ETV Bharat / state

ನಿರ್ಭಯಾ ನಿಧಿಯಡಿ ರಾಜ್ಯಕ್ಕೆ‌‌ ಮೀಸಲಿಟ್ಟಿದ್ದ ಹಣ ಎಷ್ಟು ? ಖರ್ಚಾಗಿದೆಷ್ಟು.. ? - 2013 ರಲ್ಲಿ‌ ರಚಿತವಾಗಿದ್ದ ನಿರ್ಭಯಾ ಯೋಜನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರ ನಿರ್ಭಯಾ ನಿಧಿಗೆ 1,649 ಕೋಟಿ ರೂ. ಬಿಡುಗಡೆ ಮಾಡಿತ್ತು. ಇದರಂತೆ ಐದು ವರ್ಷಗಳಿಗೆ ಕರ್ನಾಟಕಕ್ಕೆ 191 ಕೋಟಿ ರೂ. ಅನುದಾನ‌ ಮೀಸಲಿರಿಸಿತ್ತು. ಆದರೆ ಮೀಸಲಿರಿಸಿದ ಅನುದಾನದಲ್ಲಿ 13 ಕೋಟಿ ರೂ. ಮಾತ್ರ ರಾಜ್ಯ ಸರ್ಕಾರ ಖರ್ಚು ಮಾಡಿದೆ. ಈ ಮೂಲಕ ಶೇ.7 ರಷ್ಟು ಅನುದಾನ ಬಳಕೆ ಮಾಡಿದೆ‌.

ನಿರ್ಭಯಾ ನಿಧಿ
ನಿರ್ಭಯಾ ನಿಧಿ
author img

By

Published : Oct 5, 2020, 5:15 PM IST

ಬೆಂಗಳೂರು: ಮಹಿಳೆಯರಿಗೆ ಸುರಕ್ಷತೆ ಹಾಗೂ ಮೂಲಸೌರ್ಕಯ ಒದಗಿಸುವ ನಿಟ್ಟಿನಲ್ಲಿ 2013 ರಲ್ಲಿ‌ ರಚಿತವಾಗಿದ್ದ ನಿರ್ಭಯಾ ಫಂಡ್ ನಿಧಿ ಯೋಜನೆಯನ್ನು ರಾಜ್ಯ ಸರ್ಕಾರ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.

ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ದೇಶದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ‌. ನಾಗರಿಕ ಸಮಾಜದಲ್ಲಿ ಯುವತಿಯ ಮೇಲೆ ಹಾಡಹಾಗಲೇ ಕಾಮುಕರು ಅತ್ಯಾಚಾರ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂಬ ಒತ್ತಾಯ ಎಲ್ಲೆಡೆ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ‌ 2013 ರಲ್ಲಿ‌ ರಚಿತವಾಗಿದ್ದ ನಿರ್ಭಯಾ ಫಂಡ್ ನಿಧಿ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ಮಹಿಳೆಯರ ಸುರಕ್ಷತೆ ಹಾಗೂ ಮೂಲಸೌರ್ಕಯ ಒದಗಿಸುವುದೇ ಈ ಯೋಜನೆಯ ಪ್ರಮುಖ ಆಶಯವಾಗಿತ್ತು. ಆಶಯಕ್ಕೆ ತಕ್ಕಂತೆ ರಾಜ್ಯವಾರು ಪ್ರಕಾರ ಕೇಂದ್ರ ಸರ್ಕಾರ ಹಣ ಮೀಸಲಿರಿಸಿದೆ‌‌. ವಿಪಯಾರ್ಸವೆಂದರೆ ದೇಶದ ಬಹುತೇಕ ರಾಜ್ಯಗಳು ನಿರ್ಭಯಾ ಫಂಡ್ ಹಣವನ್ನೇ ಸದ್ಬಳಕೆ ಮಾಡಿಕೊಂಡಿಲ್ಲ. ಕರ್ನಾಟಕದಲ್ಲಿ ಶೇ.7 ರಷ್ಟು ಮಾತ್ರ ಹಣ ಖರ್ಚು ಮಾಡಿರುವುದು ಈಗಿನ ಹಿಂದಿನ ಸರ್ಕಾರಗಳ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರ ನಿರ್ಭಯಾ ನಿಧಿಗೆ 1,649 ಕೋಟಿ ರೂ. ಬಿಡುಗಡೆ ಮಾಡಿತ್ತು. ಇದರಂತೆ ಐದು ವರ್ಷಗಳಿಗೆ ಕರ್ನಾಟಕಕ್ಕೆ 191 ಕೋಟಿ ರೂ. ಅನುದಾನ‌ ಮೀಸಲಿರಿಸಿತ್ತು. ಆದರೆ ಮೀಸಲಿರಿಸಿದ ಅನುದಾನದಲ್ಲಿ 13 ಕೋಟಿ ರೂ. ಮಾತ್ರ ರಾಜ್ಯ ಸರ್ಕಾರ ಖರ್ಚು ಮಾಡಿದೆ. ಈ ಮೂಲಕ ಶೇ.7 ರಷ್ಟು ಅನುದಾನ ಬಳಕೆ ಮಾಡಿದೆ‌. ರಾಷ್ಟ್ರ ರಾಜಧಾನಿ ದೆಹಲಿಗೆ ಮೀಸಲಿಟ್ಟ 390 ಕೋಟಿ ರೂ. ಹಣದಲ್ಲಿ 19 ಕೋಟಿ ರೂ. ಮಾತ್ರ ಖರ್ಚು ಮಾಡಿದೆ. ಅದೇ ರೀತಿ ಮಹಾರಾಷ್ಟ್ರ, ದಿಯು, ದಮನ್, ಸಿಕ್ಕಿಂ‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಂದು ಪೈಸೆಯಷ್ಟು ಖರ್ಚು ಮಾಡಿಲ್ಲ ಎಂಬ ಕಳವಳಕಾರಿ ಸಂಗತಿ ಬಯಲಾಗಿದೆ‌‌.

ನಿರ್ಭಯಾ ಯೋಜನೆಯ ಸಾರಂಶವೇನು

2012ರ ಡಿಸೆಂಬರ್ 16ರಂದು ಬಸ್​ನಲ್ಲಿ ಪ್ರಯಾಣಿಸುವಾಗ‌ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಪೈಶಾಚಿಕ ಕೃತ್ಯ ಎಸಗಿದ್ದರು. ಇದು ದೇಶದಲ್ಲಿ ಪ್ರಬಲ ಚರ್ಚೆಯಾಗಿತ್ತು. ಘಟನೆ ಬಳಿಕ ಎಚ್ಚೆತ್ತ ಅಂದಿನ‌ ಕೇಂದ್ರ ಸರ್ಕಾರ ನಿರ್ಭಯಾ ನಿಧಿ ಸ್ಥಾಪಿಸಿತು. ಮಹಿಳೆಯರಿಗೆ ಸುರಕ್ಷತೆ ಕಲ್ಪಿಸಿ ಅವರಲ್ಲಿರುವ ಭೀತಿ ಹೋಗಲಾಡಿಸುವುದೇ ಪ್ರಮುಖ ಉದ್ದೇಶ. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಯೋಜನೆ ಕೈಗೆತ್ತಿಕೊಳ್ಳುವ ರಾಜ್ಯಸರ್ಕಾರಗಳಿಗೆ ಅನುದಾನ ನೀಡಲಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಕೆ, ಮಹಿಳೆಯರ ಸಹಾಯವಾಣಿ ಕೇಂದ್ರ ಸ್ಥಾಪನೆ, ಅಪಾಯ ಸಂದರ್ಭಗಳಲ್ಲಿ ಪ್ಯಾನಿಕ್ ಬಟನ್ ಸೇರಿದಂತೆ ಆ್ಯಪ್ ಆಧಾರಿತ ಸೇವೆಗಳಿಗೆ ಉತ್ತೇಜನ ನೀಡಿ ಮಹಿಳೆಯರ ಹಿತ ಕಾಯುವ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಾ ಬಂದಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ವಿತ್ತಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್​ನಲ್ಲಿ ನಿರ್ಭಯಾ ಫಂಡ್ ಅಡಿ ರಾಜ್ಯದಲ್ಲಿ 7,500 ಸಿಸಿಟಿವಿ ಕ್ಯಾಮರ ಅಳವಡಿಕೆ ಹಾಗೂ ತುರ್ತು ಸಂದರ್ಭಗಳಲ್ಲಿ ಸ್ಪಂಧಿಸುವ ನಿಟ್ಟಿನಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದರು.

ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆಯ (ಎನ್ ಸಿಆರ್ ಬಿ) ಪ್ರಕಾರ 2019ರಲ್ಲಿ ಮಹಿಳೆಯರ ಮೇಲೆ 13,828 ಪ್ರಕರಣ ದಾಖಲಾಗಿವೆ. ಅದೇ ರೀತಿ 2018 ಹಾಗೂ 2019 ರಲ್ಲಿ 13,514 ಹಾಗೂ 14,078 ಪ್ರಕರಣಗಳು ವರದಿಯಾಗಿವೆ. 2019 ರಲ್ಲಿ ಶೇ. 42.5 ರಷ್ಟು ಅಪರಾಧಗಳು ಮಹಿಳೆಯರ ಮೇಲೆಯೇ ನಡೆದಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.