ETV Bharat / state

'ಇದೊಂಥರಾ ಆತ್ಮಕಥೆ' ಕೃತಿ ಬಿಡುಗಡೆಗೊಳಿಸಿದ ಮಾಜಿ ಸಿಎಂ ಹೆಚ್​ಡಿಕೆ

author img

By

Published : Oct 27, 2019, 7:56 AM IST

ಲೇಖಕ, ಹಿರಿಯ ಪತ್ರಕರ್ತ ಆರ್.ವಿ.ವಿಠ್ಠಲ್ ಮೂರ್ತಿ ಬರೆದಿರುವ 'ಇದೊಂಥರಾ ಆತ್ಮಕಥೆ' ಕೃತಿ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಪ್ರೆಸ್​ ಕ್ಲಬ್​​ನಲ್ಲಿ ನಡೆಯಿತು.

'ಇದೊಂಥರಾ ಆತ್ಮಕಥೆ' ಕೃತಿ ಬಿಡುಗಡೆ

ಬೆಂಗಳೂರು: ಲೇಖಕ, ಹಿರಿಯ ಪತ್ರಕರ್ತ ಆರ್.ವಿ.ವಿಠ್ಠಲ್ ಮೂರ್ತಿ ಬರೆದಿರುವ "ಇದೊಂಥರಾ ಆತ್ಮಕಥೆ" ಕೃತಿಯನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು.

ಪ್ರೆಸ್​​​ ಕ್ಲಬ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುರೂಪಿ ಪ್ರಕಾಶನದ ಜಿ.ಎನ್.ಮೋಹನ್ ಹಾಗೂ ಹಿರಿಯ ಪತ್ರಕರ್ತೆ ಡಾ‌. ವಿಜಯ ಉಪಸ್ಥಿತರಿದ್ದರು. ಬಹುರೂಪಿ ಪ್ರಕಾಶನದಿಂದ ಹೊರತಂದಿರುವ ಈ ಪುಸ್ತಕದಲ್ಲಿ ವಿಠ್ಠಲ್ ಮೂರ್ತಿಯವರು, ಅನೇಕ ರಾಜಕಾರಣಿಗಳೊಂದಿಗಿನ ಒಡನಾಟ ಹಾಗೂ ಅವರ ವ್ಯಕ್ತಿತ್ವವನ್ನು ಉಲ್ಲೇಖಿಸಿದ್ದಾರೆ.

'ಇದೊಂಥರಾ ಆತ್ಮಕಥೆ' ಕೃತಿ ಬಿಡುಗಡೆ

ಸುಮಾರು 3 ದಶಕಗಳಿಗೂ ಹೆಚ್ಚು ಕಾಲ ವರದಿಗಾರಿಕೆ ಮಾಡಿರುವ ಅವರು, ಮಾಜಿ ಸಿಎಂಗಳಾದ ಜೆ.ಹೆಚ್.ಪಟೇಲ್, ರಾಮಕೃಷ್ಣ ಹೆಗಡೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಇನ್ನಿತರ ಮುಖ್ಯಮಂತ್ರಿಗಳು ಹಾಗೂ ಹಿರಿಯ ರಾಜಕಾರಣಿಗಳನ್ನು ಹತ್ತಿರದಿಂದ ಬಲ್ಲವರು. ಹಳೆಯ ರಾಜಕಾರಣಿಗಳ ಸೃಜನಶೀಲತೆ, ಸಜ್ಜನಿಕೆಯನ್ನು ವಿಸ್ತೃತವಾಗಿ ಇದೊಂಥರಾ ಆತ್ಮಕತೆಯಲ್ಲಿ ವಿವರಿಸಿದ್ದಾರೆ.

Intro:Body:ಇದೊಂಥರಾ ಆತ್ಮಕಥೆ" ಪುಸ್ತಕ ಬಿಡುಗಡೆ

ಬೆಂಗಳೂರು: ಹಿರಿಯ ಪತ್ರಕರ್ತ ಆರ್. ವಿ ವಿಠ್ಠಲ್ ಮೂರ್ತಿ ಅವರು ಬರೆದಿರುವ "ಇದೊಂಥರಾ ಆತ್ಮಕಥೆ" ಆತ್ಮಚರಿತೆ ಪುಸ್ತಕವನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಬಿಡುಗಡೆ ಮಾಡಿದರು.
ಬಹುರೂಪಿ ಪ್ರಕಾಶನದಿಂದ ಹೊರತಂದಿರುವ ಈ ಪುಸ್ತಕದಲ್ಲಿ
ಲೇಖಕ, ಹಿರಿಯ ಪತ್ರಕರ್ತ ವಿಠ್ಠಲ್ ಮೂರ್ತಿ ಅವರು, ಅನೇಕ ರಾಜಕಾರಣಿಗಳೊಂದಿಗಿನ ಒಡನಾಟ ಹಾಗೂ ಅವರ ವ್ಯಕ್ತಿತ್ವವನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಸುಮಾರು 3 ದಶಕಗಳಿಗೂ ಹೆಚ್ಚು ವರದಿಗಾರಿಕೆ ಮಾಡಿರುವ ಅವರು, ಮಾಜಿ ಸಿಎಂಗಳಾದ ಜೆ.ಎಚ್. ಪಟೇಲ್, ರಾಮಕೃಷ್ಣ ಹೆಗಡೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಇನ್ನಿತರ ಮುಖ್ಯಮಂತ್ರಿಗಳು ಹಾಗೂ ಹಿರಿಯ ರಾಜಕಾರಣಿಗಳನ್ನು ಹತ್ತಿರದಿಂದ ಬಲ್ಲವರು. ಹಳೆಯ ರಾಜಕಾರಣಿಗಳ ಸೃಜನಶೀಲತೆ, ಸಜ್ಜನಿಕೆಯನ್ನು ವಿಸ್ತೃತವಾಗಿ ಇದೊಂಥರಾ ಆತ್ಮಕತೆಯಲ್ಲಿ ಬರೆದು ಆ ವ್ಯಕ್ತಿತ್ವಗಳು ಇವರ ಜೇವನದಲ್ಲಿ ಯಾವ ರೀತಿಯಾಗಿ ಪ್ರಭಾವವನ್ನು ಬೀರಿದೆ ಎಂದು ಬರೆದುಕೊಂಡಿದ್ದಾರೆ.
ವೀರೇಂದ್ರ ಪಾಟೀಲ್ ತೀರಿಕೊಂಡರು!
ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ವಿಠಲ್ ಮೂರ್ತಿ ಅವರು, ' ಒಮ್ಮೆ ವೀರೇಂದ್ರ ಪಾಟೀಲ್ ಬದುಕಿದ್ದ ಸಂದರ್ಭದಲ್ಲಿ ಅವರು ತೀರಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿದ ವಿಷಯವನ್ನು' ನೆನಪಿಸಿಕೊಂಡರು.
'ವರದಿಗಾರರಾಗಿ ಕೆಲಸ ಆರಂಭಿಸಿದ ವಿಠಲ್ ಮೂರ್ತಿ, ವಿಧಾನಸೌಧದಲ್ಲಿ ವೀರೇಂದ್ರ ಪಾಟೀಲ್ ತೀರಿಕೊಂಡರು ಎಂದು ಸುಳ್ಳು ಸುದ್ದಿ ಹರೆದುಹಾಡುತ್ತಿತ್ತು. ಎಲ್ಲರೂ ಪಾಟೀಲರ ಮನೆ ಬಳಿ ಹೋಗಬೇಕು ಎಂದು ಚರ್ಚಿಸುತ್ತಿದ್ದರು, ಆಗ ವಿಠ್ಠಲ್ ಮೂರ್ತಿಯವರು ವಿಧಾನಸೌಧದ ದೂರವಾಣಿಯಿಂದ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಮನೆಗೆ ಕರೆ ಮಾಡಿದರು. ಕರೆ ಮಾಡಿದ ಮೂರ್ತಿ, ವೀರೇಂದ್ರ ಪಾಟೀಲ್ ತೀರಿಕೊಂಡರಾ ಸರ್ ಎಂದು ಕೇಳಿದರು. ಆಗ ಆ ಕಡೆಯಿಂದ ಇಲ್ಲಾಪ್ಪ ತೀರಿಕೊಂಡಿಲ್ಲಾ ಎಂದು ಹೇಳಿದರು, ತೀರಿಕೊಂಡಿರುವ ಸುದ್ದಿ ವಿಧಾನಸೌದದಲ್ಲಿ ಹರಿದಾಡುತ್ತಿದೆಯಲ್ಲಾ ಸರ್ ಅಂದರಂತೆ. ಅದಕ್ಕೆ ಹಾಗೆ ಕಣಪ್ಪ ಸುಳ್ಳು ಸುದ್ದಿ ಬೇಗ ಹರಡುತ್ತದೆ, ಸತ್ಯ ಸುದ್ದಿ ನಿಧಾನ ಅಂತ ಪಾಟೀಲ್ ಮನೆಯ ದೂರವಾಣಿಯಿಂದ ಉತ್ತರ ಬಂತಂತೆ.
ಹೇಗೆ ಸರ್ ಅಷ್ಟು ಕಾನ್ಫಿಡೆಂಟ್ ಆಗಿ ಹೇಳ್ತೀರಾ ಅಂದಿದಕ್ಕೆ ನಾನೇ ವೀರೇಂದ್ರ ಪಾಟೀಲ್ ಅಂದರಂತೆ ಅಂದಿನ ಮುಖ್ಯಮಂತ್ರಿ.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಹುರೂಪಿ ಪ್ರಕಾಶನದ ಜಿ. ಎನ್ .ಮೋಹನ್ ಹಾಗೂ ಹಿರಿಯ ಪತ್ರಕರ್ತೆ ಡಾ‌ ವಿಜಯ ಉಪಸ್ಥಿತರಿದ್ದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.