ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಹೈಕೋರ್ಟ್ ಉತ್ತರಿಸಿದ್ದು, 'ಉದ್ಯಾನದ ಬಗ್ಗೆ ನಿಮಗಿಂತ ಹೆಚ್ಚಿನ ಕಾಳಜಿ ನ್ಯಾಯಲಯಕ್ಕೆ ಇದೆ' ಎಂದು ತಿಳಿಸಿದೆ.
ಕಬ್ಬನ್ ಪಾರ್ಕ್‌ನಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಪಿಐಎಲ್ ಅರ್ಜಿದಾರರಿಗೆ ಹೈಕೋರ್ಟ್ ತರಾಟೆ ತೆಗೆದು ಪರಿಸರದ ಬಗ್ಗೆ ನಿಮಗಿಂತ ಹೆಚ್ಚಿನ ಕಾಳಜಿ ನಮಗೆ ಇದೆ. ಪ್ರಕೃತಿಗೆ ಹಾನಿಯಾಗುವಂತೆ ಒಂದೇ ಒಂದು ಇಟ್ಟಿಗೆ ಇಡುವುದಿಲ್ಲ. ಹೈಕೋರ್ಟ್ಗೆ 2 ಲಕ್ಷ ಚದರಡಿ ಕಟ್ಟಡದ ತುರ್ತು ಅಗತ್ಯವಿದೆ. ಈಗಾಗಲೇ ತಳಮಹಡಿಯಲ್ಲಿ 400ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹೈಕೋರ್ಟ್ ಸಿಬ್ಬಂದಿಗಳಿಗೆ, ವಕೀಲರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಹೈಕೋರ್ಟ್ ಸಿಬ್ಬಂದಿ ತಳಮಹಡಿಯಲ್ಲಿ ಕೆಲಸ ಮಾಡುವುದು ಅಮಾನವೀಯಲ್ಲವೇ? ಎಂದು ತಿಳಿಸಿ ಅರ್ಜಿ ಇತ್ಯರ್ಥ ಪಡಿಸಿದೆ.
ಕಬ್ಬನ್ ಪಾರ್ಕ್‌ನಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದರೆ ಸುತ್ತಲಿನ ಪರಿಸರಕ್ಕೆ ಹಾನಿ ಹಾಗೂ ಭದ್ರತೆ ದೃಷ್ಟಿಯಿಂದ ಕಟ್ಟಡ ಅಪಾಯಕಾರಿ ಎಂಬುದು ಅರ್ಜಿದಾರರ ವಾದವಾಗಿತ್ತು.