ಬೆಂಗಳೂರು: ಶಾಸಕರನ್ನ ಖೆಡ್ಡಕ್ಕೆ ಕೆಡವಿದ ಹನಿಟ್ರ್ಯಾಪ್ ಪ್ರಕರಣ ಬೆನ್ನತ್ತಿದ ಸಿಸಿಬಿಗೆ ದಿನಕ್ಕೊಂದು ರೋಚಕ ಮಾಹಿತಿಗಳು ಸಿಗುತ್ತಿವೆ.
ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ರಾಘವೇಂದ್ರ ಹಾಗೂ ಆತನ ಪ್ರೇಯಸಿಯನ್ನು ಮತ್ತು ತಂಡದ ಸದಸ್ಯರನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಕೆಲ ರೋಚಕ ಮಾಹಿತಿಗಳು ಹೊರಬಂದಿದೆ
ಹೇಗಿತ್ತು ಹನಿಟ್ರ್ಯಾಪ್ ಪ್ಲಾನ್:
ರಾಘವೇಂದ್ರ ತನ್ನ ಪ್ರೇಯಸಿಯೊಂದಿಗೆ ಮತ್ತೊಬ್ಬ ಯುವತಿಯನ್ನು ಕರೆದುಕೊಂಡು ಶಾಸಕರ ಬಳಿ ಹೋಗಿ, ಇವರು ಕಾಲೇಜು ಹುಡುಗಿಯರು. ಪ್ರಾಜೆಕ್ಟ್ ಮಾಡುತ್ತಿದ್ದಾರೆ. ವಾಸ್ತವ್ಯಕ್ಕೆ ಜಾಗ ಕೊಡಿಸಬೇಕಿದೆ ಎಂದು ಮನವಿ ಮಾಡಿಕೊಂಡಿದ್ದನಂತೆ. ಜೊತೆಗೆ ಹುಡುಗಿಯರ ನಂಬರ್ ಕೊಟ್ಟು ಪರಿಚಯ ಮಾಡಿಸಿದ್ದ.
ಇನ್ನು ಶಾಸಕರ ಜೊತೆ ಆತ್ಮಿಯತೆ ಬೆಳೆದ ನಂತರ ಯುವತಿಯರು, ಶಾಸಕರಿಗೆ ಗೊತ್ತಾಗದ ಹಾಗೆ ಒಂದು ಆಪ್ ಮೂಲಕ ಖಾಸಗಿತನಕ್ಕೆ ಕನ್ನ ಹಾಕಿದ್ದರು. ಆಪ್ ಅನ್ನ ಶಾಸಕರ ಮೊಬೈಲ್ನಲ್ಲಿ ಅವರಿಗೆ ಗೊತ್ತಾಗದ ಹಾಗೆ ಇನ್ಸ್ಟಾಲ್ ಮಾಡಿಸಿ, ಶಾಸಕರ ಖಾಸಗಿ ವಿಷಯವನ್ನು ತಿಳಿದುಕೊಳ್ಳುತ್ತಿದ್ದರು.
ಇದಾದ ನಂತರ ಐಷಾರಾಮಿ ಹೊಟೇಲ್ನಲ್ಲಿ ರೂಂ ಬುಕ್ ಮಾಡಿಕೊಂಡು, ಶಾಸಕರ ಜೊತೆಗಿನ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಸದ್ಯ ಈ ವಿಚಾರವನ್ನು ಆರೋಪಿಯೇ ಪೊಲೀಸರಿಗೆ ತಿಳಿಸಿದ್ದಾನೆ. ಇನ್ನು ರಘು ಮೇಲೆ 15 ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿವೆ.