ETV Bharat / state

ಬೆಂಗಳೂರು: ಪತ್ನಿಯ ನಗ್ನ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಪತಿಯಿಂದಲೇ ಬ್ಲಾಕ್​ಮೇಲ್! - etv bharat kannada

ಪತ್ನಿಯ ನಗ್ನ ವಿಡಿಯೋ ಬಳಸಿಕೊಂಡು ಹಣಕ್ಕಾಗಿ ಬ್ಲಾಕ್​ಮೇಲ್ ಆರೋಪ- ಪತಿಯ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಗೃಹಿಣಿ- ಬೆಂಗಳೂರಲ್ಲಿ ಪ್ರಕರಣ

husband-blackmailing-wife-with-her-private-video
ಪತ್ನಿಯ ನಗ್ನ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಪತಿಯಿಂದ ಬ್ಲಾಕ್​ಮೇಲ್
author img

By

Published : Aug 1, 2022, 3:52 PM IST

ಬೆಂಗಳೂರು : ಪತ್ನಿಯ ನಗ್ನ ವಿಡಿಯೋ ಇಟ್ಟುಕೊಂಡು ಪತಿಯೇ ಹಣಕ್ಕಾಗಿ ಬ್ಲಾಕ್​ಮೇಲ್ ಮಾಡಿರುವ ಆರೋಪ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪತಿಯ ವಿರುದ್ಧ ನೊಂದ ಮಹಿಳೆಯು ಇಲ್ಲಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾಗರ್ ಅರುಣ್ ಎಂಬಾತನೇ ವಿಡಿಯೋ ಬಳಸಿಕೊಂಡು ಹೆಂಡತಿಗೆ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪಿ. ಮದುವೆ ಬಳಿಕ ದಂಪತಿ ಮುಂಬೈನಲ್ಲಿ ವಾಸವಾಗಿದ್ದರು. ಪತಿಗೆ ಪೋರ್ನ್​ ವಿಡಿಯೋ ನೋಡುವ ಚಟವಿದೆ. ಅಲ್ಲದೆ ಪತಿಯು ಲೈಂಗಿಕವಾಗಿ ಹಿಂಸೆ ನೀಡಿದ್ದಲ್ಲದೆ, ಆತನೊಂದಿಗಿನ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಸೆರೆಹಿಡಿದಿದ್ದಾನೆ. ಬಳಿಕ ಅವುಗಳನ್ನೇ ಇಟ್ಟುಕೊಂಡು 5 ಲಕ್ಷ ರೂಪಾಯಿ ಹಣಕ್ಕಾಗಿ ಬ್ಲಾಕ್​ಮೇಲ್ ಮಾಡಿದ್ದಾನೆ ಎಂದು ಪತ್ನಿ ದೂರಿದ್ದಾರೆ.

ಇದರಿಂದ ಬೇಸತ್ತು ಮುಂಬೈ ತೊರೆದು ಬೆಂಗಳೂರಿಗೆ ಬಂದರೂ ಪತಿಯ ಕಿರುಕುಳ ಮುಂದುವರೆದಿತ್ತು. ಇದಲ್ಲದೆ, ಪತಿ ಸಾಗರ್ ಗೆಳೆಯ ಸುಲೇಶ್ ಕಾರ್ನಕ್ ಕೂಡ ತನಗೆ ಕಿರುಕುಳ ನೀಡಿದ್ದಾನೆ. ಇವರಿಬ್ಬರೂ ಸೇರಿಕೊಂಡು ಪೋರ್ನ್​ ಸೈಟ್​ವೊಂದನ್ನು ನಡೆಸುತ್ತಿರುವುದು ನನಗೆ ತಡವಾಗಿ ಗೊತ್ತಾಗಿದೆ. ಸಾಗರ್ ಜೊತೆ ಆತನ ಗೆಳೆಯನೂ ಸಹ ಹಣದ ಬೇಡಿಕೆ ಇಟ್ಟಿದ್ದಾನೆ. ಪತಿಯು ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದು, ಕ್ರಮ ಕೈಗೊಳ್ಳಬೇಕೆಂದು ಮಹಿಳೆಯು ದೂರಿನಲ್ಲಿ ಆಗ್ರಹಿಸಿದ್ದಾರೆ.

ವಿಡಿಯೋ ಕಿರುಕುಳ ಮತ್ತು ವರದಕ್ಷಿಣೆ ಕಿರುಕುಳದ ಬಗ್ಗೆ ಬಸವೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ: ವೇಲ್ ಧರಿಸಿಲ್ಲವೆಂದು ಅಪ್ರಾಪ್ತ ಪ್ರೇಮಿಗಳ ನಡುವೆ ಜಗಳ: ಬಾಲಕ ಸಾವು, ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.