ಬೆಂಗಳೂರು: 17 ಜನ ಪುಣ್ಯಾತ್ಮರು ಬಿಟ್ಟು ಹೋಗಿ ನನ್ನ ಸೇವ್ ಮಾಡಿದ್ರು ಅನ್ನೋ ಹೆಚ್‌ಡಿಕೆ ಹೇಳಿಕೆ ನನಗೆ ಅರ್ಥ ಆಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚ್ಯವಾಗಿ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹೆಚ್‌ಡಿಕೆ ಹೇಳಿಕೆ ನನಗೆ ಅರ್ಥ ಆಗ್ತಿಲ್ಲ. ಇದು ಪತ್ರಿಕೆಗಳಲ್ಲಿ ಬಂದಿದೆ. ನಾನು ಎರಡು ಮೂರು ಬಾರಿ ಓದಿದೆ. ಇನ್ನೂ ಓದುತ್ತಿದ್ದೇನೆ ನನಗೆ ಅರ್ಥ ಆಗುತ್ತಿಲ್ಲ. 17 ಶಾಸಕರು ಪಕ್ಷ ಬಿಟ್ಟು ಹೋದ್ರು. ಸರ್ಕಾರಕ್ಕೆ ಬ್ಯಾಕ್ ಸ್ಟಾಬ್ ಮಾಡಿದ್ರು ಎಂದು ಕಿಡಿ ಕಾರಿದರು.
ನನ್ನ ಲೆವಲ್ ಅಲ್ಲ: ಶ್ರೀರಾಮುಲು ಪಿಎ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ ಡಿಕೆಶಿ, ಪಿಎಗಳ ಬಗ್ಗೆ ನಾನು ಮಾತನಾಡಲ್ಲ. ಅವರಲ್ಲಿ ಇರೋ ಸಮಸ್ಯೆ ಬಗ್ಗೆ ನೀವು ತೋರಿಸುತ್ತಿದ್ದೀರಿ, ಅದನ್ನ ನೋಡ್ತಿದ್ದೇವೆ. ಅದು ರಾಮುಲು, ವಿಜಯೇಂದ್ರ ವಿಚಾರ. ನನ್ನ ಲೆವಲ್ ಅಲ್ಲ ಎಂದರು.
ಈಶ್ವರಪ್ಪಗೆ ತೋರಿಸುತ್ತೇವೆ: ಕಾಂಗ್ರೆಸ್ಗೆ ಅಪ್ಪ ಅಮ್ಮ ಇಲ್ಲ ಅನ್ನೋ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಧಾನ ಸಭಾ ಚುನಾವಣೆ ಬರಲಿ ಈಶ್ವರಪ್ಪ ಗೆ ತೋರಿಸುತ್ತೇವೆ. ಪಾಪ ಈಗ ಇದರ ಬಗ್ಗೆ ಮಾತನಾಡುವುದು ಬೇಡ ಎಂದು ವ್ಯಂಗ್ಯವಾಗಿ ಉತ್ತರ ನೀಡಿದರು.
ನೀವೇ ತೋರಿಸಿದ್ದೀರಿ: ಕೆಪಿಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದು ವರ್ಷ ಏನು ಮಾಡಿದ್ದೀನಿ ಎಂದು ಈ ರೀತಿ ನಿಂತುಕೊಂಡು ಹೇಳುವುದಿಲ್ಲ. ಏನು ಮಾಡಿದ್ದೀನಿ ಅನ್ನೋದನ್ನ ನೀವೇ ತೋರಿಸಿದ್ದೀರಿ ಎಂದರು.
ಇದನ್ನೂ ಓದಿ: ಪಿಎ ಆಗಲಿ, ಯಾರೇ ಆಗಲಿ ತಪ್ಪು ಮಾಡಿದ್ರೆ ಕಾನೂನು ಕ್ರಮ ಆಗಲೇಬೇಕು: ಸಿದ್ದರಾಮಯ್ಯ