ETV Bharat / state

ಸ್ಥಾಯಿ ಸಮಿತಿ ಎಲೆಕ್ಷನ್​ ಹೆಸರಲ್ಲಿ ಬೃಹತ್ ನಾಟಕ: ಪಕ್ಷಗಳ ನಡುವೆ ನಡೆಯಿತಾ ಒಳ ಒಪ್ಪಂದ?

ಬಿಬಿಎಂಪಿಯ ಸ್ಥಾಯಿ ಸಮಿತಿ ಚುನಾವಣೆಗೆ ಸಕಲ ಸಿದ್ಧತೆಗಳು ಒಂದೆಡೆ ನಡೆದಿದ್ದರೆ, ಇನ್ನೊಂದೆಡೆ ಚುನಾವಣೆ ಬಹಿಷ್ಕರಿಸಲು ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ.

standing committee election
ಸ್ಥಾಯಿ ಸಮಿತಿ ಚುನಾವಣೆ
author img

By

Published : Dec 4, 2019, 12:31 PM IST

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಯ ಹನ್ನೆರಡು ಸ್ಥಾಯಿ ಸಮಿತಿಗಳ ಚುನಾವಣೆ ಬಹಿಷ್ಕಾರ ಮಾಡಲು ಮೂರೂ ಪಕ್ಷಗಳು ಸಿದ್ಧತೆ ನಡೆಸಿವೆ.

ನಗರದ ಟೌನ್ ಹಾಲ್ ನಲ್ಲಿ ಚುನಾವಣೆ ನಡೆಸಲು, ನಾಮಪತ್ರ ಸ್ವೀಕರಿಸಲು ಅಧಿಕಾರಿಗಳು ಎಲ್ಲಾ ಸಿದ್ಧತೆ ನಡೆಸಿದ್ದರು. ಆದರೆ, ಯಾವ ಪಾಲಿಕೆ ಸದಸ್ಯರು ಟೌನ್ ಹಾಲ್ ಒಳಗೆ ಪ್ರವೇಶಿಸುತ್ತಿಲ್ಲ. ಯಾರೂ ನಾಮಪತ್ರ ಸಲ್ಲಿಸದಂತೆ ಪಕ್ಷಗಳ ಮುಖಂಡರು ನೋಡಿಕೊಳ್ಳುತ್ತಿದ್ದಾರೆ.

ಉಪಚುನಾವಣೆ ಹಿನ್ನೆಲೆ ಎಲೆಕ್ಷನ್ ಮುಂದೂಡಿಕೆಗೆ ಬಿಜೆಪಿಯ ಶಾಸಕರು, ಹಾಗೂ ಪಾಲಿಕೆ ಸದಸ್ಯರು ಮನವಿ ಮಾಡಿದ್ದರು. ಬಿಜೆಪಿ ಮನವಿ ತಿರಸ್ಕರಿಸಿ, ಕಾನೂನಿನಂತೆ ಚುನಾವಣೆ ನಡೆಸುತ್ತಿರುವ ಹರ್ಷ ಗುಪ್ತಾ ನಿರ್ಧಾರಕ್ಕೆ ಸಹಕರಿಸದೇ ಇರಲು ಪಾಲಿಕೆ ಸದಸ್ಯರು ನಿರ್ಧರಿಸಿದ್ದಾರೆ. ಎಂಟು ಗಂಟೆಯಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದರೂ ಈವರೆಗೆ ಒಂದೇ ಒಂದು ನಾಮಪತ್ರ ಸಲ್ಲಿಕೆ ಆಗಿಲ್ಲ. ಕೋರಂ ಇಲ್ಲದೇ ಹೋದರೆ ಚುನಾವಣೆ ಮುಂದೂಡಿಕೆ ಮಾಡಲೇಬೇಕಾಗುತ್ತದೆ ಎಂಬ ಕಾರಣಕ್ಕೆ ಪಾಲಿಕೆ ಸದಸ್ಯರು ಟೌನ್ ಹಾಲ್ ಹತ್ತಿರ ಬರದಂತೆ ಮುಖಂಡರು ಸೂಚಿಸಿದ್ದಾರೆ ಎನ್ನಲಾಗಿದೆ.

ಸ್ಥಾಯಿ ಸಮಿತಿ ಚುನಾವಣೆ ಹೆಸರಲ್ಲಿ ಬೃಹತ್ ನಾಟಕ

ಮೇಯರ್ ಗೆ ಸಾಥ್ ನೀಡಿದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್:
ಟೌನ್ ಹಾಲ್ ಮುಂಭಾಗದಲ್ಲಿ ಬಂದಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು, ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದಾರೆ. ಒಂದೆಡೆ ಚುನಾವಣೆಯಲ್ಲಿ ಯಾರೂ ಭಾಗವಹಿಸದಂತೆ ಮೇಯರ್ ನೋಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಚುನಾವಣೆ ನಡೆಸಲು ಸಕಲ ಸಿದ್ಧತೆಯೊಂದಿಗೆ ಚುನಾವಣಾಧಿಕಾರಿಗಳು ಕಾಯುತ್ತಿದ್ದಾರೆ.

Intro:ಸ್ಥಾಯಿ ಸಮಿತಿ ಚುನಾವಣೆ ಹೆಸರಲ್ಲಿ ಬೃಹತ್ ನಾಟಕ- ಚುನಾವಣೆ ತಿರಸ್ಕರಿಲು ಪಕ್ಷಗಳ ಒಳ ಒಪ್ಪಂದ

ಬೆಂಗಳೂರು: ಬಿಬಿಎಂಪಿಯ ಹನ್ನೆರಡು ಸ್ಥಾಯಿ ಸಮಿತಿಗಳ ಚುನಾವಣೆ ಬಹಿಷ್ಕಾರ ಮಾಡಲು ಮೂರೂ ಪಕ್ಷಗಳು ಸಿದ್ಧತೆ ನಡೆಸಿವೆ. ನಗರದ ಟೌನ್ ಹಾಲ್ ನಲ್ಲಿ ಚುನಾವಣೆ ನಡೆಸಲು, ನಾಮಪತ್ರ ಸ್ವೀಕರಿಸಲು ಅಧಿಕಾರಿಗಳು ಎಲ್ಲಾ ಸಿದ್ಧತೆ ನಡೆಸಿದ್ದರೂ, ಪಾಲಿಕೆ ಸದಸ್ಯರು ಮಾತ್ರ ಟೌನ್ ಹಾಲ್ ಒಳಗೆ ಯಾರೂ ಹೋಗುತ್ತಿಲ್ಲ. ಯಾರೂ ನಾಮಪತ್ರ ಸಲ್ಲಿಸದಂತೆ ಪಕ್ಷಗಳ ಮುಖಂಡರು ನೋಡಿಕೊಳ್ಳುತ್ತಿದ್ದಾರೆ.
ಉಪಚುನಾವಣೆ ಹಿನ್ನಲೆ ಎಲೆಕ್ಷನ್ ಮುಂದೂಡಿಕೆಗೆ ಬಿಜೆಪಿಯ ಶಾಸಕರು, ಹಾಗೂ ಪಾಲಿಕೆ ಸದಸ್ಯರು ಮನವಿ ಮಾಡಿದ್ದರು. ಬಿಜೆಪಿ ಮನವಿ ತಿರಸ್ಕರಿಸಿ,ಕಾನೂನಿನಂತೆ ಚುನಾವಣೆ ನಡೆಸುತ್ತಿರುವ ಹರ್ಷ ಗುಪ್ತಾ ನಿರ್ಧಾರಕ್ಕೆ ಸಹಕರಿಸದೆ ಇರಲು ಪಾಲಿಕೆ ಸದಸ್ಯರು ನಿರ್ಧರಿಸಿದ್ದಾರೆ.
ಎಂಟು ಗಂಟೆಯಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದರೂ ಈವರೆಗೂ ಒಂದೇ ಒಂದು ನಾಮಪತ್ರ ಸಲ್ಲಿಕೆ ಆಗಿಲ್ಲ. ಕೋರಂ ಇಲ್ಲದೆ ಹೋದ್ರೆ ಚುನಾವಣೆ ಮುಂದೂಡಿಕೆ ಮಾಡಲೇಬೇಕಾಗುತ್ತದೆ ಎಂಬ ಕಾರಣಕ್ಕೆ ಪಾಲಿಕೆ ಸದಸ್ಯರು ಟೌನ್ ಹಾಲ್ ಹತ್ತಿರ ಬರದಂತೆ ಮುಖಂಡರು ಸೂಚಿಸಿದ್ದಾರೆ ಎನ್ನಲಾಗಿದೆ.

ಮೇಯರ್ ಗೆ ಸಾಥ್ ನೀಡಿದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್.
ಟೌನ್ ಹಾಲ್ ಮುಂಭಾಗದಲ್ಲಿ ಬಂದಿರುವ ಕಾಂಗ್ರೆಸ್,ಬಿಜೆಪಿ, ಜೆಡಿಎಸ್ ನಾಯಕರು ಬಂದಿದ್ದು, ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿ ಯಾರು ಭಾಗವಹಿಸದಂತೆ ಮೇಯರ್ ನೋಡಿ ಕೊಳ್ಳುತ್ತಿದ್ದಾರೆ. ಆದ್ರೆ ಚುನಾವಣೆ ನಡೆಸಲು ಸಕಲ ಸಿದ್ಧತೆಯೊಂದಿಗೆ ಚುನಾವಣೆ ನಡೆಸಲು ಅಧಿಕಾರಿಗಳು ಕಾಯುತ್ತಿದ್ದಾರೆ.

ಮೇಯರ್ ಗೌತಮ‌್ ಕುಮಾರ್ ಮಾತನಾಡಿ, ೯.೩೦ ವರೆಗೂ ಸಮಯ ಇದೆ‌ ಕಾದುನೋಡಬೇಕಾಗಿದೆ. ಕಾರ್ಪೋರೇಟರ್ ಒಬ್ಬೋಬ್ಬರೇ ಬರ್ತಾ ‌ಇದಾರೆ. ಶಿವಾಜಿನಗರ ಉಪ ಚುನಾವಣೆ ಇರೋದ್ರಿಂದ ಟೌನ್ ಹಾಲ್ ನಲ್ಲಿ ಮಾಡ್ತಾ ಇರೋದು. ಈ ಚುನಾವಣೆ ಸಮಯದಲ್ಲಿ ‌ಸಮಂಜಸನಾ ಅಂತಾ ಅಧಿಕಾರಿಗಳೇ ಅರ್ಥ ಮಾಡಿಕೊಳ್ಳಬೇಕು ಎಂದರು.
ವಿರೋಧ‌ಪಕ್ಷದ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ಉಪ ಚುನಾವಣೆ ಇರೋದ್ರಿಂದ ಎಲೆಕ್ಷನ್ ಬೇಡಾ ಅಂತಾ ಲೆಟರ್ ಬರೆದಿದ್ವಿ. ಸರ್ಕಾರ ಕೂಡ ಲೆಟರ್ ಬರೆದಿತ್ತು. ಆದರೆ ಅಧಿಕಾರಿಗಳು ಅರ್ಥ ಮಾಡಿಕೊಳ್ಖದೇ ಚುನಾವಣೆ ‌ಮಾಡ್ತಾ ಇದ್ದಾರೆ. ಇದರಿಂದ ನಷ್ಟ ಆದರೆ ನಾವು ಹೊಣೆ ಅಲ್ಲ‌. ೯. ೩೦ ವರೆಗೂ ಟೈಂ ಇದೆ ಯಾರಾದ್ರು ನಾಮೀನೇಶನ್ ಮಾಡ್ತಾರ ನೋಡೋಣ‌ ಎಂದರು.
ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಮಾತನಾಡಿ, ಉಪ ಚುನಾವಣೆ ಇರೋದ್ರಿಂದ ಚುನಾವಣೆ ಬೇಡಾ ಅಧಿಕಾರಿಗಳಿಗೆ ಲೆಟರ್ ಬರೆದಿದ್ದೀವಿ
ಆದರೆ ಅವರು ಅದನ್ನ ಅರ್ಥ ಮಾಡಿಕೊಳ್ಳದೇ ಚುನಾವಣೆ ಮಾಡ್ತಾ ಇದ್ದಾರೆ. ಬೈ ಎಲೆಕ್ಷನ್ ಮಧ್ಯೆ ಸ್ಥಾಯಿ ಸಮಿತಿ ಚುನಾವಣೆ ಮಾಡೋದು ಸಮಂಜಸ ಅಲ್ಲ. ೯.೩೦ ವರೆಗೂ ನಾಮಪತ್ರ ಸಲ್ಲಿಸುವ ಅವಕಾಶ ಇದೆ. ನಾವು ಇವತ್ತಿನ ಚುನಾವಣೆ ಬಗ್ಗೆ ನಮ್ಮ‌ ಕಾರ್ಪೋರೇಟರ್ರ್ಸ್ ಗೆ ಯಾವುದೇ ನೋಟಿಸ್ ನೀಡಿಲ್ಲ. ಚುನಾವಣೆ ಮುಂದಕ್ಕೆ ಬದಲಾವಣೆ ಮಾಡಿ ಅಂತಾ ಹೇಳುದ್ರು ಮಾಡಿಲ್ಲ. ನೋಡೋಣ ಯಾರು ನಾಮಪತ್ರ ಸಲ್ಲಿಕೆ ಮಾಡೋದಿಲ್ಲ ಅನ್ನಿಸುತ್ತೆ ಎಂದರು.

ಬೈಟ್- ಗೌತಮ್ ಕುಮಾರ್, ಮೇಯರ್
ಬೈಟ್- ವಾಜಿದ್, ವಿರೋಧ ಪಕ್ಷದ ನಾಯಕ
ಬೈಟ್- ಮುನೀಂದ್ರ ಕುಮಾರ್, ಆಡಳಿತ ಪಕ್ಷದ ನಾಯಕ

ಸೌಮ್ಯಶ್ರೀ
Kn_bng_01_bbmp_election_7202707

Kn_bng_01_bbmp_election_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.