ETV Bharat / state

ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಪಿ.ರವಿಕುಮಾರ್ ನೇಮಕ - ಟಿ.ಎಂ.ವಿಜಯಭಾಸ್ಕರ್

P. Ravikumar
ಪಿ. ರವಿಕುಮಾರ್
author img

By

Published : Dec 30, 2020, 3:37 PM IST

Updated : Dec 30, 2020, 4:46 PM IST

15:33 December 30

ಇದಕ್ಕೂ ಮುನ್ನ ಇಂಧನ ಇಲಾಖೆಯಲ್ಲಿದ್ದ ಅವರು, ಸಿಎಂ ಅಪರ ಮುಖ್ಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ಮುಖ್ಯಕಾರ್ಯದರ್ಶಿ ಹುದ್ದೆಯ ಮೇಲೆ ಹಿರಿಯ ಐಎಎಸ್ ಅಧಿಕಾರಿಗಳಾದ ಐ.ಎಸ್.ಎನ್.ಪ್ರಸಾದ್, ರಜನೀಶ್ ಗೋಯಲ್ ಸೇರಿದಂತೆ ಮತ್ತಿತರರು ಕಣ್ಣಿಟ್ಟಿದ್ದರು ಎನ್ನಲಾಗಿದೆ.

IAs officer P. Ravikumar appointed as new CS Of karnataka government
ಪಿ ರವಿಕುಮಾರ್ ನೇಮಕ ಮಾಡಿ ಸರ್ಕಾರದ ಆದೇಶ ಪತ್ರ

ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಪಿ. ರವಿಕುಮಾರ್ ಅವರು ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಅಪರ ಮುಖ್ಯಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ರವಿಕುಮಾರ್ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಳಿಸಿ ಇಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ಮುಖ್ಯಕಾರ್ಯದರ್ಶಿಯಾಗಿರುವ  ಟಿ.ಎಂ.ವಿಜಯಭಾಸ್ಕರ್ ಅವರ ಅಧಿಕಾರವಧಿ ನಾಳೆಗೆ ಕೊನೆಗೊಳ್ಳಲಿದೆ. ನಾಳೆ ರವಿಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಗೊಳ್ಳಲಿದೆ. ಇನ್ನು 6 ತಿಂಗಳು ಸೇವೆ ಮುಂದುವರೆಸಲು ಟಿ.ಎಂ. ವಿಜಯಭಾಸ್ಕರ್ ಅವರು ಪತ್ರದ ಮೂಲಕ ಸಿಎಂಗೆ ಮನವಿ ಮಾಡಿದ್ದರು. ಆದರೆ, ಯಡಿಯೂರಪ್ಪ ಅವರು ಈ  ಬಗ್ಗೆ ಒಲವು ತೋರಿಸಿಲ್ಲ ಎನ್ನಲಾಗಿದೆ.

ಪಿ. ರವಿಕುಮಾರ್ ಪರಿಚಯ

1962, ಮೇ 3 ರಂದು ಜನಿಸಿದ ರವಿಕುಮಾರ್ , 1984ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿದ್ದಾರೆ. ಇವರು ಕರ್ನಾಟಕ ಕೇಡರ್​ನಲ್ಲಿ 2ನೇ ಅತೀ ಹಿರಿಯ ಐಎಎಸ್ ಅಧಿಕಾರಿ ಎನಿಸಿದ್ದಾರೆ. ಮೇ 2022ಕ್ಕೆ ನಿವೃತ್ತಿಯಾಗಲಿರುವ ಇವರು, ಒಂದೂವರೆ ವರ್ಷದ ಅಧಿಕಾರವಧಿಯನ್ನು ಹೊಂದಿರುತ್ತಾರೆ.ಪ್ರಸ್ತುತ  ಮುಖ್ಯ ಕಾರ್ಯದರ್ಶಿಯಾಗಿರುವ ಟಿ.ಎಂ.ವಿಜಯ್ ಭಾಸ್ಕರ್ ಡಿಸೆಂಬರ್ 31ಕ್ಕೆ ನಿವೃತ್ತಿ ಹೊಂದುತ್ತಿದ್ದಾರೆ.

ತೆರವಾಗಲಿರುವ ಈ ಸ್ಥಾನದ ಮೇಲೆ ಹಲವರು ಹೆಸರು ಕೇಳಿ ಬಂದಿತ್ತಾದರೂ ಅವರ ಜಾಗಕ್ಕೆ ಪಿ.ರವಿಕುಮಾರ್ ಅವರು ನೇಮಕಗೊಂಡಿದ್ದಾರೆ.

ಇದಕ್ಕೂ ಮುನ್ನ ಇಂಧನ ಇಲಾಖೆಯಲ್ಲಿದ್ದ ಅವರು, ಸಿಎಂ ಅಪರ ಮುಖ್ಯಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಇಂಧನ ಕಾರ್ಯದರ್ಶಿಯಾಗಿದ್ದಾಗ, ಪಾವಗಡದ ಸೌರಶಕ್ತಿ ವಿದ್ಯುತ್ ಸ್ಥಾವರ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸಿದ್ದರು.

ಇನ್ನು ಮುಖ್ಯಕಾರ್ಯದರ್ಶಿ ಹುದ್ದೆಯ ಮೇಲೆ ಹಿರಿಯ ಐಎಎಸ್ ಅಧಿಕಾರಿಗಳಾದ ಐ.ಎಸ್.ಎನ್.ಪ್ರಸಾದ್, ರಜನೀಶ್ ಗೋಯಲ್ ಸೇರಿದಂತೆ ಮತ್ತಿತರರು ಕಣ್ಣಿಟ್ಟಿದ್ದರು ಎನ್ನಲಾಗಿದೆ. ಆದರೆ, ಸೇವಾ ಹಿರಿತನ ಜೊತೆಗೆ ಆಡಳಿತಾಧಿಕಾರಿಯಾಗಿ ಉತ್ತಮ ಗೌರವ, ಸ್ಥಾನಮಾನ, ವಿಶ್ವಾಸ ಗಳಿಸಿಕೊಂಡಿರುವ ರವಿಕುಮಾರ್, ಕೊರೊನಾ ಲಾಕ್​​​​​ಡೌನ್ ನಂತರ ರಾಜ್ಯದ ಹಣಕಾಸು ಸ್ಥಿತಿಗತಿ ಇಳಿಕೆಯಾಗಿರುವ ಸಂದರ್ಭದಲ್ಲಿ ಅನೇಕ ಸವಾಲಿನ ಮಧ್ಯೆ ಮುಖ್ಯ ಕಾರ್ಯದರ್ಶಿ ಹುದ್ದೆ ವಹಿಸಿಕೊಳ್ಳುತ್ತಿದ್ದಾರೆ.  

ಅವರ ಮುಂದಿರುವ ಅತಿದೊಡ್ಡ ಸವಾಲು ತೆರಿಗೆ ಸಂಗ್ರಹ. ಹಣಕಾಸು ಕೊರತೆಯನ್ನು ಶೇ. 3ಕ್ಕಿಂತ ಕಡಿಮೆ ಮಾಡಬೇಕಿದೆ. ರಾಜ್ಯವನ್ನು ಸಾಲಮುಕ್ತಗೊಳಿಸುವುದು, ದೇಶೀಯ ಒಟ್ಟು ಸರಾಸರಿ ಉತ್ಪನ್ನದಲ್ಲಿ ರಾಜ್ಯದ ಪಾಲು ಶೇ. 25ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳುವುದು ಅವರ ಎದುರಿಗಿದೆ.  

ಓದಿ: ನಿವೃತ್ತಿಯಾಗಲಿರುವ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್​​​ಗೆ ಸಿಎಂ ಸನ್ಮಾನ

Last Updated : Dec 30, 2020, 4:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.