ETV Bharat / state

ವಿಲ್ ಸತ್ಯವಾಗಿದ್ದಲ್ಲಿ ಆಸ್ತಿಯಲ್ಲಿ ಸಮಾನ ಹಂಚಿಕೆ ಮಾಡಲಾಗಿದಿಯೇ ಎಂದು ಕೋರ್ಟ್​ ಪರಿಶೀಲಿಸಲಾಗದು: ಹೈಕೋರ್ಟ್ - ಮಾನಸಿಕ ಸ್ಥಿಮಿತತೆ

ಈ ಪ್ರಕರಣದಲ್ಲಿ ವಿಲ್​ದಾರರ ಸಹಿಯನ್ನು ಪರೀಕ್ಷೆ ಮಾಡಬಹುದು. ಇಲ್ಲವೇ ವಿಲ್​ ಮಾಡಿರುವವರು ಮಾನಸಿಕ ಸ್ಥಿಮಿತತೆಯನ್ನು ಸರಿಯಾಗಿತ್ತೆ ಎಂಬುದನ್ನು ಪರೀಕ್ಷೆಗೆ ಒಳಪಡಿಸಬಹುದಾಗಿದೆ. ಆದರೆ, ಆದರೆ, ಆಸ್ತಿ ಹಂಚಿಕೆ ಮಾಡುವ ಹಕ್ಕು ವಿಲ್​ದಾರರಿಗೆ ಇರಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

if-the-will-is-valid-then-the-court-cannot-examine-highcourt
ವಿಲ್ (ಉಯಿಲು) ಸತ್ಯವಾಗಿದ್ದಲ್ಲಿ ಆಸ್ತಿಯಲ್ಲಿ ಸಮಾನ ಹಂಚಿಕೆ ಮಾಡಲಾಗಿದಿಯೇ ಎಂದು ನ್ಯಾಯಾಲಯ ಪರಿಶೀಲಿಸಲಾಗದು: ಹೈಕೋರ್ಟ್
author img

By

Published : Mar 29, 2023, 10:15 PM IST

ಬೆಂಗಳೂರು: ವಿಲ್​ (ಉಯಿಲು​) ಸತ್ಯವಾಗಿರುವಾಗ ವಿಲ್​ದಾರರು ಮಕ್ಕಳಿಗೆ ಆಸ್ತಿಯನ್ನು ಸಮಾನ ಹಾಗೂ ನ್ಯಾಯಯುತವಾಗಿ ಹಂಚಿಕೆ ಮಾಡಲಾಗಿದಿಯೇ ಎಂಬುದನ್ನು ಪರಿಶೀಲನೆ ಮಾಡುವುದಕ್ಕೆ ನ್ಯಾಯಾಲಯ ಮಧ್ಯ ಪ್ರವೇಶ ಮಾಡಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ವಿಲ್ ಅ​ನ್ನು ಹೊರತುಪಡಿಸಿ ಆಸ್ತಿಯನ್ನು ಸಮಾನ ಹಂಚಿಕೆ ಮಾಡಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಎಸ್​. ಕೃಷ್ಣರಾವ್​ ಅವರು (ಅವರ ಕಾನೂನು ವಾರಸುದಾರರು) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ. ಅಲ್ಲದೆ, ವಿಲ್​ದಾರರ ಸಹಿ ನೈಜತೆ ಮತ್ತು ವಿಲ್​ ಮಾಡಿಸಿದ ಸಂದರ್ಭದಲ್ಲಿ ಅವರು ಮಾನಸಿಕ ಸಾಮರ್ಥ್ಯ ಸರಿಯಾಗಿತ್ತೆ ಎಂಬುದನ್ನು ಮಾತ್ರ ಪರಿಶೀಲನೆಗೊಳಪಡಿಸಿಲಿದೆ. ಆದರೆ, ಸಂವಿಧಾನ ಪರಿಚ್ಛೇದ 14ರ ಪ್ರಕಾರ ಸಮಾನತೆ ಹಕ್ಕಿನ ಮಾದರಿಯಲ್ಲಿ ಆಸ್ತಿ ಹಂಚಿಕೆ ಆಗಿದಿಯೇ ಎಂದು ಪರಿಶೀಲನೆಗೊಳಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಸುಪ್ರೀಂಕೋರ್ಟ್​ ಕವಿತಾ ಕನ್ವಾರ್​ ಮತ್ತು ಪಮೆಲ ಮೆಹ್ತಾ ಮತ್ತಿತರರ ಪ್ರಕರಣ ಉಲ್ಲೇಖಿಸಿರುವ ನ್ಯಾಯಪೀಠ, ಈ ಪ್ರಕರಣದಲ್ಲಿ ವಿಲ್​ದಾರರ ಸಹಿಯನ್ನು ಪರೀಕ್ಷೆ ಮಾಡಬಹುದು ಇಲ್ಲವೇ ವಿಲ್​ ಮಾಡಿರುವವರು ಮಾನಸಿಕ ಸ್ಥಿಮಿತತೆಯನ್ನು ಸರಿಯಾಗಿತ್ತೇ ಎಂಬುದನ್ನು ಪರೀಕ್ಷೆಗೆ ಒಳಪಡಿಸಬಹುದಾಗಿದೆ. ಆದರೆ, ಆಸ್ತಿ ಹಂಚಿಕೆ ಮಾಡುವ ಹಕ್ಕು ವಿಲ್​ದಾರರಿಗೆ ಇರಲಿದೆ. ಯಾರಿಗೆ ಎಷ್ಟು ಭಾಗ ಆಸ್ತಿ ನೀಡಬೇಕು ಎಂದು ವಿಲ್​ದಾರರು ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಜತೆಗೆ, ಈ ಸಂಬಂಧ ಸೂಚನೆ ನೀಡಲು ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ಆದೇಶಿಸಿದೆ.

ವಿಲ್ (ಉಯಿಲು)​ ಸ್ಪಷ್ಟವಿದೆ ಎಂದು ತಿಳಿಸಿರುವ ಸಂದರ್ಭದಲ್ಲಿ ಅದಕ್ಕೆ ಪುರಾವೆಗಳನ್ನು ಹುಡುಕಬೇಕಾದ ಅಗತ್ಯವಿಲ್ಲ. ಈ ಪ್ರಕರಣದಲ್ಲಿ ವಿಲ್​ನ ಸತ್ಯಾಸತ್ಯತೆಯನ್ನು ಪ್ರಶ್ನೆ ಮಾಡಿಲ್ಲ. ಇದಕ್ಕೆ ಸಂಬಂಧ ಪಟ್ಟದ ದಾಖಲೆಗಳನ್ನು ಹಾಜರು ಪಡಿಸಿ ನ್ಯಾಯಾಲಯದ ಮುಂದೆ ಪ್ರಶ್ನೆ ಮಾಡಬಹುದಾಗಿದೆ. ಹೀಗಾಗಿ ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು ? : ಮೂರ್ತಿ ರಾವ್​ ಎಂಬುವವರು 1981ಕ್ಕೂ ಮುನ್ನ ಬದುಕಿಕ್ಕಾಗ ವಿಲ್ ಅ​ನ್ನು ಬರೆದಿದ್ದಟಿದ್ದಾರೆ. ಅವರ ಪತ್ನಿ ರಂಗಮ್ಮ ಸಹಾ ಅದೇ ದಿನ ಸಹಿ ಹಾಕಿದ್ದಾರೆ. ಜತೆಗೆ, 1983ರಲ್ಲಿ ಮತ್ತೊಂದು ವಿಲ್​ ಬರೆದಿಟ್ಟಿದ್ದಾರೆ. ಸ್ಥಿರಾಸ್ತಿಗಳನ್ನು ಮಗನ ಹೆಸರಿಗೆ ಮತ್ತು ಚರಾಸ್ತಿಗಳನ್ನು ಉಡುಪಿ ಅದಮಾರು ಮಠದ ಆಜ್ಞೆಯಂತೆ ಒಡಹುಟ್ಟಿದ ಮಕ್ಕಳ ನಡುವೆ ಹಂಚಿಕೆ ಮಾಡಿಕೊಳ್ಳಲು ವಿಲ್​ನಲ್ಲಿ ತಿಳಿಸಿದ್ದರು. ಇದನ್ನು ಅರ್ಜಿದಾರರು ವಿಲ್​ದಾರರ ಮಗಳು ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮೂರ್ತಿ ಮತ್ತು ರಂಗಮ್ಮನವರ ಆಸ್ತಿಗಳಲ್ಲಿ ನಾಲ್ಕು ಮಕ್ಕಳು ನಾಲ್ಕು ಭಾಗಗಳಾಗಿ ಸಮಾನವಾಗಿ ಹಂಚಿಕೆ ಮಾಡಿಕೊಳ್ಳಬೇಕು ಎಂದು ಆದೇಶಿಸಿದೆ. ಇದನ್ನು ಪ್ರಶ್ನಿಸಿ ಕೃಷ್ಣರಾವ್​ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಇದನ್ನೂ ಓದಿ : ಅನಧಿಕೃತವಾಗಿ ಗೈರಾದವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗದಿದ್ದಾಗ ವೇತನ ಪಾವತಿಸಬೇಕು: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.