ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಸಿಲುಕಿರುವ ನಟಿ ಸಂಜನಾ ಗಲ್ರಾನಿ ಲಾಕ್ಡೌನ್ ಸಮಯದಲ್ಲಿ ಮಾಸ್ಕ್ ಬ್ಯುಸಿನೆಸ್ ಮಾಡುತ್ತಿದ್ದೆ ಎಂದು ಸಿಸಿಬಿ ಅಧಿಕಾರಿಗಳ ಬಳಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಂಜನಾ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸಿದಾಗ ಅನೇಕ ವಸ್ತುಗಳು ಸಿಕ್ಕಿದ್ದವು. ಅದರಲ್ಲಿ ನೂರಕ್ಕೂ ಹೆಚ್ಚು ವಿವಿಧ ಬಣ್ಣದ ಮಾಸ್ಕ್ ಸಹ ದೊರೆತಿವೆ. ಈ ಬಗ್ಗೆ ಅಧಿಕಾರಿಗಳು ಸಂಜನಾ ಬಳಿ ಕೇಳಿದಾಗ 'ನಾನು ಲಾಕ್ ಡೌನ್ ಟೈಂನಲ್ಲಿ ಮಾಡಿಕೊಂಡಿರುವ ಮಾಸ್ಕ್ ಬ್ಯುಸಿನೆಸ್' ಎಂದು ಉತ್ತರ ನೀಡಿದ್ದಾರೆ ಎನ್ನಲಾಗ್ತಿದೆ.
ಆದರೆ ಸಂಜನಾ ಮಾಸ್ಕ್ ನೆಪದಲ್ಲಿ ಮನೆಗೆ ಇತರೆ ಡ್ರಗ್ ಪೆಡ್ಲರ್ ಕರೆದು ಪಾರ್ಟಿ ಮಾಡುತ್ತಿದ್ರು. ಹೀಗಾಗಿ ಮಾಸ್ಕ್ ನೀಡುವ ನೆಪದಲ್ಲಿ ಡ್ರಗ್ಸ್ ಪೂರೈಸುತ್ತಿದ್ದರು ಎಂಬ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ.
ಮತ್ತೊಂದೆಡೆ ಸಂಜನಾ ಗಲ್ರಾನಿ ರೂಂನಲ್ಲಿ ಅವರ ಸಿಗ್ನೇಚರ್ ಇರುವ ಬಹುತೇಕ ಬ್ಯಾಂಕ್ ಚೆಕ್ಗಳು ಪತ್ತೆಯಾಗಿವೆ. ಕೆಲವು ಬೇರೆಯವರ ಹೆಸರಿನಲ್ಲಿರುವ ಚೆಕ್ ಸಂಜನಾ ಹೆಸರಿನಲ್ಲಿ ಬಂದಿವೆ. ಸದ್ಯ ಸಿಸಿಬಿ ಪ್ರಮುಖ ದಾಖಲೆಗಳ ಸಮೇತ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ ಎಂದು ಹೇಳಲಾಗ್ತಿದೆ.