ETV Bharat / state

ದಯವಿಟ್ಟು ಗಮನಿಸಿ... ಕೋವಿಡ್ ಟೆಸ್ಟಿಂಗ್ ವಿಧಾನ ಬದಲಿಸಿ: ಸಿಕ್ಕ ಸಿಕ್ಕವರಿಗೆಲ್ಲ ಟೆಸ್ಟಿಂಗ್ ಅಗತ್ಯವಿಲ್ಲ ಎಂದ ICMR - Indian Council of Medical Research Notice to States

ಕೋವಿಡ್ ಟೆಸ್ಟಿಂಗ್ ವಿಧಾನ ಬದಲಿಸುವಂತೆ ಐಸಿಎಂಆರ್ ಸಲಹೆ ನೀಡಿದ್ದು, ಯಾರಿಗೆ ಕೋವಿಡ್ ಟೆಸ್ಟ್ ಬೇಕು, ಬೇಡ ಎಂಬುದರ ಬಗ್ಗೆ ರಾಜ್ಯಗಳಿಗೆ ಸೂಚನೆ ನೀಡಿದೆ. ಅದರ ಸಂಪೂರ್ಣ ವಿವರ ಹೀಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Jan 15, 2022, 9:24 AM IST

ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿದ್ದು, ಸೋಂಕು ಹರಡುವಿಕೆಯನ್ನ ನಿಯಂತ್ರಿಸಲು ಟೆಸ್ಟಿಂಗ್ ಅಗತ್ಯ. ಆದರೆ ಸಿಕ್ಕ ಸಿಕ್ಕವರಿಗೆಲ್ಲ ಟೆಸ್ಟಿಂಗ್ ಅಗತ್ಯ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ತಿಳಿಸಿದೆ.‌

ಕೋವಿಡ್ ಟೆಸ್ಟಿಂಗ್ ವಿಧಾನ ಬದಲಿಸುವಂತೆ ಐಸಿಎಂಆರ್ ಸಲಹೆ ನೀಡಿದ್ದು, ಯಾರಿಗೆ ಕೋವಿಡ್ ಟೆಸ್ಟ್ ಬೇಕು, ಬೇಡ ಎಂಬುದರ ಬಗ್ಗೆ ರಾಜ್ಯಗಳಿಗೆ ಸೂಚನೆ ನೀಡಿದೆ. ಬದಲಾದ ಕೊರೊನಾ ಸನ್ನಿವೇಶಕ್ಕೆ ತಕ್ಕಂತೆ ಟೆಸ್ಟಿಂಗ್ ಪ್ಲಾನ್ ಬದಲಾಯಿಸುವಂತೆ ಸಲಹೆ ನೀಡಲಾಗಿದೆ.

ಕೋವಿಡ್ ಟೆಸ್ಟಿಂಗ್ ಗೆ ಐಸಿಎಂಆರ್ ಸಲಹೆಗಳು ಏನು?

1.ಯಾರಿಗೆ ಕೋವಿಡ್ ಟೆಸ್ಟ್ ಮಾಡಬೇಕು ?

  • ಯಾರಿಗೆ ರೋಗ ಲಕ್ಷಣಗಳು ಇರುತ್ತವೆಯೋ ಅಂತವರನ್ನ ಕೋವಿಡ್ ಟೆಸ್ಟ್​​ಗೆ ಒಳಪಡಿಸಿ.
  • ಸೋಂಕು ದೃಢಪಟ್ಟ ಸೋಂಕಿತನ ಪ್ರಾಥಮಿಕ ಸಂಪರ್ಕರದಲ್ಲಿರುವ, ಹೈ-ರಿಸ್ಕ್ ವ್ಯಕ್ತಿಗಳನ್ನ ಟೆಸ್ಟ್​ಗೆ ಒಳಪಡಿಸಬೇಕು.
  • ಅಂದರೆ 60 ವರ್ಷ ಮೇಲ್ಪಟ್ಟವರ ಟೆಸ್ಟಿಂಗ್ ಮಾಡುವುದು, ಇತರ ಆರೋಗ್ಯ ಸಮಸ್ಯೆ ‌ಇದ್ದವರಿಗೆ ಟೆಸ್ಟ್ ಮಾಡುವುದು.
  • ಅಂತಾರಾಷ್ಟ್ರೀಯ ಪ್ರಯಾಣಿಕರನ್ನ ಟೆಸ್ಟ್ ಮಾಡುವುದು.

2. ಆಸ್ಪತ್ರೆಗಲ್ಲಿ ಯಾವ ನಿಯಮ ಜಾರಿಯಾಗಬೇಕು?

  • ಹೆರಿಗೆ, ಶಸ್ತ್ರ ಚಿಕಿತ್ಸೆಗೆಂದು ಕೋವಿಡ್ ಟೆಸ್ಟ್ ಮಾಡುವ ಅಗತ್ಯ ಇಲ್ಲ.
  • ಕೋವಿಡ್ ಟೆಸ್ಟ್ ಮಾಡಿಸಿಲ್ಲ ಎಂದು ರೋಗಿಗಳನ್ನ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವಂತಿಲ್ಲ.
  • ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ವಾರಕ್ಕೆ ಒಂದು ಸಾರಿ ಮಾತ್ರ ಕೋವಿಡ್ ಟೆಸ್ಟ್ ಮಾಡಬೇಕು. ಅದಕ್ಕಿಂತ ಹೆಚ್ಚು ಟೆಸ್ಟ್ ಮಾಡುವಂತಿಲ್ಲ.

3. ಯಾರಿಗೆ ಕೋವಿಡ್ ಟೆಸ್ಟ್ ಬೇಕಿಲ್ಲ?

  • ಯಾವುದೇ ರೋಗ ಲಕ್ಷಣಗಳು ಇಲ್ಲದವರಿಗೆ ಕೋವಿಡ್ ಟೆಸ್ಟ್ ಅಗತ್ಯ ಇಲ್ಲ.
  • ಸೋಂಕು ದೃಢಪಟ್ಟ ಸೋಂಕಿತನ ಸಂಪರ್ಕದಲ್ಲಿದ್ದ ಎಸಿಮ್ಟಮ್ಯಾಟಿಕ್ ವ್ಯಕ್ತಿಗಳಿಗೆ ಟೆಸ್ಟ್ ಬೇಕಿಲ್ಲ.
  • ಹೋಂ ಐಸೋಲೇಷನ್​​ನಲ್ಲಿದ್ದು ಡಿಸ್ಜಾರ್ಜ್ ಆದವರಿಗೆ ಕೋವಿಡ್ ಟೆಸ್ಟ್ ಬೇಡ.
  • ಅಂತಾರಾಜ್ಯ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಅಗತ್ಯ ಇಲ್ಲ ಎಂದು ತಿಳಿಸಿದೆ.

ಈ ಮೂಲಕ ಅನಗತ್ಯ ಟೆಸ್ಟಿಂಗ್ ಹಾಗೂ ಅದಕ್ಕೆ ವ್ಯಯಿಸುತ್ತಿದ್ದ ಸಮಯ, ಆರ್ಥಿಕ ಸಂಪನ್ಮೂಲ ಉಳಿಕೆಯಾಗಲಿದೆ.

ಇದನ್ನೂ ಓದಿ: ಕೋವಿಡ್ ಟೆಸ್ಟ್ ರಿಸಲ್ಟ್ ನೋಡಲು ಇಲ್ಲಿದೆ ನೋಡಿ ಸುಲಭ ಮಾರ್ಗ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.