ETV Bharat / state

ನಾನು ಬೇಗ ಆರೋಪ ಮುಕ್ತ ಆಗಿ ಬರ್ತೇನೆ ಎಂದು ಮೊದಲೇ ಹೇಳಿದ್ದೆ: ಕೆ.ಎಸ್. ಈಶ್ವರಪ್ಪ

author img

By

Published : Jul 22, 2022, 3:05 PM IST

ಬಿಜೆಪಿಯಲ್ಲಿ 40% ಕಮಿಷನ್ ಇಂತಹ ಇಲಾಖೆ, ಇಂತಹ ಸಚಿವ ಅಂತ ಯಾರು ಹೇಳಿಲ್ಲ. ನನ್ನ ಮೇಲೆ ಆರೋಪ ಬಂದ ಕೂಡಲೇ ನೇರವಾಗಿ ನಾನು ಕೇಸ್ ಹಾಕಿದೆ. ಕೇಸ್ ಹಾಕಿದ ತಕ್ಷಣ ಆತ ಆತ್ಮಹತ್ಯೆ ಮಾಡಿಕೊಂಡ. ಆ ಬಗ್ಗೆ ನಾನು ಮಾತಾಡಲ್ಲ ಎಂತ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

I will become a minister if I get a chance: KS Eshwarappa

ಬೆಂಗಳೂರು: ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಪಕ್ಷದ ಸಂಘಟನೆ ಜವಾಬ್ದಾರಿ ನೀಡಿದರೂ ನಿಭಾಯಿಸುವೆ. ಇಲ್ಲವೇ ಸಚಿವ ಸ್ಥಾನ ನೀಡಿದರೂ ನಿರ್ವಹಿಸುವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಕುಮಾರ ಪಾರ್ಕ್​​ನಲ್ಲಿರುವ ಅಧಿಕೃತ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನೀಗ ಆರೋಪದಿಂದ ಮುಕ್ತನಾಗಿದ್ದೇನೆ. ಹೈಕಮಾಂಡ್ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಅವಕಾಶ ನೀಡಿದರೆ ಸಚಿವನಾಗಿ ಕೆಲಸ ಮಾಡುತ್ತೇನೆ. ಇಲ್ಲದಿದ್ದರೆ ಶಾಸಕನಾಗಿ ಮುಂದುವರಿಯುತ್ತೇನೆ. ಸಂಪುಟಕ್ಕೆ ಮರಳಿ ಸೇರಿಸಿಕೊಳ್ಳುವ ಬಗ್ಗೆ ಹೈಕಮಾಂಡ್ ತಿರ್ಮಾನ ಮಾಡಲಿದೆ. ನಾನು ಬೇಗ ಆರೋಪ ಮುಕ್ತ ಆಗಿ ಬರ್ತೇನೆ ಅಂತ ಮೊದಲೇ ಹೇಳಿದ್ದೆ. ಈಗ ಆರೋಪ ಮುಕ್ತ ಆಗಿ ಬಂದಿದ್ದೇನೆ ಎಂದರು.

ಇದನ್ನೂ ಓದಿ: 'ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ' ಎಂದು ಘೋಷಣೆ ಕೂಗಿದ ಕಾಂಗ್ರೆಸ್​ ಕಾರ್ಯಕರ್ತರು

ಕಾಂಗ್ರೆಸ್ ಆರೋಪ: ತನಿಖಾ ಹಂತದಲ್ಲಿ ಪೋಲಿಸರು ಈಶ್ವರಪ್ಪ ಹೇಳಿಕೆ ಪಡೆದಿಲ್ಲ ಎಂಬ ಕಾಂಗ್ರೆಸ್ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕೆ.ಎಸ್. ಈಶ್ವರಪ್ಪ, ಆರೋಪ ಬಂದ ಕಾರಣ ನನ್ನಿಂದಾಗಿ ನಮ್ಮ ಪಕ್ಷಕ್ಕೆ, ನಾಯಕರಿಗೆ ಮುಜುಗರವಾಗಿದೆ. ಹಾಗಾಗಿಯೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಪೋಲಿಸರು ನನ್ನ ಹೇಳಿಕೆ ಪಡೆದಿಲ್ಲ ಅನ್ನೋದು ಇವರಿಗೆ ಹೇಗೆ ಗೊತ್ತು? ಇಂತಹ ಸಿದ್ದರಾಮಯ್ಯ ಈ ಹಿಂದೆ ಸಿಎಂ, ಮಂತ್ರಿಯಾಗಿದ್ದರೂ ಅನ್ನೋದೆ ಬೇಸರ ತಂದಿದೆ ಎಂದು ಟೀಕಿಸಿದರು. ಎನು ಗೊತ್ತಿಲ್ಲದೆ ಆರೋಪ ಮಾಡುತ್ತಿದ್ದಾರೆ. ಇದನ್ನ ನಾನು ಉಗ್ರವಾಗಿ ಖಂಡಿಸುತ್ತೇನೆ. ತನಿಖೆ ಮಾಡಿರುವ ಸಂಸ್ಥೆ ಮತ್ತು ವ್ಯಕ್ತಿಗಳು ನಿಷ್ಪಕ್ಷಪಾತವಾಗಿ ಯಾವುದೇ ಪ್ರಭಾವಕ್ಕೆ ಒಳಗಾಗದೆ ತನಿಖೆ ಮಾಡಿದ್ದಾರೆ ಎಂದರು.

ಆರೋಪದಿಂದ ಮುಕ್ತಿ: ಆರೋಪ ಬಂದಾಗ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಅಂತ ಪಕ್ಷದ ಹಲವು ನಾಯಕರು ಹೇಳಿದ್ದರು. ಕೇಂದ್ರ ನಾಯಕರೂ ಹೇಳಿದ್ದರು. ಆದರೆ, ನಾನು ಅವರ ಒಪ್ಪಿಗೆ ತೆಗೆದುಕೊಂಡು ರಾಜೀನಾಮೆ ನೀಡಿದ್ದೆ. ಒಂದು ವೇಳೆ ಮಂತ್ರಿ ಸ್ಥಾನದಲ್ಲಿ ಇದ್ದಿದ್ದರೆ ಪ್ರಭಾವ ಬೀರುತ್ತಾರೆ ಎಂದು ಚರ್ಚೆ ಆಗುತ್ತಿತ್ತು. ಅಲ್ಲದೆ, ನಾನೇ ವಿರೋಧ ಪಕ್ಷದಲ್ಲಿ ಇದ್ದಾಗ ಜಾರ್ಜ್ ಪ್ರಕರಣದಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಆರೋಪ ಮುಕ್ತವಾದ ಮೇಲೆ ಮತ್ತೆ ಮಂತ್ರಿ ಆಗಿ ಅಂತ ಹೇಳಿದ್ದೆ. ನನ್ನ ಮೇಲೆ ಆರೋಪ ಬಂದ ಮೇಲೆ ನಾನು ಹಿರಿಯರ ಒಪ್ಪಿಗೆ ಪಡೆದು ರಾಜೀನಾಮೆ ಸಲ್ಲಿಸಿದೆ. ಈಗ ತನಿಖೆ ಆಗಿದೆ, ತುಂಬಾ ಸ್ಪಷ್ಟವಾಗಿ ನನ್ನನ್ನು ಆರೋಪದಿಂದ ಮುಕ್ತ ಮಾಡಿದ್ದಾರೆ ಎಂದರು.

ತಪ್ಪು ಮಾಡಿದ್ದರೆ ಚೌಡೇಶ್ವರಿ ಶಿಕ್ಷೆ ನೀಡಲಿ: ಆರೋಪ ಬಂದ ಸಂದರ್ಭದಲ್ಲಿ ನನ್ನ ಮನೆ ದೇವ್ರು ಚೌಡೇಶ್ವರಿ ಅವಳು ನಾನು ಎನಾದರೂ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿಲಿ. ಇಲ್ಲವಾದರೆ, ಆರೋಪ ಮುಕ್ತ ಮಾಡಲಿ ಅಂತ ಹೇಳಿದ್ದೆ. ಈ ಎರಡ್ಮೂರು ತಿಂಗಳು ಏನು ಆಯ್ತು ಎಂದು ಎಲ್ಲರಿಗೂ ಗೊತ್ತು. ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರಿಗೆ ನನ್ನಿಂದ ಮುಜುಗರ ಆಯ್ತು ಅನ್ನೂ ನೋವು ನನಗೆ ಇತ್ತು. ಎಲ್ಲರೂ ನನ್ನನ್ನು ಆರೋಪದಿಂದ ಮುಕ್ತರಾಗಿ ಬರ್ಲಿ ಅಂತ ಆಶಯ ವ್ಯಕ್ತಪಡಿಸಿದ್ದರು. ಈಗ ರಾಜ್ಯ, ದೇಶದಿಂದ ಅನೇಕ ಜನ ಪೋನ್ ಮಾಡುತ್ತಿದ್ದಾರೆ. ಅದೇ ರೀತಿ ಸಾಧು ಸಂತರು, ವಿಶೇಷವಾಗಿ ಸ್ವಾಮೀಜಿಗಳು ನೀನು ಆರೋಪ ಮುಕ್ತವಾಗಿ ಬರಬೇಕು ಅಂತ ಹೇಳ್ತಾ ಇದ್ದರು. ನಿನ್ನೆಯಿಂದ ಕೆರೆ ಮಾಡಿ ಶುಭಾಶಯ ಹೇಳುತ್ತಾ ಇದ್ದಾರೆ ಎಂದರು.

ಕಾಂಗ್ರೆಸ್ ಜಾತಿವಾದಿ ಪಕ್ಷ: ಕಾಂಗ್ರೆಸ್​​ನಲ್ಲಿ ಸಿಎಂ ಸೈಪೋಟಿ ಶುರುವಾಗಿದೆ. ಒಬ್ಬೊಬ್ಬ ನಾಯಕರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಈವರೆಗೂ ಸಿಎಂ ಅಕಾಂಕ್ಷಿಗಳಲ್ಲ ಅಂತಾ ಹೇಳುತ್ತಿದ್ದರು. ಈಗ ಅವರೆಲ್ಲಾ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಈಗ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ, ಅತ್ತ ಡಿ.ಕೆ. ಶಿವಕುಮಾರ್ ತನ್ನ ಬೆನ್ನಿಗೆ ನಿಲ್ಲಬೇಕೆಂದು ಒಕ್ಕಲಿಗ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್ ಜಾತಿವಾದಿ ಪಕ್ಷ ಅನ್ನೋದು ಗೊತ್ತಾಗಲಿದೆ. ಇವರು ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಯಾವ ಕುರುಬನೂ, ಯಾವ ಒಕ್ಕಲಿಗನೂ ಜಾತಿವಾದಿಯಲ್ಲ. ಜಾತಿಯ ಹೆಸರಲ್ಲಿ ದುರುಪಯೋಗಪಡಿಸಿಕೊಳ್ಳಲು ಹೊರಟಿದ್ದಾರೆ. ಇವರನ್ನ ಒಕ್ಕಲಿಗರೂ ಕ್ಷಮಿಸೋದಿಲ್ಲ, ಕುರುಬರೂ ಕ್ಷಮಿಸೋದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾಯಶ್ಚಿತ ಅನುಭವಿಸಲಿದೆ ಎಂದರು.

ಸಂತೋಷ ತೀರಿ ಹೋಗಿದ್ದು ನಮಗೆಲ್ಲ ನೋವಾಗಿದೆ: ಸಂತೋಷ್ ಪಾಟೀಲ್ ಪತ್ನಿ ರಾಜ್ಯಪಾಲರಿಗೆ ಬರೆದ ಪತ್ರದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಪತ್ರವನ್ನ ಅವರ ಪತ್ನಿಯೇ ಬರೆದರೋ ಯಾರಾದರೂ ಹೇಳಿ ಬರೆಸಿದರೋ ಗೊತ್ತಿಲ್ಲ. ಆದರೆ, ಸಂತೋಷ ಪತ್ನಿ ವಿಚಾರ ಬಹಳ ನೋವಾಗಿದೆ. ಬಹಳ ಚಿಕ್ಕವಯಸ್ಸಿನಲ್ಲೇ ಸಂತೋಷ ತೀರಿ ಹೋಗಿದ್ದು ನಮಗೆಲ್ಲ ನೋವಾಗಿದೆ. ಮಗು ಇದೆ ಪತ್ನಿಗೆ ಅನ್ಯಾಯ ಆಗಿದೆ, ಈ ನೋವನ್ನ ಯಾವ ರೀತಿ ಭಗವಂತ ಸರಿಪಡಿಸತ್ತಾನೆ ಗೊತ್ತಿಲ್ಲ. ನಮ್ಮ ಕುಟುಂಬಕ್ಕೂ ನೋವಾಗಿದೆ ಎಂದರು.

ಇದನ್ನೂ ಓದಿ: 'ಹರ್ ಘರ್ ತಿರಂಗಾ' ಆಂದೋಲನ ಬೆಂಬಲಿಸಿ: ರಾಷ್ಟ್ರದ ಜನತೆಗೆ ಪ್ರಧಾನಿ ಮೋದಿ ಕರೆ

ನಾನೇ ಕೇಸ್ ಹಾಕಿದೆ: ರಮೇಶ್ ಕುಮಾರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ ಅಂತಾ ಮೊದಲಿನಿಂದಲೂ ಹೇಳುತ್ತಿದ್ದೆ. ಇದಕ್ಕೆ ರಮೇಶ್ ಕುಮಾರ್ ಮಾತು ಪೂರಕವಾಗಿದೆ. ಬಹಿರಂಗವಾಗಿ ಸಾರ್ವಜನಿಕ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಹಣ ಮಾಡಿದ್ದೇವೆ ಅಂದಿದ್ದಾರೆ. ಇದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಮುಂದೆ ಕಾಂಗ್ರೆಸ್ ಬಿಜೆಪಿ ಮೇಲೆ ಆಪಾದನೆ ಮಾಡುವುದಿಲ್ಲ ಎಂಬ ಹೇಳಿಕೆ ನೀಡಬೇಕು. ಯಾಕೆಂದರೆ ಒಬ್ಬನೂ ಬಿಜೆಪಿಯಲ್ಲಿ 40% ಕಮಿಷನ್ ಇಂತಹ ಇಲಾಖೆ, ಇಂತಹ ಸಚಿವ ಅಂತ ಯಾರು ಹೇಳಿಲ್ಲ. ನನ್ನ ಮೇಲೆ ಆರೋಪ ಬಂದ ಕೂಡಲೇ ನೇರವಾಗಿ ನಾನು ಕೇಸ್ ಹಾಕಿದೆ. ಕೇಸ್ ಹಾಕಿದ ತಕ್ಷಣ ಆತ ಆತ್ಮಹತ್ಯೆ ಮಾಡಿಕೊಂಡ. ಆ ಬಗ್ಗೆ ನಾನು ಮಾತಾಡಲ್ಲ. ಹಾಗಾಗಿ ಯಾರಾದರೂ ಒಬ್ಬರು ಕೇಸ್ ಹಾಕಿದರೆ, ಅವರ ಹತ್ರ ದಾಖಲೆ ಇರಬೇಕು. ಬರಿ ಪುಕ್ಸಟೆ ಹೇಳಿಕೊಳ್ಳುತ್ತಾರೆ, ಆದರೆ, ಅದು ಒಳ್ಳೆಯದಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.