ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಸೋಂಕು ಪ್ರಕರಣಗಳ ಹೆಚ್ಚಾಗುತ್ತಿದ್ದು, ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡುವ ಮೂಲಕ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಆದರೆ ಹೋಂ ಕ್ವಾರಂಟೈನ್ ನಿಯಮವನ್ನು ರಾಜ್ಯದ 29 ಜಿಲ್ಲೆಗಳಲ್ಲಿ ಉಲ್ಲಂಘನೆ ಮಾಡಲಾಗಿದೆ ಈ ಕುರಿತು ಸಮಗ್ರ ವರದಿ ಇಲ್ಲಿದೆ.
ರಾಜ್ಯದ 30 ಜಿಲ್ಲೆಗಳಿಂದ ಹೋಂ ಕ್ವಾರಂಟೈನ್ ಉಲ್ಲಂಘನೆಯ 5,269 ಪ್ರಕರಣಗಳು ಕಳೆದ 24 ಗಂಟೆಯಲ್ಲಿ ಪತ್ತೆಯಾಗಿದ್ದು, ಈವರೆಗೆ 1,87,490 ಪ್ರಕರಣ ದಾಖಲಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 4,733 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 48,764 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 16 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಒಟ್ಟು ಈವರೆಗೆ 286 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಉಲ್ಲಂಘನೆ
ಬಾಗಲಕೋಟೆಯಲ್ಲಿ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದ 103 ಪ್ರಕರಣಗಳು ಕಳೆದ 24 ಗಂಟೆಯಲ್ಲಿ ಪತ್ತೆಯಾಗಿವೆ. ಈವರೆಗೆ 1,013 ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ 103 ಜನರಿಗೂ ವಾರ್ನ್ ಮಾಡಲಾಗಿದ್ದು, ಒಟ್ಟು 1,115 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ಬಳ್ಳಾರಿಯಲ್ಲಿ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದ 1,287 ಪ್ರಕರಣ ಕಳೆದ 24 ಗಂಟೆಯಲ್ಲಿ ಪತ್ತೆಯಾಗಿದ್ದು, ಈವರೆಗೆ 5,493 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 642 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 2970 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ಬೆಳಗಾವಿಯಲ್ಲಿ ಕಳೆದ 24 ಗಂಟೆಯಲ್ಲಿ 408 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 18,768 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 135 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 2,648 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. ಒಂದು ಎಫ್ಐಆರ್ ಕೂಡ ದಾಖಲಿಸಲಾಗಿದೆ.
ಬೆಂಗಳೂರು ನಗರದಲ್ಲಿ ಕಳೆದ 24 ಗಂಟೆಯಲ್ಲಿ 1,455 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 60,287 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 2,655 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 15,157 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಕಳೆದ 24 ಗಂಟೆಯಲ್ಲಿ 122 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 2,260 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 51 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 183 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ಬೀದರ್ ನಲ್ಲಿ ಕಳೆದ 24 ಗಂಟೆಯಲ್ಲಿ ಯಾವುದೇ ಉಲ್ಲಂಘನೆ ಪತ್ತೆಯಾಗಿಲ್ಲ, ಈವರೆಗೆ 5632 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಯಾರಿಗೂ ವಾರ್ನ್ ಮಾಡಲಾಗಿಲ್ಲ.
ಚಾಮರಾಜನಗರದಲ್ಲಿ ಕಳೆದ 24 ಗಂಟೆಯಲ್ಲಿ 42 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 121 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 4 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 42 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಕಳೆದ 24 ಗಂಟೆಯಲ್ಲಿ ಯಾವುದೂ ಪತ್ತೆಯಾಗಿಲ್ಲ. ಆದರೆ ಈವರೆಗೆ 1462 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಯಾರಿಗೂ ವಾರ್ನ್ ಮಾಡಿದ ವರದಿಯಾಗಿಲ್ಲ. ಆದರೆ ಒಟ್ಟು 42 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ಚಿಕ್ಕಮಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 54 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 2,225 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 32 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 168 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. 15 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಚಿತ್ರದುರ್ಗದಲ್ಲಿ ಕಳೆದ 24 ಗಂಟೆಯಲ್ಲಿ 44 ಪ್ರಕರಣಗಳು ಪತ್ತೆಯಾಗಿದ್ದು ಈವರೆಗೆ 1,743 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 44 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 425 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ದಕ್ಷಿಣ ಕನ್ನಡದಲ್ಲಿ ಕಳೆದ 24 ಗಂಟೆಯಲ್ಲಿ 331 ಪ್ರಕರಣಗಳು ಪತ್ತೆಯಾಗಿದ್ದು ಈವರೆಗೆ 9,986 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 63 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 1043 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. 54 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ದಾವಣಗೆರೆಯಲ್ಲಿ ಕಳೆದ 24 ಗಂಟೆಯಲ್ಲಿ 15 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 67 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 15 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 27 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ಧಾರವಾಡದಲ್ಲಿ ಕಳೆದ 24 ಗಂಟೆಯಲ್ಲಿ 5 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 92 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 92 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 1304 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. 5 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಗದಗದಲ್ಲಿ ಕಳೆದ 24 ಗಂಟೆಯಲ್ಲಿ 71 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 2,901 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 71 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 2901 ಜನರಿಗೂ ಈವರೆಗೆ ವಾರ್ನ್ ಮಾಡಲಾಗಿದೆ.
ಹಾಸನದಲ್ಲಿ ಕಳೆದ 24 ಗಂಟೆಯಲ್ಲಿ 146 ಪ್ರಕರಣಗಳು ಪತ್ತೆಯಾಗಿದ್ದು ಈವರೆಗೆ 6,022 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 80 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 2,377 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. ಇಂದು 3 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಈವರೆಗೆ ಒಟ್ಟು 8 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹಾವೇರಿಯಲ್ಲಿ ಕಳೆದ 24 ಗಂಟೆಯಲ್ಲಿ ಯಾವುದೂ ಪತ್ತೆಯಾಗಿಲ್ಲ. ಆದರೆ ಈವರೆಗೆ 3,415 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 71 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 808 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ಕಲಬುರಗಿಯಲ್ಲಿ ಕಳೆದ 24 ಗಂಟೆಯಲ್ಲಿ ಯಾವುದೂ ಪತ್ತೆಯಾಗಿಲ್ಲ. ಆದರೆ ಈವರೆಗೆ 16,381 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಯಾರಿಗೂ ವಾರ್ನ್ ಮಾಡಿದ ವರದಿಯಾಗಿಲ್ಲ. ಆದರೆ ಒಟ್ಟು 6,219 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. ಇಂದು 5 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈವರೆಗೂ ಒಟ್ಟು 34 ಜನರ ವಿರುದ್ಧ ಎಫ್ಐಆರ್ ದಾಖಲಾದಂತಾಗಿದೆ.
ಕೊಡಗಿನಲ್ಲಿ ಕಳೆದ 24 ಗಂಟೆಯಲ್ಲಿ 72 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 473 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 41 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 124 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ಕೋಲಾರದಲ್ಲಿ ಕಳೆದ 24 ಗಂಟೆಯಲ್ಲಿ 14 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 178 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 23 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 185 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. ಈವರೆಗೆ ಒಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೊಪ್ಪಳದಲ್ಲಿ ಕಳೆದ 24 ಗಂಟೆಯಲ್ಲಿ 59 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 9,908 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 27 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು ಎಷ್ಟು ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ಮಂಡ್ಯದಲ್ಲಿ ಕಳೆದ 24 ಗಂಟೆಯಲ್ಲಿ 78 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 2,952 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 33 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 968 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ಮೈಸೂರಿನಲ್ಲಿ ಕಳೆದ 24 ಗಂಟೆಯಲ್ಲಿ 176 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 20,053 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 62 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 3951 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. ಈವರೆಗೆ ಒಟ್ಟು 40 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ರಾಯಚೂರಿನಲ್ಲಿ ಕಳೆದ 24 ಗಂಟೆಯಲ್ಲಿ 60 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 9845 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಯಾರಿಗೂ ವಾರ್ನ್ ಮಾಡಿದ ವರದಿಯಾಗಿಲ್ಲ. ಆದರೆ ಒಟ್ಟು 3198 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. ಒಟ್ಟು ಈವರೆಗೆ 33 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ರಾಮನಗರದಲ್ಲಿ ಕಳೆದ 24 ಗಂಟೆಯಲ್ಲಿ 11 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 2278 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಯಾರಿಗೂ ವಾರ್ನ್ ಮಾಡಿದ ವರದಿಯಾಗಿಲ್ಲ. ಆದರೆ ಒಟ್ಟು 11 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಕಳೆದ 24 ಗಂಟೆಯಲ್ಲಿ ಯಾವುದೂ ಪತ್ತೆಯಾಗಿದ್ದು, ಈವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಕಳೆದ 24 ಗಂಟೆ ಅವಧಿಯಲ್ಲಿ ಯಾರಿಗೂ ವಾರ್ನ್ ಮಾಡಲಾಗಿಲ್ಲ, ಒಟ್ಟು ಈವರೆಗೆ ಯಾರಿಗೂ ವಾರ್ನ್ ಮಾಡಿದ ವರದಿಯಾಗಿಲ್ಲ.
ತುಮಕೂರಿನಲ್ಲಿ ಕಳೆದ 24 ಗಂಟೆಯಲ್ಲಿ 122ಪ್ರಕರಣಗಳು ಪತ್ತೆಯಾಗಿದ್ದು ಈವರೆಗೆ 292 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 122 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 122 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. ಈವರೆಗೆ ಒಟ್ಟು 24 ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಉಡುಪಿಯಲ್ಲಿ ಕಳೆದ 24 ಗಂಟೆಯಲ್ಲಿ 65 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 1155 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 11 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 978 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. ಒಟ್ಟು ಈವರೆ್ಗೆ 3 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಉತ್ತರ ಕನ್ನಡದಲ್ಲಿ ಕಳೆದ 24 ಗಂಟೆಯಲ್ಲಿ 41 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 186 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 4 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 160 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ.
ವಿಜಯಪುರದಲ್ಲಿ ಕಳೆದ 24 ಗಂಟೆಯಲ್ಲಿ 291 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 580 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 287 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 517 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಒಟ್ಟು ಈವರೆಗೆ 64 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಯಾದಗಿರಿಯಲ್ಲಿ ಕಳೆದ 24 ಗಂಟೆಯಲ್ಲಿ 110 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 524 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 65 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 1121 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. ಒಟ್ಟು ಈವರೆಗೆ 4 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ರಾಜ್ಯದ 30 ಜಿಲ್ಲೆಗಳಿಂದ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದ 5269 ಪ್ರಕರಣಗಳು ಕಳೆದ 24 ಪ್ರಕರಣಗಳು ಗಂಟೆಯಲ್ಲಿ ಪತ್ತೆಯಾಗಿವೆ. ಈವರೆಗೆ 1,87,490 ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 4733 ಜನರಿಗೆ ವಾರ್ನ್ ಮಾಡಲಾಗಿದ್ದು, ಒಟ್ಟು 48,764 ಜನರಿಗೆ ಈವರೆಗೆ ವಾರ್ನ್ ಮಾಡಲಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 16 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಒಟ್ಟು ಈವರೆಗೆ 286 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇಡೀ ರಾಜ್ಯದಲ್ಲಿ ವಿಜಯಪುರದಲ್ಲಿ ಅತಿ ಹೆಚ್ಚು ಅಂದರೆ 64 ಎಫ್ಐಆರ್ ದಾಖಲು, ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 60287 ಉಲ್ಲಂಘನೆ ಪ್ರಕರಣ, ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 1,51,517 ವಾರ್ನ್ ಮಾಡಿದ ಪ್ರಕರಣ ಕಂಡುಬಂದಿದೆ. ಶಿವಮೊಗ್ಗದಲ್ಲಿ ಯಾವುದೇ ಉಲ್ಲಂಘನೆ, ಎಫ್ಐಆರ್ ದಾಖಲು, ವಾರ್ನ್ ನಂತರ ಘಟನೆ ನಡೆದಿಲ್ಲ.