ಬೆಂಗಳೂರು: ಪ್ರಸ್ತುತ ಸರ್ಕಾರದಲ್ಲಿ ಆಗುತ್ತಿರುವ ಶೇ 20 ರಷ್ಟು ಕೆಲಸ ಕುಮಾರಣ್ಣನ ಸರ್ಕಾರಾವಧಿಯಲ್ಲಿ ಆಗಿದ್ದಿದ್ದರೆ ನಾನು ಪಕ್ಷ ಬಿಡುತ್ತಿರಲಿಲ್ಲ ಎಂದು ಅನರ್ಹ ಶಾಸಕ ನಾರಾಯಣ ಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ನಮ್ಮ ಕ್ಷೇತ್ರಕ್ಕೆ ಯಾವುದೇ ಅನುದಾನ ನೀಡಲಿಲ್ಲ. ಅದಕ್ಕಾಗಿಯೇ ನಾವು ಪಕ್ಷ ತೊರೆಯಬೇಕಾಯಿತು. ಆದರೆ ಸಿಎಂ ಯಡಿಯೂರಪ್ಪ ನಮ್ಮ ತಾಲೂಕಿನವರೇ ಆಗಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಹೀಗಾಗಿ ನಮಗೆ ಸಂತೋಷವಾಗಿದೆ ಎಂದರು.
ನಮ್ಮ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಬಗ್ಗೆ ಯಾರು ತಪ್ಪಾಗಿ ಮಾತನಾಡಿಲ್ಲ. ಸಣ್ಣಪುಟ್ಟ ಸಮಸ್ಯೆಗಳು ಇರೋದು ಸಹಜ. ಅದನ್ನು ಅವರು ಬಗೆಹರಿಸಿಕೊಳ್ಳುತ್ತಾರೆ ಎಂದು ಅವರು ಸಮಜಾಯಿಷಿ ಕೊಟ್ಟರು.
ಕೆ.ಆರ್.ಪೇಟೆ ಕ್ಷೇತ್ರಕ್ಕೆ ವಿಜಯೇಂದ್ರ ಬರುವುದಾದರೆ ಸ್ವಾಗತ. ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲದಕ್ಕೂ ನಾನು ಸಿದ್ಧ. ಮುಂಬೈಯಲ್ಲಿ ಬ್ಯುಸಿನೆಸ್ ಮಾಡುತ್ತಿದ್ದವನು ನಾನು. ನನಗೆ ಕೆ.ಆರ್.ಪೇಟೆ ಮಾತೃ ಭೂಮಿ. ಅಲ್ಲಿನ ಋಣ ತೀರಿಸುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದ್ರು.