ETV Bharat / state

ಪತಿ ಕುಟುಂಬವೇ ಟಾರ್ಗೆಟ್: ಮನೆಯಲ್ಲಿದ್ದ ಲಕ್ಷಗಟ್ಟಲೆ ಹಣ, ಚಿನ್ನ ಸಮೇತ ಪತ್ನಿ ಗಾಯಬ್ - Husband and family members complaint

ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಗಂಡನ ಕುಟುಂಬವೇ ಪತ್ನಿಯ ಟಾರ್ಗೆಟ್ ಆಗಿದ್ದು, ಮನೆಯಲ್ಲಿದ್ದ ಲಕ್ಷಾಂತರ ನಗ ನಾಣ್ಯ ಹೊತ್ತೊಯ್ದಿರುವ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

complaint register on woman in Bengaluru  Wife Cheat to husband  woman escape with gold and money from husband house  ಗಂಡನ ಕುಟುಂಬವೇ ಪತ್ನಿಯ ಟಾರ್ಗೆಟ್  ಚಿನ್ನ ಸಮೇತ ಮಹಿಳೆ ಎಸ್ಕೇಪ್  ಸೊಸೆ ವಿರುದ್ಧ ಅತ್ತೆಯೇ ದೂರು  ಕೌಟುಂಬಿಕ ಕಲಹದಿಂದ ಎಂಗೇಜ್​ಮೆಂಟ್‌ ‌ರದ್ದು  ಗಂಡನ ಕುಟುಂಬಸ್ಥರಿಗೆ ಮಹಿಳೆ ಬೆದರಿಕೆ  Husband and family members complaint
ಗಂಡನ ಕುಟುಂಬವೇ ಪತ್ನಿಯ ಟಾರ್ಗೆಟ್
author img

By

Published : Aug 23, 2022, 8:16 AM IST

Updated : Aug 23, 2022, 2:27 PM IST

ಬೆಂಗಳೂರು: ಪತಿಯ ಕುಟುಂಬವನ್ನು ಗುರಿಯಾಗಿಸಿ ಮಾನಸಿಕ ಹಿಂಸೆ ನೀಡಿದ್ದಲ್ಲದೆ ಮನೆಯಲ್ಲಿದ್ದ 10 ಲಕ್ಷ ರೂ ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವುದಾಗಿ ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಸೊಸೆ ವಿರುದ್ಧ ಅತ್ತೆ ದೂರು ನೀಡಿದ್ದಾರೆ. ಪದ್ಮನಾಭನಗರದ ನಿವಾಸಿ ಕಮಲ‌ ಎಂಬುವರು ನೀಡಿದ ದೂರಿನ ಮೇರೆಗೆ ಗೌತಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬನಶಂಕರಿ‌‌ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೌಟುಂಬಿಕ ಕಲಹದಿಂದ ನಿಶ್ಚಿತಾರ್ಥ ‌ರದ್ದು: ಕಮಲ ತನ್ನ‌‌ ಮಗನಿಗೆ ಈ ಹಿಂದೆ ಯುವತಿಯೊಂದಿಗೆ ಎಂಗೇಜ್​ಮೆಂಟ್‌ ‌ನಿಗದಿ ಮಾಡಿದ್ದರು.‌ ಕೌಟುಂಬಿಕ ಕಲಹದಿಂದ ಈ ಎಂಗೇಜ್​ಮೆಂಟ್‌ ‌ರದ್ದಾಗಿತ್ತು. ಇದಾದ ಬಳಿಕ ಕಳೆದ‌ ಜುಲೈ 10 ರಂದು ಬನಶಂಕರಿಯಲ್ಲಿ ಬೇರೆ ಯುವತಿ ಜತೆ ಮದುವೆ ಮಾಡಿಸಿದ್ದರು.

ಗಂಡನ ಕುಟುಂಬವೇ ಪತ್ನಿಯ ಟಾರ್ಗೆಟ್: ಸೊಸೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವರನ ಕಡೆಯವರು ನೀಡಿದ್ದರು. ಆದರೆ ಮದುವೆಯಾದ ಮೊದಲ ದಿನದಿಂದಲೂ ಗೌತಮಿ ಅತ್ತೆ ಮನೆಯಲ್ಲಿ ಕಿರಿಕ್‌ ಮಾಡಿಕೊಂಡಿದ್ದಾಳೆ. ಮೊದಲೇ‌ ನಿರ್ಧರಿಸಿದಂತೆ ಪತ್ನಿಯನ್ನು ಅಮೆರಿಕಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸುವಾಗಲೇ ತನ್ನ ವರಸೆ ಶುರುಮಾಡಿಕೊಂಡಿದ್ದಳು ಎಂಬ ಆರೋಪಿಸಲಾಗಿದೆ.

ಇದನ್ನೂ ಓದಿ: ತಾಯಿ ಮನೆಯಲ್ಲಿದ್ದ ಹೆಂಡತಿ ಕರೆಸಿ ಹತ್ಯೆ; ಗಂಡನೂ ಆತ್ಮಹತ್ಯೆ

ನಗದು, ಚಿನ್ನದೊಂದಿಗೆ ಪರಾರಿ​: ಮೆಡಿಕಲ್ ವೀಸಾದಡಿ ವಿದೇಶಕ್ಕೆ ಬರುತ್ತೇನೆ ಎಂದಿದ್ದಕ್ಕೆ ಪತಿಯ ಕುಟುಂಬಸ್ಥರು 50 ಸಾವಿರ ರೂಪಾಯಿ ಖರ್ಚು ಮಾಡಿ ವೀಸಾ ಮಾಡಿಸಿದ್ದರು. ಅಮೆರಿಕಕ್ಕೆ ತೆರಳಲು 1.25 ಲಕ್ಷ ರೂಪಾಯಿ ವಿಮಾನ ಟಿಕೆಟ್ ಕೂಡ ಬುಕ್ ಮಾಡಿದ್ದರು. ಮೈ ಹುಷಾರಿಲ್ಲ ಎಂದು ಸಬೂಬು ನೀಡಿ ಮನೆಯಲ್ಲಿದ್ದ 10 ಲಕ್ಷ ಹಣ, 18 ಲಕ್ಷ ಮೌಲ್ಯದ ಚಿನ್ನಾಭರಣ ಸಮೇತ ಮಹಿಳೆ ತವರು ಮನೆ ಸೇರಿದ್ದಾಳೆ ಎಂದು ಗಂಡನ ಕುಟುಂಬಸ್ಥರು ಆರೋಪಿಸಿದ್ದಾರೆ.

ಗಂಡನ ಕುಟುಂಬಸ್ಥರಿಗೆ ಬೆದರಿಕೆ: ಈ ಬಗ್ಗೆ ಗಂಡನ ಕುಟುಂಬಸ್ಥರು ಮಹಿಳೆಯ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಗಂಡನ ಕುಟುಂಬಸ್ಥರಿಗೆ ಮಹಿಳೆ ಮತ್ತು ಆಕೆಯ ಪೋಷಕರು ಧಮ್ಕಿ ಹಾಕಿದ್ದಾರೆ. ನೀವು ನನಗೆ ಕಿರುಕುಳ ನೀಡುತ್ತಿರುವುದಾಗಿ ಪೊಲೀಸ್​ ಠಾಣೆಯಲ್ಲಿ ದೂರು ನೀಡುತ್ತೇನೆ ಎಂದು ಗಂಡನಿಗೆ ಹೆಂಡ್ತಿ ಬೆದರಿಕೆ ಹಾಕಿದ್ದಾಳೆ‌. ಮಗಳಿಗೆ ಬುದ್ದಿ ಹೇಳುವಂತೆ ಆಕೆಯ ಪೋಷಕರಿಗೆ ಹೇಳಿದ್ದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ.

ಸೊಸೆಯ ವಿರುದ್ಧ ಅತ್ತೆಯಿಂದ ದೂರು: ಇದರಿಂದ ಬೇಸರಗೊಂಡ ಗಂಡನ ಕುಟುಂಬಸ್ಥರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಇದಕ್ಕೆ‌ ಪ್ರತಿಯಾಗಿ ಗೌತಮಿ ತನ್ನ ಹುಟ್ಟೂರಾದ ತಿರುಪತಿಯಲ್ಲಿ ಗಂಡನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದುಬಂದಿದೆ‌.

ಇದನ್ನೂ ಓದಿ: ತರಕಾರಿ ತನ್ನಿ ಎಂದು ಹೇಳಿದ್ದೇ ತಪ್ಪಾಯ್ತು: ನಡುರಸ್ತೆಯಲ್ಲೇ ಪತ್ನಿ ಮೇಲೆ ಅಮಾನುಷ ಹಲ್ಲೆ

Last Updated : Aug 23, 2022, 2:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.