ಬೆಂಗಳೂರು: ಕೊರೊನಾ ನಿಯಂತ್ರಣ ಸಲುವಾಗಿ ಕೊರೊನಾ ವಾರಿಯರ್ಸ್ ಮನೆ-ಮನೆ ಸರ್ವೇ ಮಾಡುತ್ತಿದ್ದು, ಈವರೆಗೆ 1 ಕೋಟಿ 13 ಲಕ್ಷದ 38 ಸಾವಿರದ 300 ಮನೆಗಳ ( 1,13,38,300) ಸರ್ವೇ ಕಾರ್ಯ ಮುಗಿಸಿದ್ದಾರೆ.
ದಿನೇ-ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದ್ದು, ಜೊತೆಗೆ ಸೋಂಕಿತರ ಸಂಪರ್ಕದಲ್ಲಿ ಇರುವವರ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಕೊರೊನಾ ಸೋಂಕಿತರ ಪತ್ತೆ ಕಾರ್ಯ ಮಾಡುವುದರಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯಾಧಿಕಾರಿಗಳ ಪಾತ್ರ ಬಹಳ ದೊಡ್ಡದು. ಕೊರೊನಾ ಸಮುದಾಯದ ಹಂತಕ್ಕೆ ಹರಡಿದರೆ ಯಾರಿಗೆ ಹೆಚ್ಚು ಅಪಾಯವಿದೆ ಎಂದು ನೋಡಿದರೆ ಅದರಲ್ಲಿ ಮನೆ ಮನೆ ಸರ್ವೇ ಮಾಡುವವರು ಮೊದಲ ಸ್ಥಾನದಲ್ಲಿ ಬರುತ್ತಾರೆ.
ಹೌದು, ರಾಜ್ಯದಲ್ಲಿ ಹೈ ರಿಸ್ಕ್ ಕೇಸ್ಗಳ ಸಂಖ್ಯೆ ಕಡಿಮೆಯೇನಿಲ್ಲ. ಹಿರಿಯ ನಾಗರಿಕರು, ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿಯರು, ಬಾಣಂತಿಯರ ಸಂಖ್ಯೆ ಹೆಚ್ಚಾಗಿಯೇ ಇದೆ. ರಾಜ್ಯದಲ್ಲಿ ಆಶಾ ಕಾರ್ಯಕರ್ತರು ಶೇ. 67 ರಷ್ಟು ಮನೆಗಳ ಸರ್ವೇ ಕಾರ್ಯ ಮಾಡಿದ್ದಾರೆ. ಅಂದರೆ ಬರೋಬ್ಬರಿ 60,000 ಕೊರೊನಾ ವಾರಿಯರ್ಸ್ 1 ಕೋಟಿ 13 ಲಕ್ಷದ 38 ಸಾವಿರದ 300 ಮನೆಗಳ(1,13,38,300) ಸರ್ವೇ ಕಾರ್ಯ ಮಾಡಿದ್ದಾರೆ.
ಆರೋಗ್ಯ ಇಲಾಖೆಯ ಅಂಕಿ ಅಂಶ: ಹೈ ರಿಸ್ಕ್ ಕೇಸ್ ಎಷ್ಟು ಅಂತಾ ನೋಡೋದಾದರೆ,
*SARI-ILI: (SARI- SERVER ACUTE RESPIRATORY INFECTION) (ILI -INFLUENZA LIKE ILLNESS)ಈ ಲಕ್ಷಣ ಇರುವವರು 13,341 ಮಂದಿ ಇದ್ದಾರೆ.
*ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ 1,37,061 ಇದೆ.
*ಗರ್ಭಿಣಿಯರು-ಬಾಣಂತಿಯರು- 4,14,003 ಮಂದಿ ಇದ್ದಾರೆ
*48,35,409 ವಯೋವೃದ್ಧರು ಇದ್ದು, ಒಟ್ಟು 50,73,830 ಮನೆಗಳನ್ನು ಇಲಾಖೆ ಫಾಲೋಅಪ್ ಮಾಡಿದೆ.
ಬೆಂಗಳೂರಿನಲ್ಲಿ ಸದ್ಯ 28% ರಷ್ಟು ಮಾತ್ರ ಸರ್ವೇ ಕಾರ್ಯ ಮಾಡಲಾಗಿದೆ. 37 ಲಕ್ಷ ಮನೆಗಳ ಪೈಕಿ 10.59 ಲಕ್ಷ ಮನೆಗಳ ಹೆಲ್ತ್ ಸರ್ವೇ ಮಾಡಲಾಗಿದೆ. ಬೆಂಗಳೂರಿನಲ್ಲಿ SARI-ILI ನ ಲಕ್ಷಣವನ್ನ 1703 ಮಂದಿ ಹೊಂದಿದ್ದರೆ, 7562 ಮಂದಿ ಇತರೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. 23,391 ಗರ್ಭಿಣಿಯರು-ಬಾಣಂತಿಯರು ಇದ್ದಾರೆ. 3,12,787 ವಯೋವೃದ್ದರು ಇದ್ದು, 3,39,690 ಮನೆಗಳ ಸರ್ವೇ ಕಾರ್ಯ ಮಾಡಲಾಗಿದೆ.
ಸದ್ಯ ಸರ್ವೇ ಕಾರ್ಯದ ಅಂಕಿ-ಅಂಶಗಳು ಹೀಗಿದ್ದು, ಸರ್ವೇ ಮಾಡಿದ ಕೊರೊನಾ ವಾರಿಯರ್ಸ್ ಸೂಕ್ತ ಮುಂಜಾಗ್ರತ ಕ್ರಮಗಳನ್ನು ವಹಿಸಬೇಕಾಗುತ್ತೆ. ಒಂದು ವೇಳೆ ಎಚ್ಚರ ತಪ್ಪಿದರೆ ಕೊರೊನಾ ಹರಡುವುದರಲ್ಲಿ ಯಾವುದೇ ಅನುಮಾನ ಇಲ್ಲ.