ETV Bharat / state

ನಾಳೆ ಸಚಿವ ಸಂಪುಟ ಸಭೆ ಹಿನ್ನೆಲೆ ಗೃಹ ಸಚಿವರಿಂದ ಪೂರ್ವಭಾವಿ ಸಭೆ‌ - Karnataka Home Minister Bommai

ಸುದೀರ್ಘ ಸಮಾಲೋಚನೆ ನಡೆಸಿ ಮಾಧುಸ್ವಾಮಿ ವಾಪಸ್ ತೆರಳಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿಯೇ ಇದ್ದು, ಭದ್ರತೆ ಹಾಗೂ ಮತ್ತಿತರ ವಿಚಾರಗಳ ಕುರಿತು ವಿಧಾನಸೌಧದ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

Home Minister Bommai held a preliminary meeting ಪೂರ್ವಭಾವಿ ಸಭೆ‌ ನಡೆಸಿದ ಗೃಹ ಸಚಿವ ಬೊಮ್ಮಾಯಿ
ಗೃಹ ಸಚಿವ ಬೊಮ್ಮಾಯಿ
author img

By

Published : Jul 22, 2020, 7:40 PM IST

ಬೆಂಗಳೂರು : ನಾಳೆ ಬೆಳಗ್ಗೆ ಸಚಿವ ಸಂಪುಟ ಸಭೆ ಇರುವ ಹಿನ್ನೆಲೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿದರು.

ವಿಧಾನಸೌಧದಲ್ಲಿ ಇಂದು ಸಂಜೆ ನಡೆದ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಪಾಲ್ಗೊಂಡಿದ್ದರು. ನಾಳೆ ಬೆಳಗ್ಗೆ 11ಕ್ಕೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಇದಕ್ಕೆ ಅಗತ್ಯವಿರುವ ಪೂರ್ವಭಾವಿ ಚರ್ಚೆಯನ್ನು ನಡೆಸಲಾಯಿತು.

ಪೂರ್ವಭಾವಿ ಸಭೆ‌

ಸುದೀರ್ಘ ಸಮಾಲೋಚನೆ ನಡೆಸಿ ಮಾಧುಸ್ವಾಮಿ ವಾಪಸ್ ತೆರಳಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿಯೇ ಇದ್ದು, ಭದ್ರತೆ ಹಾಗೂ ಮತ್ತಿತರ ವಿಚಾರಗಳ ಕುರಿತು ವಿಧಾನಸೌಧದ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ವಿಧಾನಸೌಧಕ್ಕೆ ಕರೆಸಿಕೊಂಡು ಗೃಹಸಚಿವರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಂಪುಟ ಉಪ ಸಮಿತಿ ಸಭೆಗೂ ಮುನ್ನ ನಗರ ಪೊಲೀಸ್ ಆಯುಕ್ತರ ಜೊತೆ ಚರ್ಚಿಸಿದ ಗೃಹ ಸಚಿವರು ಲಾಕ್​ಡೌನ್​ ತೆರವಿನ ನಂತರದ ಬೆಂಗಳೂರಿನ ಬೆಳವಣಿಗೆ ಕುರಿತು ಮಾಹಿತಿ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.