ETV Bharat / state

ಕೋವಿಡ್ ಲಸಿಕೆ ಬಗ್ಗೆ ವಿಶೇಷ ಗಮನ ಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸಿಎಂ

author img

By

Published : Jan 19, 2022, 11:29 AM IST

Updated : Jan 19, 2022, 12:40 PM IST

ಕೋವಿಡ್ ಲಸಿಕೆ ಬಗ್ಗೆ ವಿಶೇಷ ಗಮನ ನೀಡಲು ಅಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

CM Bommai press meent, CM Bommai held meeting with state DC, CM Bommai news, ಸಿಎಂ ಬೊಮ್ಮಾಯಿ ಸುದ್ದಿ, ರಾಜ್ಯದ ಡಿಸಿಗಳ ಜೊತೆ ಸಿಎಂ ಬೊಮ್ಮಾಯಿ, ಸಿಎಂ ಬೊಮ್ಮಾಯಿ ಸುದ್ದಿ,
ಕೋವಿಡ್ ಲಸಿಕೆ ಬಗ್ಗೆ ವಿಶೇಷ ಗಮನ ನೀಡಲು ಸೂಚನೆ ನೀಡಿದ್ದೇನೆ ಎಂದ ಸಿಎಂ

ಬೆಂಗಳೂರು: ನಿನ್ನೆ ನಡೆದ ಡಿಸಿಗಳ ಜತೆ ಸಭೆಯಲ್ಲಿ ಕೋವಿಡ್ ಲಸಿಕೆ ಬಗ್ಗೆ ವಿಶೇಷ ಗಮನ ಕೊಡಲು ಸೂಚಿಸಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸುಮಾರು 11, 12 ದಿನ ಮನೇಲಿದ್ದೆ. ಕ್ವಾರಂಟೈ ಸಹ ಮುಗಿದಿದೆ. ಇಂದಿನಿಂದ ಕಚೇರಿಯಲ್ಲಿ ಕೆಲಸ ಮಾಡ್ತೇನೆ. ಶುಕ್ರವಾರ ಮತ್ತೆ ತಜ್ಞರ ಜತೆ ಸಭೆ ನಡೆಸುತ್ತೇನೆ. ಹಾಲಿ ನಿರ್ಬಂಧಗಳ ಪುನರ್ ಪರಿಶೀಲನೆ ಮಾಡ್ತೇವೆ ಎಂದು ಹೇಳಿದರು.

ವೀಕೆಂಡ್ ಕರ್ಫ್ಯೂ ವಾಪಸ್, ನಿರ್ಬಂಧಗಳ ಸಡಿಲಿಕೆ ಬಗ್ಗೆ ತಜ್ಞರ ಅಭಿಪ್ರಾಯದಂತೆ ನಿರ್ಧಾರ ಕೈಗೊಳ್ಳಲಾಗುವುದು. ಫೆಬ್ರವರಿಯಲ್ಲಿ ಕೋವಿಡ್ ಪ್ರಕರಣಗಳು ಅತಿ ಹೆಚ್ಚು ಸಂಖ್ಯೆಗೆ ತಲುಪುವ ವಿಚಾರ ಕುರಿತು ಮಾತನಾಡಿ, ಜನವರಿ ಅಂತ್ಯಭಾಗದಿಂದ ಫೆಬ್ರವರಿ ಮಧ್ಯಭಾಗದವರೆಗೂ ಕೋವಿಡ್ ಹೆಚ್ಚಾಗುತ್ತೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಬೇರೆ ಬೇರೆ ದೇಶಗಳ ಟ್ರೆಂಡ್ ನೋಡಿ ಅಂದಾಜು ಮಾಡಿದ್ದಾರೆ ಎಂದರು.

ಎಲ್ಲರೂ ಏನ್ ಚರ್ಚೆ ಮಾಡ್ತಿದಾರೆ ಅಂದ್ರೆ, ಈಗ ಕೋವಿಡ್ ಫ್ಲೂ ಥರ ಬಂದು ಹೋಗುತ್ತೆ. ಆಸ್ಪತ್ರೆಗಳಿಗೂ ಹೆಚ್ಚು ದಾಖಲಾತಿ ಆಗ್ತಿಲ್ಲ. ಹೀಗಾಗಿ ನಾವು ದೈನಂದಿನ ಕೆಲಸಗಳನ್ನು ಮಾಡ್ಕೋಬಹುದು ಅನ್ನೋ‌ ಭಾವನೆ ಇದೆ. ಈ‌ ಹಿನ್ನೆಲೆ ನಿಯಮಗಳ‌ ಸಡಿಲಿಕೆ ಬಗ್ಗೆ ತಜ್ಞರು ಪರಾಮರ್ಶೆ ಮಾಡ್ತಿದಾರೆ. ಶುಕ್ರವಾರದ ಸಭೆಯಲ್ಲಿ ತಜ್ಞರ ಜತೆ ಚರ್ಚಿಸ್ತೇನೆ. ತಜ್ಞರ ಸಲಹೆಯಂತೆ ಸಡಿಲಿಕೆ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕೊರೊನಾ ವಾರಿಯರ್ಸ್ ಬಗ್ಗೆ ತೀವ್ರ ಗಮನ ಕೊಡಲು ಸೂಚನೆ ನೀಡಿದ್ದೇನೆ. ಹೋಂ ಐಸೋಲೇಷನ್​ನಲ್ಲಿ ಶೇ.94ರಷ್ಟು ಸೋಂಕಿತರು ಇದ್ದಾರೆ. ಇವರ ಮೇಲೆ ಹೆಚ್ಚಿನ ಗಮನ ಕೊಡಲು ಸೂಚಿಸಲಾಗಿದೆ. ಬೂಸ್ಟರ್ ಡೋಸ್ ಕಡೆ ಗಮನ ಕೊಡಲು ಜಿಲ್ಲಾಡಳಿತಗಳಿಗೆ ಈ ಎಲ್ಲ ಸೂಚನೆ ನೀಡಿದ್ದೇನೆ ಎಂದರು.

ಓದಿ: ಯುಪಿ ವಿಧಾನಸಭೆ ಚುನಾವಣೆ: ಮುಲಾಯಂ ಸೊಸೆ ಬಿಜೆಪಿ ಸೇರ್ಪಡೆ

ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿಗರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾರೇ ರೂಲ್ಸ್ ಬ್ರೇಕ್ ಮಾಡಿದರೂ ಕ್ರಮ ಕೈಗೊಳ್ತೇವೆ. ನಮ್ಮ ಪಕ್ಷದವರು, ಬೇರೆಯವರು ಎಂದು ನೋಡದೇ ಕ್ರಮ. ಈ ಬಗ್ಗೆ ಸಿಎಸ್ ರವಿಕುಮಾರ್​ಗೆ ಸೂಚನೆ ನೀಡಿದ್ದೇನೆ. ಕಾಂಗ್ರೆಸ್​ನವರು ದೂರು ಕೊಡುವ ಅಗತ್ಯ ಇಲ್ಲ. ಯಾರೇ ಕೋವಿಡ್ ನಿಯಮ ಉಲ್ಲಂಘಿಸಿದರೂ ಕ್ರಮ ಖಂಡಿತ ಎಂದರು. ಸಚಿವ ಸಂಪುಟ ಪುನಾರಚನೆ ವಿಚಾರದ ಬಗ್ಗೆ ಮಾತನಾಡಿ, ಇದರ ಬಗ್ಗೆ ನಾನು ಸಾರ್ವಜನಿಕವಾಗಿ ಮಾತಾಡಲ್ಲ ಎಂದರು.

ಯೋಗೇಶ್ವರ್ ಭೇಟಿ: ಮಾಜಿ ಸಚಿವ ಸಿಪಿ ಯೋಗೇಶ್ವರ್ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದರು. ಆರ್ ಟಿ ನಗರ ನಿವಾಸದಲ್ಲಿ ಕೆಲಕಾಲ ಚರ್ಚಿಸಿದ ಬಳಿಕ ಸಿಎಂ ಜೊತೆ ಅವರ ರೇಸ್ ಕೋರ್ಸ್ ನಿವಾಸಕ್ಕೆ ತೆರಳಿದರು.

Last Updated : Jan 19, 2022, 12:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.