ನಡೆಸಿದ ಐವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಆರೋಪಿಗಳಿಂದ 3 ಕೋಟಿ ರೂಪಾಯಿ ಮೌಲ್ಯದ 5 ಕೆ.ಜಿ ಚಿನ್ನ ಜಪ್ತಿ ಮಾಡಲಾಗಿದೆ.
ನವೆಂಬರ್ 7 ಮತ್ತು 8ರಂದು ಕುಬೈತ್, ದುಬೈ, ಶಾರ್ಜಾ, ಅಬುದಾಬಿಯಿಂದ ಬಂದ ಪ್ರಯಾಣಿಕರನ್ನು ತಪಾಸಣೆ ಮಾಡುವಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಐವರನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ಮಾಲು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಿಳೆಯರ ವ್ಯಾನಿಟ್ ಬ್ಯಾಗ್‌ನ ಹಿಡಿಕೆ ಮತ್ತು ಒಳಉಡುಪಿನಲ್ಲೂ ಚಿನ್ನ ಮರೆಮಾಚಿಡಲಾಗಿತ್ತು.
ಪ್ಯಾಂಟ್ ಜಿಪ್ಲೈನ್ನಲ್ಲಿ ಚಿನ್ನ: ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಹಾಗು ಮಾದಕ ವಸ್ತುಗಳನ್ನು ಸಾಗಣೆ ಮಾಡುವಾಗ ಪ್ರಯಾಣಿಕರು ಸಿಕ್ಕಿಬೀಳುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ನವೆಂಬರ್ 8ರಂದು ಬೆಳಕಿಗೆ ಬಂದ ಪ್ರಕರಣದಲ್ಲಿ ಆರೋಪಿ, ಪ್ಯಾಂಟ್ ಜಿಪ್ ಒಳಗಡೆ ಚಿನ್ನವನ್ನು ಮಾರೆಮಾಚಿಟ್ಟು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದನು. ಪ್ರಯಾಣಿಕನಿಂದ 18 ಲಕ್ಷ ರೂ ಮೌಲ್ಯದ 284 ಗ್ರಾಂ ಚಿನ್ನ ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ: ಪ್ಯಾಂಟ್ ಜಿಪ್ಲೈನ್ನಲ್ಲಿ ಮರೆಮಾಚಿ ಚಿನ್ನ ಸಾಗಣೆ, ಸಿಕ್ಕಿಬಿದ್ದ ಪ್ರಯಾಣಿಕ- ವಿಡಿಯೋ
ಚಾಕೊಲೆಟ್, ಸಾಕ್ಸ್ನಲ್ಲೂ ಚಿನ್ನ: ಮಂಗಳೂರು ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಪತ್ತೆ ಹಚ್ಚಿರುವ ಕಸ್ಟಮ್ಸ್ ಅಧಿಕಾರಿಗಳು, 42.90 ಲಕ್ಷ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ. ನವೆಂಬರ್ 9ರ ಗುರುವಾರ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಚಾಕೊಲೆಟ್, ಸಾಕ್ಸ್ನಲ್ಲೂ ಚಿನ್ನ ಕಳ್ಳ ಸಾಗಣೆ.. ಮಂಗಳೂರು ಏರ್ಪೋರ್ಟ್ನಲ್ಲಿ 42.90 ಲಕ್ಷ ಮೌಲ್ಯದ ಗೋಲ್ಡ್ ವಶಕ್ಕೆ