ETV Bharat / state

ನಾನು ನಾಯಕ ಅಲ್ಲ, ಹೀಗೆ ಎಲ್ಲೂ ಹೇಳಿಲ್ಲ: ಸಚಿವ ರಮೇಶ್ ಜಾರಕಿಹೊಳಿ

author img

By

Published : Nov 28, 2020, 3:15 PM IST

ನಾನು ನಾಯಕ ಅಂತ ಎಲ್ಲೂ ಹೇಳಿಲ್ಲ. ಸಾಮೂಹಿಕ ನಾಯಕತ್ವದಲ್ಲೇ ನಾವು ಬಿಜೆಪಿಗೆ ಬಂದಿದ್ದು, ನಾನು 17 ಶಾಸಕರ ನಾಯಕ ಅಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿ
Minister Ramesh Jarkiholi

ಬೆಂಗಳೂರು: ನಾನು ನಾಯಕ ಅಲ್ಲ. ಸಾಮೂಹಿಕ‌ ನಾಯಕತ್ವದಿಂದಲೇ ಬಿಜೆಪಿಗೆ ಬಂದಿದ್ದೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಸಚಿವ ರಮೇಶ್ ಜಾರಕಿಹೊಳಿ

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ಧದ ಪ್ರತ್ಯೇಕ ಸಭೆ ಬಗ್ಗೆ ಪ್ರತಿಕ್ರಿಯಿಸಿ, ನಾನು ನಾಯಕ ಅಂತ ಎಲ್ಲೂ ಹೇಳಿಲ್ಲ. ಸಾಮೂಹಿಕ ನಾಯಕತ್ವದಲ್ಲೇ ನಾವು ಬಿಜೆಪಿಗೆ ಬಂದಿದ್ದು, ನಾನು 17 ಶಾಸಕರ ನಾಯಕ ನಾನಲ್ಲ. ಸಭೆಯಲ್ಲಿ ನನ್ನ ಬಗ್ಗೆ ಚರ್ಚೆ ಆಗಿದೆ ಎಂಬುದು ನನಗೆ ಗೊತ್ತಿಲ್ಲ. ಸಭೆ ನಡೆಸಿದವರೇ ಬಂದು ಹೇಳಲಿ‌. ನಾನು ಅವರ ಬಳಿ ಸಭೆ ಬಗ್ಗೆ ಕೇಳಿ ಸಣ್ಣನವನಾಗಲ್ಲ. ಅವರು ನನ್ನ ಬಗ್ಗೆ ಏನೇ ಹೇಳಿದರೂ ನಾನು ಅವರ ಪರ ಹೋರಾಟ ನಡೆಸುವುದನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ತರಹದ ಸಭೆಗಳನ್ನು ನಡೆಸೋದು ಬಂದ್ ಆಗಬೇಕು. ಇದು ಶಿಸ್ತಿನ ಪಕ್ಷ. ಇಲ್ಲಿ ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮವಾಗಬೇಕು. ಪರ್ಯಾಯ ಸಭೆಗಳು ಬಂದ್ ಆಗಲಿ ಅನ್ನೋದು ನನ್ನ ಆಗ್ರಹ ಎಂದು ಮಿತ್ರ ಮಂಡಳಿ ಸಹವರ್ತಿಗಳಿಗೆ ರಮೇಶ್ ತಿರುಗೇಟು ನೀಡಿದರು.

ಅವರೆಲ್ಲರಿಗೂ ಸಚಿವ ಸ್ಥಾನ ನೀಡಬೇಕು. ಅದು ನಮ್ಮ ಒತ್ತಾಯವಾಗಿದೆ. ಕೆಲವೊಂದು ವಿಚಾರವನ್ನು ನಾನು ಬಹಿರಂಗವಾಗಿ ಹೇಳೋಕೆ ಆಗಲ್ಲ. ಸಿಎಂ ಹಾಗೂ ಹೈಕಮಾಂಡ್ ಜೊತೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ನಾನು 2020ರಲ್ಲಿ ಗ್ರೂಪಿಸಮ್ ಮಾಡುವುದು ಬಿಟ್ಟಿದ್ದೇನೆ. ಕೇವಲ ಇಲಾಖೆ ವತಿಯಿಂದ ಆಗಬೇಕಾದ ಕೆಲಸದ ಬಗ್ಗೆ ಗಮನ ಕೊಡುತ್ತೇನೆ. 2023ರ ಚುನಾವಣೆಗೆ ನಾನು ಇಲಾಖೆಯಲ್ಲಿ ಒಳ್ಳೆ ಕೆಲಸ ಮಾಡಿ ಹೆಸರು ಮಾಡಬೇಕು. ದೆಹಲಿಗೆ ಸಿ.ಟಿ.ರವಿ ಆಫೀಸ್ ಪೂಜೆಗೆ ಹೋಗಿದ್ದೇನೆ. ಈಗ ಊರಿಗೆ ಹೋಗ್ತಾ ಇದ್ದೇನೆ‌. ಅಧಿವೇಶನ ದಿನ ಬೆಂಗಳೂರಿಗೆ ಬರುತ್ತೇನೆ. ಇಂದು ಸಿಎಂ ಭೇಟಿ ಮಾಡಿ ದೆಹಲಿಯ ಭೇಟಿ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.

ನಾವು ಬೆಳಗಾವಿಯವರು, ನೇರವಂತರು:

ಇತ್ತೀಚೆಗೆ ದೆಹಲಿಗೆ ಹೋದ ಸಚಿವರು ಎನ್.ಆರ್.ಸಂತೋಷ್​​ ವಿಡಿಯೋ ಸಿಡಿ ಹೈಕಮಾಂಡ್​​ಗೆ ನೀಡಿದ್ದಾರೆ ಎಂಬ ಬಗ್ಗೆ ಡಿಕೆಶಿ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ. ಡಿಕೆಶಿ ಯಾವ ಸಚಿವರ ಬಗ್ಗೆ ಹೇಳಿದ್ರೋ ಗೊತ್ತಿಲ್ಲ. ದೆಹಲಿಗೆ ನಾನೊಬ್ಬನೇ ಹೋಗಿರಲಿಲ್ಲ. ಆರ್.ಅಶೋಕ್ ಸಹ ಹೋಗಿದ್ದರು ಎಂದು ತಮಾಷೆಯಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.