ETV Bharat / state

ಎಷ್ಟು ದುಡಿದರೂ ದುಡ್ಡು ದುಡ್ಡು ಅಂತಾಳೆ.. ಪತ್ನಿಯ ಧನದಾಹಕ್ಕೆ ಬೇಸತ್ತು ಗಂಡ ಆತ್ಮಹತ್ಯೆ - ಈಟಿವಿ ಭಾರತ​ ಕರ್ನಾಟಕ

ಹಣಕ್ಕಾಗಿ ಹೆಂಡತಿ ಪೀಡಿಸುತ್ತಾಳೆ ಎಂದು ಬೇಸತ್ತು ಡೆತ್​ನೋಟ್​ ಬರೆದು ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

husband committed suicide for wife harassment
ಬೇಸತ್ತು ಗಂಡ ಆತ್ಮಹತ್ಯೆ
author img

By

Published : Nov 16, 2022, 3:54 PM IST

Updated : Nov 16, 2022, 4:07 PM IST

ಬೆಂಗಳೂರು: ಬಾರ್​ನಲ್ಲಿ ಕ್ಯಾಶಿಯರ್ ಆಗಿದ್ದು ಸುಖ ಸಂಸಾರ ನಡೆಸುವುದಕ್ಕೆ ಏನೂ‌ ತೊಂದರೆ ಇರಲಿಲ್ಲ. ಐದು ವರ್ಷದ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಒಂದು ಮಗು ಕೂಡ ಇದೆ. ಆದರೆ ಹೆಂಡತಿ ಕಾಟ ಕೊಡುತ್ತಿದ್ದಾಳೆ ಎಂದ ಬೇಸತ್ತು ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಶ್ರೀನಗರದ ಆವಲಹಳ್ಳಿಯಲ್ಲಿ ನಡೆದಿದೆ. ಮಂಡ್ಯ ಮೂಲದ ಅಣ್ಣಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.

ಅಣ್ಣಯ್ಯ ಉಮಾರನ್ನು ಐದು ವರ್ಷಗಳ ಹಿಂದೆ ಮದುವೆ ಆಗಿದ್ದರು. 'ಎಷ್ಟು ದುಡಿದರೂ ಹೆಂಡತಿ ದುಡ್ಡು ದುಡ್ಡು ಎನ್ನುತ್ತಾಳೆ. ನಾನು ಎಷ್ಟು ದುಡಿದರೂ ಸಾಕಾಗುವುದಿಲ್ಲಾ. ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಆಗಿದೆ. ನನ್ಮ ಸಾವಿಗೆ ನಾನೇ ಕಾರಣ' ಎಂದು ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಪ್ರಿಯಕರ ಆತ್ಮಹತ್ಯೆ.. ಜಾಲತಾಣದಲ್ಲಿ ಜೋಡಿ ಫೋಟೋ ವೈರಲ್, ಯುವತಿ ಬಾರದಲೋಕಕ್ಕೆ ಪಯಣ

Last Updated : Nov 16, 2022, 4:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.