ETV Bharat / state

ಜೆಡಿಎಸ್ ಸರ್ಕಾರ ಬಂದ್ರೆ 5 ಸಿಲಿಂಡರ್​ ಉಚಿತ, ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕಲ್ ಮೊಪೆಡ್ ಬೈಕ್​ : ಹೆಚ್​ಡಿಕೆ ಘೋಷಣೆ - ಪಂಚರತ್ನ ರಥಯಾತ್ರೆ

ಜೆಡಿಎಸ್​ ಪಂಚರತ್ನ ರಥಯಾತ್ರೆ - ವಿದ್ಯಾರ್ಥಿನಿಯರಿಗೆ ಹೆಚ್​ಡಿಕೆ ಬಂಪರ್​ ಘೋಷಣೆ - ಮೊಪೆಡ್​ ಬೈಕ್​ ಕೊಡೋದಾಗಿ ಭರವಸೆ

Kumaraswamy spoke at the Pancharat Rath Yatra.
ಪಂಚರತ್ನ ರಥಯಾತ್ರೆಯಲ್ಲಿ ಕುಮಾರಸ್ವಾಮಿ ಮಾತನಾಡಿದರು.
author img

By

Published : Apr 8, 2023, 7:32 PM IST

Updated : Apr 8, 2023, 10:17 PM IST

ಜೆಡಿಎಸ್​ ಪಂಚರತ್ನ ರಥಯಾತ್ರೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಮಾತನಾಡಿದರು.

ಬೆಂಗಳೂರು: ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕಲ್ ಮೊಪೆಡ್ ದ್ವಿಚಕ್ರವಾಹನ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಚೇನಹಳ್ಳಿಯಲ್ಲಿ ಶನಿವಾರ ನಡೆದ ಪಂಚರತ್ನ ರಥಯಾತ್ರೆ ವೇಳೆ ಅವರು ಮಾತನಾಡಿ, ಬಡವರ ಹೆಣ್ಣು ಮಕ್ಕಳ ಕಣ್ಣೀರಿಗೆ ಶಾಶ್ವತ ಪರಿಹಾರ ನೀಡಬೇಕಿದೆ. ನಿಮ್ಮ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಭರವಸೆ ನೀಡಿದ ಅವರು, ಕೇಂದ್ರ ಸರ್ಕಾರದ ದುರಾಡಳಿತದಿಂದ ಸಿಲಿಂಡರ್​ಗಳ ಬೆಲೆ ಗಗನಕ್ಕೇರಿದೆ.. ನಾವು ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಐದು ಸಿಲಿಂಡರ್ ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದರು.

ನಾನು 2006ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಚೇನಹಳ್ಳಿ ಭಾಗವನ್ನು ಬಿಬಿಎಂಪಿಗೆ ಸೇರಿಸಿದ್ದೆ. ಹಾಗಾಗಿ ಈ ಭಾಗ ಈಗ ಅಭಿವೃದ್ಧಿ ಆಗುತ್ತಿದೆ. ನಿಮ್ಮ ಭವಿಷ್ಯಕ್ಕೆ ಸರ್ಕಾರದ ಆದಾಯ ಕಾರ್ಯಕ್ರಮ ನೀಡುತ್ತೇವೆ. ನಮಗೆ ಒಂದು ಬಾರಿ ಅಧಿಕಾರಕ್ಕೆ ಬರಲು ಅವಕಾಶ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.

ಜವರಾಯಿಗೌಡರು ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಕಳೆದ ಎರಡು ಮೂರು ಬಾರಿ ನಿಂತು ಅತ್ಯಲ್ಪ ಮತದಿಂದ ಸೋತಿದ್ದಾರೆ. ನಮ್ಮ ಒತ್ತಾಯಕ್ಕೆ ಮತ್ತೊಮ್ಮೆ ನಿಂತಿದ್ದಾರೆ ಅವರನ್ನು ಗೆಲ್ಲಿಸಿಕೊಡುವಂತೆ ಕೋರಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಏಕಾಂಗಿಯಾಗಿ ಹೋರಾಟ ನನ್ನದು. ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅಭಿಪ್ರಾಯ ಸ್ಪಷ್ಟಪಡಿಸಿದರು.

ಮೇ 10 ಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ.ಜವರಾಯಿಗೌಡರಿಗೆ ನಿಮ್ಮ ಆಶೀರ್ವಾದ ಕೇಳಲು ಬಂದಿದ್ದೇನೆ. ನಿಮ್ಮ ಬಡತನ ಹೋಗಲಾಡಿಸುವ ಕಾರ್ಯಕ್ರಮ ನಾವು ನೀಡಲಿದ್ದೇವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಏಳು ನಗರಸಭೆ, ಒಂದು ಪಟ್ಟಣ ಪಂಚಾಯಿತಿ ಬಿಬಿಎಂಪಿ ವ್ಯಾಪ್ತಿಗೆ ತಂದಿದ್ದೇನೆ. ಹಾಗಾಗಿ ಈಗ ಡಾಂಬರೀಕರಣ ಆಗಿದೆ ಎಂದರು. ಬೇರೆ ಪಕ್ಷಗಳ ಆಸೆ, ಆಮಿಷಕ್ಕೆ ಬಲಿಯಾಗಬೇಡಿ. ಅವರು ಕೊಡುತ್ತಿರುವ ಕುಕ್ಕರ್ ಬ್ಲಾಸ್ಟ್ ಆಗುತ್ತಿದೆ. ನಕಲಿ ಕುಕ್ಕರ್ ಹಾವಳಿಯಿಂದ ದೂರ ಇರುವಂತೆ ಹೆಚ್​ಡಿಕೆ ಜನರಿಗೆ ಸಲಹೆ ನೀಡಿದರು.

ಶ್ರೀನಿವಾಸಪುರಕ್ಕೆ ಪಂಚರತ್ನ ರಥಯಾತ್ರೆ:ಶ್ರೀನಿವಾಸಪುರಕ್ಕೆ ರಥಯಾತ್ರೆ ಆಗಮಿಸಿದ ವೇಳೆ ಕುಮಾರಸ್ವಾಮಿ ಅವರು ಮಾತನಾಡಿ, ನಾನು ಸಿಎಂ ಆಗಿದ್ದಾಗ ಪ್ಯಾಲೆಸ್ ಗ್ರೌಂಡಲ್ಲಿ ಹಕ್ಕುಪತ್ರ ನೀಡಲಾಯ್ತು.. ನೂರು ಕುಟುಂಬಕ್ಕೂ ಹೆಚ್ಚಿನ ಕುಟುಂಬಗಳಿಗೆ ಹಕ್ಕು ಪತ್ರ ಕೊಡುವ ತೀರ್ಮಾನ ಮಾಡಿದ್ದೆ. ಆಗ ಈ ಭಾಗದ ಕುಟುಂಬಗಳಿಗೂ ಹಕ್ಕುಪತ್ರ ದೊರೆತಿದೆ. ಯಾರಿಗೆ ಹಕ್ಕುಪತ್ರ ದೊರೆತಿಲ್ಲ, ಅವರು ಹೆದರುವ ಅವಶ್ಯಕತೆ ಇಲ್ಲ. ಅವರಿಗೆ ಹಕ್ಕುಪತ್ರ ನೀಡುವ ಜವಾಬ್ದಾರಿ ನಮಗೆ ಬಿಡಿ ಎಂದು ಜನರಿಗೆ ಅಭಯ ನೀಡಿದರು.

ಬ್ಯಾಂಕ್ ಸಾಲ ಕೊಡಿಸುವ ಕೆಲಸ ಮಾಡಲಿದ್ದೇವೆ. ಈ ಭಾಗದಲ್ಲಿ ಮಕ್ಕಳಿಗೆ ಶಿಕ್ಷಣ ಸಿಗಬೇಕು ಅಂತ, ಬಿಜಿಎಸ್ ಆಸ್ಪತ್ರೆ ಬಳಿ ಒಂದು ಬಡ ಕುಟುಂಬ ಗಾಡಿ ನಿಲ್ಲಿಸಿ ಮಾತನಾಡಿಸಿದ್ರು, 5 ಲಕ್ಷ ಬಿಲ್ ಆಗಿದೆ ಅಂತ ಅಳಲು ತೋಡಿಕೊಂಡ್ರು. ಹಾಗಾಗಿ ಬಡವರ ಕಾಯಿಲೆಗೆ ಎಷ್ಟೇ ವೆಚ್ಚವಾದ್ರೂ ಸರ್ಕಾರ ಬರಿಸುವ ಕಾರ್ಯಕ್ರಮ ತಂದಿದ್ದೇವೆ. ತಾಯಂದಿರಿಗೆ ಪೌಷ್ಟಿಕಾಂಶ ಆಹಾರ ಸಿಗಬೇಕು ಎಂದು ಹೇಳಿದರು.

ವಿಷ್ಣು ವರ್ಧನ್ ಅಭಿಮಾನಿಗಳಿಂದ ಮನವಿ : ಇದೇ ವೇಳೆ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಮಾಡಿಕೊಡಬೇಕು. ವಿಷ್ಣು ಸ್ಮಾರಕ ಗೊಂದಲದಲ್ಲಿದೆ . ಅದನ್ನು ರಿಪಡಿಸಿಕೊಡುವಂತೆ ಅಭಿಮಾನಿಗಳು ಮನವಿ ಮಾಡಿದರು. ಇದಕ್ಕೆ ಎಚ್​ಡಿಕೆ ಕಾನೂನಾತ್ಮಕವಾಗಿ ಹೇಗೆ ಸರಿಪಡಿಸಬಹುದು ಎನ್ನುವುದನ್ನು ತಿಳಿದು ಸರಿಪಡಿಸಲಾಗುವುದು ಎಂದರು.

ಇದಕ್ಕೂ ಮುನ್ನ ಯಶವಂತಪುರ ಕ್ಷೇತ್ರದ ಕೆಂಚೇನಹಳ್ಳಿಯಿಂದ ರೋಡ್ ಶೋ ನಡೆಸಿದ ಎಚ್​​ಡಿಕೆ, ಪಟ್ಟಣಗೆರೆ, ಗಾಣಕಲ್ಲು, ವಾಜರಹಳ್ಳಿ, ಶ್ರೀನಿವಾಸಪುರ, ಚಿಕ್ಕೇಗೌಡನಪಾಳ್ಯ, ಹೆಮ್ಮಿಗೆಪುರ, ಕೆಂಗೇರಿ ಕೋಟೆ, ಕೆ.ಗೊಲ್ಲಹಳ್ಳಿ, ಗೋಣಿಪುರ ಭಾಗದಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ, ಮುಖಂಡ ಪಂಚಲಿಂಗಯ್ಯ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚಿಸುವುದು ಶತಸಿದ್ಧ: ಹೆಚ್​ಡಿಕೆ ವಿಶ್ವಾಸ

Last Updated : Apr 8, 2023, 10:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.