ETV Bharat / state

ಬೆಂಗಳೂರು: ಹೆಂಡತಿ ಕಪ್ಪಗಿದ್ದಾಳೆಂದು ಹಲ್ಲೆ ಮಾಡಿದ ಭೂಪ! - banglore latest crime news

ಹೆಂಡತಿ ಚೆನ್ನಾಗಿಲ್ಲ, ಕಪ್ಪಗಿದ್ದಾಳೆಂದು ಗಂಡ ಹಲ್ಲೆ ಮಾಡಿದ ಘಟನೆ ವಿಜಯನಗರದ ಮಾರೇನಹಳ್ಳಿ ಬಳಿ ನಡೆದಿದೆ. ವಿಜಯಲಕ್ಷ್ಮಿ ಹಲ್ಲೆಗೊಳಗಾದ ಪತ್ನಿ.

Husband  Deadly assault on wife
ವಿಜಯಲಕ್ಷ್ಮಿ ಹಲ್ಲೆಗೊಳಗಾದವರು
author img

By

Published : Mar 9, 2020, 1:37 PM IST

ಬೆಂಗಳೂರು: ಹೆಂಡತಿ ಚೆನ್ನಾಗಿಲ್ಲ. ಕಪ್ಪಗಿದ್ದಾಳೆಂದು ಗಂಡ ಹಲ್ಲೆ ಮಾಡಿದ ಘಟನೆ ವಿಜಯನಗರದ ಮಾರೇನಹಳ್ಳಿ ಬಳಿ ನಡೆದಿದೆ.

Husband  Deadly assault on wife
ಹೆಂಡತಿ ಕಪ್ಪಗಿದ್ದಾಳೆಂದು ಹಲ್ಲೆ ಮಾಡಿದ ಭೂಪ

ವಿಜಯಲಕ್ಷ್ಮಿ ಹಲ್ಲೆಗೊಳಗಾದ ಪತ್ನಿ. ವರ್ಷದ ಹಿಂದಷ್ಟೇ ಶಶಿಕುಮಾರ್ ಹಾಗೂ ವಿಜಯಲಕ್ಷ್ಮಿಗೆ ಮದುವೆಯಾಗಿತ್ತು. ಮದುವೆಯಾಗಿ 6 ತಿಂಗಳು ಚೆನ್ನಾಗಿದ್ದು, ನಂತರ ವರಸೆ ಬದಲಿಸಿದ್ದ ಪತಿ‌, ನೀನು ನೋಡಲು ಚೆನ್ನಾಗಿಲ್ಲ. ನಾನು ಬೇರೆ ವಿವಾಗವಾಗಬೇಕು ಎಂದು ನಿರಂತರವಾಗಿ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಈ ಹಿನ್ನೆಲೆ ಪತ್ನಿ ವಿಜಯಲಕ್ಷ್ಮಿ ಮನೆ ಬಿಟ್ಟು ತವರು ಮನೆ ಸೇರಿದ್ದಳು. ನಂತ್ರ ಇಬ್ಬರನ್ನೂ ಕೂರಿಸಿ ವಿಜಯಲಕ್ಷ್ಮಿ ಪೋಷಕರು ಬುದ್ಧಿವಾದ ಹೇಳಿದ್ದರು. ಆದರೂ ಶಶಿಕುಮಾರ್ ವಿಜಯಲಕ್ಷ್ಮಿಗೆ ವಿಚ್ಛೇದನಕ್ಕೆ ಅರ್ಜಿ ಹಾಕಿ ಸಹಿ ಮಾಡುವಂತೆ ಒತ್ತಾಯ ಮಾಡ್ತಿದ್ದ. ಸಹಿ ಮಾಡಲು ನಿರಾಕರಿಸಿದ್ದಕ್ಕೆ ನೀನು ಸತ್ತರೆ ನಾನು ಬೇರೆ ವಿವಾಹವಾಗಬಹುದು ಎಂದು ಕಬ್ಬಿಣದ ರಾಡ್​​​ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಸದ್ಯ ವಿಜಯಲಕ್ಷ್ಮಿಗೆ ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಮೇಲೆ ಹಲ್ಲೆ ಮಾಡಿದ ಪತಿ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ತನಗೆ ಸೂಕ್ತ ಭದ್ರತೆ ನೀಡುವಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.