ETV Bharat / state

ಮುಂದಿನ 24 ಗಂಟೆಯೊಳಗೆ ಭಾರತಕ್ಕೆ ಬರುತ್ತೇನೆ: ಮನ್ಸೂರ್​​​ನಿಂದ ಮತ್ತೊಂದು ವಿಡಿಯೋ - undefined

ಮುಂದಿನ 24 ಗಂಟೆಯೊಳಗೆ ಭಾರತಕ್ಕೆ ವಾಪಸ್ ಬರುತ್ತೇನೆಂದು ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್​ ಖಾನ್​ ವಿಡಿಯೋ ಮೂಲಕ ತಿಳಿಸಿದ್ದಾನೆ.

ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್
author img

By

Published : Jul 15, 2019, 4:10 PM IST

Updated : Jul 15, 2019, 5:01 PM IST

ಬೆಂಗಳೂರು: ಐಎಂಎ ಸಂಸ್ಥೆಯ ಮಾಲೀಕ ಮೊಹಮ್ಮದ್​ ಮನ್ಸೂರ್​ ಖಾನ್​ ಮತ್ತೊಂದು ವಿಡಿಯೋ ಬಿಟ್ಟಿದ್ದು, ಮುಂದಿನ 24 ಗಂಟೆಯೊಳಗೆ ಭಾರತಕ್ಕೆ ವಾಪಸ್​ ಬರುವುದಾಗಿ ಹೇಳಿದ್ದಾನೆ.

ಇನ್ನೂ 24 ಗಂಟೆಗಳಲ್ಲಿ ಬರುವುದಾಗಿ ಹೇಳಿರುವ ಮನ್ಸೂರ್​​​, ಒಂದು ಪಕ್ಷ ನಾನು ಬೆಂಗಳೂರಿಗೆ ಬಂದರೆ ಪೊಲೀಸರು ರಕ್ಷಣೆ ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾನೆ. ಅನಾರೋಗ್ಯ ಕಾರಣದಿಂದ ತಾಯ್ನಾಡಿಗೆ ಬರಲು ಸಾಧ್ಯವಾಗಿಲ್ಲ. ಸದ್ಯ ನನ್ನ ಆರೋಗ್ಯ ಸುಧಾರಿಸಿದೆ. ಇನ್ನೊಂದು ದಿನದಲ್ಲಿ ಬೆಂಗಳೂರಿಗೆ ಬಂದು ಹೂಡಿಕೆದಾರರ ಹಣ ನೀಡುವೆ ಎಂದಿದ್ದಾನೆ.

ಮನ್ಸೂರ್​​​ ಹರಿಬಿಟ್ಟಿರುವ ಏಳು ನಿಮಿಷದ ವಿಡಿಯೋದಲ್ಲಿ ತನ್ನ ಆರೋಗ್ಯ ಸಮಸ್ಯೆ ಬಗ್ಗೆ ಕಣ್ಣೀರು ಹಾಕಿದ್ದಾನೆ. ನನಗೆ ಹುಷಾರಿಲ್ಲದ ಕಾರಣ ಬೆಡ್ ರೆಸ್ಟ್​​​ನಲ್ಲಿದೆ.ಈಗ ನಾನು ಗುಣಮುಖನಾಗಿರುವ ಕಾರಣ ವಿಡಿಯೋ ಮಾಡುತ್ತಿದ್ದೇನೆ. ನಾನು ಹಿಂದಿನ ವಿಡಿಯೋದಲ್ಲಿ ಆದಷ್ಟು ಬೇಗ ಭಾರತಕ್ಕೆ ಬರುತ್ತೇನೆ ಎಂದಿದ್ದೆ. ಆದರೆ ಡಯಾಬಿಟಿಸ್ ಹಾಗೂ ಕೆಲ ಆರೋಗ್ಯದ ಸಮಸ್ಯೆಯಿಂದ ಬೆಡ್ ರಸ್ಟ್​​​ನಲ್ಲೇ ಇರಬೇಕಾಯ್ತು. ನಾನು ಇಂದು ಹೇಳುತ್ತಿದ್ದೇನೆ ಮುಂದಿನ 24 ಗಂಟೆಯೊಳಗೆ ನಾನು ಬರುತ್ತೇನೆ ಎಂದಿದ್ದಾನೆ.

  • " class="align-text-top noRightClick twitterSection" data="">

ಮೊದಲನೆಯದಾಗಿ ನಾನು ಭಾರತ ಬಿಟ್ಟು ಹೋಗಿದ್ದು ದೊಡ್ಡ ತಪ್ಪು, ರಾಜಕಾರಣಿಗಳ ಒತ್ತಡದಿಂದ ನಾನು ಭಾರತವನ್ನ ಬಿಡಬೇಕಾಯ್ತು.ಈಗಲೂ ನನಗೆ ನನ್ನ ಫ್ಯಾಮಿಲಿ ಎಲ್ಲಿದೆ ಗೊತ್ತಿಲ್ಲ, ಹೇಗಿದ್ದಾರೆ ಗೊತ್ತಿಲ್ಲ. ನಾನು ಒಂದಷ್ಟು ಲಿಸ್ಟ್ ಮಾಡಿದ್ದೇನೆ ಯಾರಿಂದ ಹಣ ರಿಕವರಿ ಮಾಡಬಹುದು ಎಂದು. ಐಎಂಎ ಪ್ರಕರಣದ ತನಿಖೆಗೆ ಬೇಕಾಗುವ ಎಲ್ಲಾ ದಾಖಲೆಗಳನ್ನ ನಾನು ಅಧಿಕಾರಿಗಳಿಗೆ ಕೊಡುತ್ತೇನೆ. ನಾನು ಬರುತ್ತಿರುವುದು ಹಣ ವಾಪಾಸ್ ಕೊಡುವುದಕ್ಕಾಗಿ, ಅಧಿಕಾರಿಗಳಿಗಾಗಿ. ನಾನು ಬಂದಲ್ಲಿ ಎಲ್ಲಾ ದಾಖಲೆಗಳನ್ನ ತೆಗೆದುಕೊಂಡು ಅದರ ಹಣ ವಾಪಸ್ ಕೊಟ್ಟುಬಿಡಿ. ಯಾಕಂದ್ರೆ ನನ್ನ ಆರೋಗ್ಯ ಸರಿಯಿಲ್ಲ, ಅಲ್ಲದೆ ಕಾರ್ಡಿಯಕ್ ಆಪರೇಷನ್ ಆಗಬೇಕು. ನನಗೆ ಮೂರು ಬ್ಲಾಕ್​​​​ಗಳು ಆಗಿವೆ. ಹೀಗಾಗಿ ನನ್ನ ಆರೋಗ್ಯ ಹದಗೆಟ್ಟಿದೆ ಎಂದು ಹೇಳುತ್ತಿದ್ದಂತೆ ವಿಡಿಯೋ ಮಾಡುತ್ತಲೇ ಅತ್ತ ಮನ್ಸೂರ್ ಕಣ್ಣೀರು ಸುರಿಸಿದ್ದಾನೆ.

ಮನ್ಸೂರ್​ ದುಬೈನಿಂದ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಮೇರೆಗೆ ಆರೋಪಿ ವಿರುದ್ಧ ಈಗಾಗಲೇ ಬ್ಲ್ಯೂ ಕಾರ್ನರ್​ ನೋಟಿಸ್​ ಜಾರಿ ಮಾಡಲಾಗಿದೆ. ಅಲ್ಲದೆ, ಆತನ ಪಾಸ್​​ಪೋರ್ಟ್​ ಜಪ್ತಿ ಮಾಡಿಕೊಳ್ಳಲಾಗಿದೆ. ಸಾಮಾನ್ಯ ಪ್ರಯಾಣಿಕನಾಗಿ ಮುಂದಿನ 24 ಗಂಟೆಯೊಳಗೆ ಭಾರತಕ್ಕೆ ಬರಬಹುದು. ಆದ್ರೆ ಮನ್ಸೂರ್​ ಬರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಎಸ್​ಐಟಿ ಅಧಿಕಾರಿಗಳು.

Intro:Body:ಮುಂದಿನ 24 ಗಂಟೆಯೊಳಗೆ ಭಾರತಕ್ಕೆ ಬರ್ತೆನೆ: ಮನ್ಸೂರ್ ನಿಂದ ಮತ್ತೊಂದು ವಿಡಿಯೋ
ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಐಎಂಎ ಸಂಸ್ಥೆಯ ಮಾಲೀಕ ಮೊಹಮ್ಮದ್​ ಮನ್ಸೂರ್​ ಖಾನ್​ ಮತ್ತೊಂದು ವಿಡಿಯೊ ಮಾಡಿದ್ದು, ಮುಂದಿನ 24 ಗಂಟೆಯೊಳಗೆ ಭಾರತಕ್ಕೆ ವಾಪಸ್​ ಬರುವುದಾಗಿ ಹೇಳಿಕೆ ನೀಡಿದ್ದಾನೆ.
ಇನ್ನೂ 24 ಗಂಟೆಗಳಲ್ಲಿ ಬರುವುದಾಗಿ ಹೇಳಿಕೆ ನೀಡಿರುವ ಮನ್ಸೂರ್​​​ ಬೆಂಗಳೂರಿಗೆ ಬಂದರೆ ರಕ್ಷಣೆ ನೀಡುತ್ತಾರೆಯೇ ಎಂದು ಪೊಲೀಸರಿಗೆ ಪ್ರಶ್ನಿಸಿದ್ದಾನೆ. ಅನಾರೋಗ್ಯ ಕಾರಣದಿಂದ ತಾಯ್ನಾಡಿಗೆ ಬರಲು ಸಾಧ್ಯವಾಗಿಲ್ಲ. ಸದ್ಯ ನನ್ನ ಆರೋಗ್ಯ ಸುಧಾರಿಸಿದೆ. ಇನ್ನೊಂದು ದಿನದಲ್ಲಿ ಬೆಂಗಳೂರಿಗೆ ಬಂದು ಹೂಡಿಕೆದಾರರ ಹಣ ನೀಡುವೆ.
ಭಾರತ ಬಿಟ್ಟು ಹೋಗಿದ್ದೆ ನನ್ನ ತಪ್ಪು. ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ದೇಶ ಬಿಟ್ಟು ಹೋಗಿದ್ದೆ. ಇದೀಗ ನನ್ನ ಆರೋಗ್ಯ ಸುಧಾರಿಸಿದೆ. ಇನ್ನೂ ಆರು ಗಂಟೆಯೊಳಗೆ ಭಾರತಕ್ಕೆ ಮರಳಲು ಸಿದ್ದತೆ ನಡೆಸಿದ್ದೇನೆ ಎಂದು ವಿಡಿಯೋ ಹೇಳಿದ್ದಾನೆ.
ಮನ್ಸೂರ್​ ದುಬೈನಿಂದ ತಲೆಮರೆಸಿಕೊಂಡಿದ್ದಾನೆ ಎಂದ ಮಾಹಿತಿ ಮೇರೆಗೆ ಆರೋಪಿ ವಿರುದ್ದ ಈಗಾಗಲೇ ಬ್ಲ್ಯೂಕಾರ್ನರ್​ ನೊಟೀಸ್​ ಜಾರಿ ಮಾಡಲಾಗಿದೆ. ಅಲ್ಲದೆ, ಆತನ ಪಾಸ್​ಪೋರ್ಟ್​ ಜಪ್ತಿ ಮಾಡಿಕೊಳ್ಳಲಾಗಿದೆ, ಸಾಮಾನ್ಯ ಪ್ರಯಾಣಿಕನಾಗಿ ಮುಂದಿನ 24 ಗಂಟೆಯೊಳಗೆ ಭಾರತಕ್ಕೆ ಬರಬಹುದು. ಮನ್ಸೂರ್​ ಬರಲು ಸಾಧ್ಯವೆ ಇಲ್ಲ ಇನ್ನುತ್ತಾರೆ ಎಸ್​ಐಟಿ ಅಧಿಕಾರಿಗಳು
Conclusion:
Last Updated : Jul 15, 2019, 5:01 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.