ETV Bharat / state

ಹಿಜಾಬ್ ಮೂಲಭೂತ ಹಕ್ಕೆ ಎಂಬುದನ್ನು ಪರಿಶೀಲಿಸಬೇಕು : ಹೈಕೋರ್ಟ್​ನಲ್ಲಿ ಇಂದಿನ ವಾದ-ಪ್ರತಿವಾದಗಳೇನು?

author img

By

Published : Feb 24, 2022, 8:01 PM IST

ಹಿಜಾಬ್ ನಿರ್ಬಂಧ ಪ್ರಶ್ನಿಸಿ ಉಡುಪಿಯ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ರೇಷಮ್ ಹಾಗೂ ಇತರರು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣ ಪೀಠ ವಿಚಾರಣೆ ನಡೆಸಿತು. ಸುದೀರ್ಘ ವಾದ ಆಲಿಸಿದ ಪೀಠ ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಿತು.

high-court
ಹೈಕೋರ್ಟ್

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು 10 ದಿನ ವಿಚಾರಣೆ ನಡೆಸಿದ ಹೈಕೋರ್ಟ್ ತ್ರಿಸದಸ್ಯ ಪೀಠ, ಹಿಜಾಬ್ ಮೂಲಭೂತ ಹಕ್ಕೆ? ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.

ಸಿಎಫ್ಐ ವಿರುದ್ಧ ಎಫ್ಐಆರ್.. ವಿಚಾರಣೆ ಆರಂಭದಲ್ಲಿ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಪೀಠಕ್ಕೆ ಮಾಹಿತಿ ನೀಡಿ, ಬೆದರಿಕೆ ಹಾಕಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವಿರುದ್ಧ ಶಿಕ್ಷಕರು ನೀಡಿರುವ ದೂರಿನ ಮೇರೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಒಂದು ಎಫ್‌ಐಆರ್ ದಾಖಲಾಗಿದೆ. ಈ ಎಫ್ಐಆರ್ ಹಾಗೂ ಇತರೆ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವುದಾಗಿ ತಿಳಿಸಿದರು.

ಉಪನ್ಯಾಸಕರ ಪರ ವಕೀಲರ ವಾದ.. ಉಪನ್ಯಾಸಕರ ಪರ ವಕೀಲ ಗುರು ಕೃಷ್ಣಕುಮಾರ್ ವಾದ ಮಂಡಿಸಿ, ವಿದ್ಯಾರ್ಥಿಗಳಿಗೆ ತಾರತಮ್ಯ ರಹಿತ ಶಿಕ್ಷಣಕ್ಕಾಗಿ ಸಮವಸ್ತ್ರ ಜಾರಿಗೆ ತರಲಾಗಿದೆ. ಸಮವಸ್ತ್ರ ನಿಯಮವನ್ನು ಸಂವಿಧಾನದ 25(1) ಆಧರಿಸಿ ಪ್ರಶ್ನಿಸುವುದು ಸರಿಯಲ್ಲ.

ಮಕ್ಕಳ ನಡುವೆ ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಇರಬಾರದು. ಜಾತ್ಯಾತೀತ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ. ಈ ನಿಟ್ಟಿನಲ್ಲಿ ಆದಿಶಂಕರ ಶಿವಾಚಾರ್ಯ ವರ್ಸಸ್ ತಮಿಳುನಾಡು ಪ್ರಕರಣದ ತೀರ್ಪು ಪರಿಶೀಲಿಸಬೇಕು. ಜಾತ್ಯಾತೀತ ಶಿಕ್ಷಣ ನೀಡುವುದಕ್ಕಾಗಿ ಡ್ರೆಸ್ ಕೋಡ್ ರೂಪಿಸಲಾಗಿದೆ. ಧಾರ್ಮಿಕ ಸ್ವಾತಂತ್ರ್ಯದಲ್ಲಿ ಮಧ್ಯಪ್ರವೇಶಿಸುವುದು ಸರ್ಕಾರದ ಆದೇಶದ ಉದ್ದೇಶವಲ್ಲ. ಜಾತ್ಯಾತೀತ ಶಿಕ್ಷಣ ಜಾರಿಯಾಗುವಂತೆ ನೋಡಿಕೊಳ್ಳುವುದಷ್ಟೇ ಸರ್ಕಾರದ ಉದ್ದೇಶ ಎಂದು ವಿವರಿಸಿದರು.

ವಿದ್ಯಾರ್ಥಿನಿಯರ ಪರ ವಾದ.. ವಿದ್ಯಾರ್ಥಿನಿಯರ ಪರ ವಾದ ಮಂಡಿಸಿದ ಹಿರಿಯ ವಕೀಲ ಎ. ಎಂ. ಧರ್, ನ್ಯೂ ಹಾರಿಜಾನ್ ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ ನಿರ್ಬಂಧಿಸಲಾಗಿದೆ. ನನಗೆ ಅರೇಬಿಕ್ ಬರುತ್ತೆ, ಕುರಾನ್ ಓದಿದ್ದೇನೆ. ಕುರಾನ್ ನ ಎರಡು ಸುರಾಗಳನ್ನು ಪರಿಶೀಲಿಸಬೇಕು. ಖುರಾನ್​ನಲ್ಲಿ ನಾಲ್ಕು ರೀತಿಯ ವಸ್ತ್ರಗಳನ್ನು ಉಲ್ಲೇಖಿಸಲಾಗಿದೆ. ಹಿಜಾಬ್ ಇಸ್ಲಾಂಗಿಂತ ಮೊದಲೇ ಜಾರಿಯಲ್ಲಿತ್ತು. ಕ್ರೈಸ್ತರೂ ಕೂಡಾ ತಲೆಯ ಮೇಲೆ ವಸ್ತ್ರ ಧರಿಸುತ್ತಿದ್ದರು. ತಲೆ, ಕೂದಲು, ಎದೆ ಭಾಗವನ್ನು ಮುಚ್ಚಬೇಕೆಂದು ಕುರಾನ್ ನಲ್ಲಿ ಹೇಳಲಾಗಿದೆ. ಹೀಗಾಗಿಯೇ, ವಿದ್ಯಾರ್ಥಿನಿಯರು ಹಿಜಾಬ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಿದ್ಯಾರ್ಥಿನಿಯರು ಬುರ್ಖಾ ಧರಿಸಲು ಅವಕಾಶ ಕೋರುತ್ತಿಲ್ಲ ಎಂದರು.

ಅಲ್ಲದೇ, ಭಾರತದಲ್ಲಿ ಇಸ್ಲಾಂ ಎರಡನೇ ದೊಡ್ಡ ಧರ್ಮವಾಗಿದೆ. ಇಂಡೋನೇಷ್ಯಾದಲ್ಲಿ ಮೊದಲು ಹಿಂದೂ ಧರ್ಮವಿತ್ತು. ಕಾಲಾಂತರದಲ್ಲಿ ಇಂಡೋನೇಷ್ಯಾ ಮುಸ್ಲಿಂ ರಾಷ್ಟ್ರವಾಯಿತು. ಆದರೂ, ಪ್ರವಾದಿಗಳು ಹಿಂದೂ ಸಂಪ್ರದಾಯ ಆಚರಿಸಲು ಅನುಮತಿ ನೀಡಿದ್ದರು.

ಮಹಿಳೆಯರಿಗೆ ತಲೆ, ಮುಖ ಹಾಗೂ ಎದೆ ಭಾಗ ಮುಚ್ಚುವುದು ಅತ್ಯಗತ್ಯ. ನೈತಿಕತೆ ಕಾಪಾಡಲು ಇದು ಅಗತ್ಯವಾಗಿದೆ. ಭಾರತ ಹಿಂದೂ ರಾಷ್ಟ್ರವಲ್ಲ, ಮುಸ್ಲಿಂ ರಿಪಬ್ಲಿಕ್ ಕೂಡಾ ಅಲ್ಲ. ಇದು ಜಾತ್ಯಾತೀತ ರಾಷ್ಟ್ರ. ಆದ್ದರಿಂದ, ಕುರಾನ್ ನಲ್ಲಿ ಹೇಳಿರುವಂತೆ ಹಿಜಾಬ್ ಧರಿಸಲು ಅನುಮತಿ ನೀಡಬೇಕು ಎಂದು ಕೋರಿದರು.

ಮತ್ತೆ ವಾದ ಮಂಡಿಸಿದ ಕಾಮತ್.. ಸರ್ಕಾರ, ಕಾಲೇಜು ಆಡಳಿತ ಹಾಗೂ ಸಿಡಿಸಿ ಪರ ಹಿರಿಯ ವಕೀಲರು ಮಂಡಿಸಿರುವ ವಾದಗಳಿಗೆ ಪ್ರತಿವಾದ ಮಂಡಿಸಿದ ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ ಕಾಮತ್, ಸರ್ಕಾರದ ಆದೇಶದಲ್ಲೇ ಲೋಪವಿದೆ, ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸೂಕ್ತ ವಾದ ಮಂಡನೆಯಾಗಿಲ್ಲ. ಕಾಲೇಜು ಅಭಿವೃದ್ಧಿ ಸಮಿತಿಯೂ ಕಾನೂನುಬದ್ಧವಲ್ಲ. ಶಾಸಕರ ನೇತೃತ್ವದ ಸಮಿತಿಗೆ ಶಾಸನದ ಬೆಂಬಲ ಇಲ್ಲ. ಸಮಿತಿಗೆ ಅಧಿಕಾರ ಕೊಡುವ ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿಲ್ಲ ನಿಜ. ಆದರೆ, ಶಿಕ್ಷಣ ಕಾಯ್ದೆಯ ಅಧಿಕಾರವನ್ನು ಸಿಡಿಸಿಗೆ ನೀಡಿರುವುದು ಸರಿಯಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕಾಲೇಜಿನ ಸಮವಸ್ತ್ರ ನೀತಿಯಲ್ಲಿ ಹಿಜಾಬ್ ಗೆ ಅವಕಾಶ ನೀಡಿಲ್ಲ. ನೀವು ಹಿಜಾಬ್ ಧಾರ್ಮಿಕ ಹಕ್ಕು ಎನ್ನುತ್ತೀರಿ. ಹೀಗಾಗಿ, ಹಿಜಾಬ್ ಮೂಲಭೂತ ಹಕ್ಕೆ ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.

ವಾದ ಮುಂದುವರೆಸಿದ ಕಾಮತ್, ಬಿಜಾಯ್ ಎಮ್ಯಾನುಯಲ್ ಕೇಸಿನಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ವಿದ್ಯಾರ್ಥಿಯ ಹಕ್ಕನ್ನು ಕೇಳದೇ ನಿರ್ಬಂಧ ಹಾಕಿದ್ದು ಏಕೆಂದು ಪ್ರಶ್ನಿಸಿದೆ. ಹಿಜಾಬ್ ಧರಿಸಬೇಕೆಂಬುದು ವಿದ್ಯಾರ್ಥಿನಿಯರ ನಂಬಿಕೆಯಾಗಿದೆ. ಇದನ್ನು ನಿಯಂತ್ರಿಸಲು ಕಾನೂನಿನ ಬೆಂಬಲ ಎಲ್ಲಿದೆ?. ಸಂವಿಧಾನ ರಚನಾ ಸಭೆಯಲ್ಲಿ ಧಾರ್ಮಿಕ ಗುರುತು ನಿರ್ಬಂಧಿಸುವ ಪ್ರಸ್ತಾಪವಿತ್ತು. ಆದರೆ, ಸಂವಿಧಾನ ರಚನಕಾರರು ಇದಕ್ಕೆ ಸಮ್ಮತಿಸಲಿಲ್ಲ. ಈಗ ಸರ್ಕಾರ ಅದನ್ನು ಹೇರಲು ಯತ್ನಿಸುತ್ತಿದೆ. ಸರ್ಕಾರದ ಆದೇಶದಿಂದ ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರದ ಆದೇಶಕ್ಕೇ ಕಾನೂನಿನ ಬಲವಿಲ್ಲ. ಆದ್ದರಿಂದ, ಅದನ್ನು ರದ್ದುಪಡಿಸಬೇಕು ಎಂದು ಕೋರಿದರು.

ಮಾಧ್ಯಮಗಳ ನಿರ್ಬಂಧ ಕೋರಿದ್ದ ಅರ್ಜಿ ವಜಾ.. ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರನ್ನು ಮಾಧ್ಯಮಗಳು ಬೆನ್ನತ್ತಿ ಹೋಗಿ ಚಿತ್ರೀಕರಿಸದಂತೆ ಹಾಗೂ ಪ್ರಸಾರ ಮಾಡದಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಜಾ ಮಾಡಿತು. ಪಿಐಎಲ್ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಹಾಗೂ ಅರ್ಜಿದಾರರ ಪರ ವಕೀಲರು ಹಾಜರಾಗದ ಹಿನ್ನೆಲೆಯಲ್ಲಿ ಅರ್ಜಿ ವಜಾ ಮಾಡಿ ಪೀಠ ಆದೇಶ ಹೊರಡಿಸಿತು.

ಓದಿ: ಪ್ರಾಣಿ, ಪಕ್ಷಿಗಳ ದಾಹ ನೀಗಿಸಲು ಕೆರೆ ಮೀಸಲಿಟ್ಟ ಗ್ರಾಮಸ್ಥರು.. ಅನ್ಯ ಕಾರ್ಯಕ್ಕೆ ಈ ನೀರನ್ನ ಬಳಸಿದ್ರೆ ಬೀಳುತ್ತೆ ಕೇಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.