ಬೆಂಗಳೂರು: ನಗರದ ಇಂದಿರಾ ಗಾಂಧಿ ಮ್ಯುಸಿಕಲ್ ಪಾರ್ಕ್ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುತ್ತಿರುವ ಏಕಶಿಲಾ ಸೈನಿಕ ಸ್ಮಾರಕದ ವೀರಗಲ್ಲು ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ವೀರಗಲ್ಲಿನ ಮೇಲೆ ರಾಜಕಾರಣಿಗಳ ಹೆಸರು ಕೆತ್ತಿಸಲಾಗಿದೆ ಎಂದು ಖ್ಯಾತ ವಾಸ್ತುಶಿಲ್ಪಿ ಅಶೋಕ್ ಗುಡಿಗಾರ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ಪುರಸ್ಕರಿದ ನ್ಯಾಯಾಲಯ ಕಾಮಗಾರಿಗೆ ತಡೆಯಾಜ್ಞೆ ಸೂಚಿಸಿದೆ.
ತಡೆಯಾಜ್ಞೆ ಮಧ್ಯೆಯು ಕಾಮಗಾರಿ ಪ್ರಗತಿಯಲ್ಲಿದ್ದು, ಬಿಡಿಎ ಮಾಧ್ಯಮ ಸಂಪರ್ಕ ಅಧಿಕಾರಿ, ನಮಗೆ ಅದರ ಬಗ್ಗೆ ಗೊತ್ತಿಲ್ಲ. ನ್ಯಾಷನಲ್ ಇಂಟ್ರೆಸ್ಟ್ ಎಂದು ಕೆಲಸ ಮುಂದುವರೆಸಲಾಗುತ್ತಿದೆ ಎಂದರು.