ETV Bharat / state

3 ತಿಂಗಳ ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಕುಡುಕ - ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪತಿ

ಗಂಡನ ಕಿರುಕುಳಕ್ಕೆ ರೋಸಿ ಹೋಗಿದ್ದ ಮೀನಾ, ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗಂಡನಿಗೆ ಬೆದರಿಸಿದ್ದಳು‌‌. ಇದರಿಂದ ಅಕ್ರೋಶಗೊಂಡ ಬಾಬು, ನೀನ್ಯಾಕೆ ಸಾಯುತ್ತೀಯ?, ನಾನೇ ಸಾಯಿಸುವೆ ಎಂದು ಡೀಸೆಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾನೆ.‌.

ಕುಡುಕ ಗಂಡ
ಕುಡುಕ ಗಂಡ
author img

By

Published : Mar 11, 2022, 11:50 AM IST

ಬೆಂಗಳೂರು : ಮೂರು ತಿಂಗಳ ಗರ್ಭಿಣಿ ಮೈಮೇಲೆ ಪತಿಯೇ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಕಾಕ್ಸ್‌ಟೌನ್ ದೊಡ್ಡಗುಂಟೆಯಲ್ಲಿ ವಾಸವಾಗಿದ್ದ ಮೀನಾಗೆ (23) ಎಂಬುವರು ಏಳು ವರ್ಷಗಳ ಹಿಂದೆ ವಿಜಯ್ ​ಕಾಂತ್ ಎಂಬಾತನೊಂದಿಗೆ ವಿವಾಹವಾಗಿದ್ದರು.‌ ದಂಪತಿಗೆ ಮೂರು ಮಕ್ಕಳಿದ್ದಾರೆ. ಆದ್ರೆ, ದುರಾದೃಷ್ಟವಶಾತ್ ಮೂರು ವರ್ಷಗಳ ಹಿಂದೆ ವಿಜಯ್ ಕಾಂತ್ ನಿಧನರಾಗಿದ್ದರು‌.

ಪಕ್ಕದ ನಿವಾಸಿಯಾಗಿದ್ದ ಬಾಬು ಎಂಬಾತ ಮೀನಾಳನ್ನ ಮದುವೆಯಾಗುವುದಾಗಿ ಹೇಳಿದ್ದ.‌ ಇದಕ್ಕೆ ಒಪ್ಪಿಗೆ ನೀಡಿದ್ದ ಮೀನಾ, ಏಳು ತಿಂಗಳ ಹಿಂದೆ ಬಾಬು ಜೊತೆ ಮದುವೆಯಾಗಿ ಬೈಯಪ್ಪನಹಳ್ಳಿಯ ಪುಟ್ಟಪ್ಪ ಬಿಲ್ಡಿಂಗ್​ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು‌.

ಬಾಬು ಕೂಲಿ ಕೆಲಸ ಮಾಡುತ್ತಿದ್ದರೆ, ಮೀನಾ ಸಣ್ಣ-ಪುಟ್ಟ ಮನೆ ಕೆಲಸ ಮಾಡುತ್ತಿದ್ದಳು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು‌‌. ಕಾಲ ಕ್ರಮೇಣ ಕುಡಿತಕ್ಕೆ ದಾಸನಾದ ಬಾಬು, ಪ್ರತಿ ದಿನ ಕುಡಿದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಅಲ್ಲದೇ, ಕುಡಿಯಲು ಹಣ ನೀಡುವಂತೆ ಪೀಡಿಸುತ್ತಿದ್ದ.

ಗಂಡನ ಕಿರುಕುಳಕ್ಕೆ ರೋಸಿ ಹೋಗಿದ್ದ ಮೀನಾ, ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗಂಡನಿಗೆ ಬೆದರಿಸಿದ್ದಳು‌‌. ಇದರಿಂದ ಅಕ್ರೋಶಗೊಂಡ ಬಾಬು, ನೀನ್ಯಾಕೆ ಸಾಯುತ್ತೀಯ?, ನಾನೇ ಸಾಯಿಸುವೆ ಎಂದು ಡೀಸೆಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾನೆ.‌

ಕೂಡಲೇ ಸ್ಥಳೀಯರು ಮೀನಾಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.‌ ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ‌.

ಇದನ್ನೂ ಓದಿ: ಐಟಿ ರಿಟರ್ನ್ಸ್, ಆಧಾರ್-ಪ್ಯಾನ್ ಕಾರ್ಡ್​​ ಜೋಡಣೆ ಮರೆಯದಿರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.