ETV Bharat / state

ಶಓಮಿ ಸಂಸ್ಥೆಗೆ ಸೇರಿದ 5,551 ಕೋಟಿ ಜಪ್ತಿ ಪ್ರಶ್ನಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್​ - Xiaomi assent Seizure

ಚೀನಾದ ಶಓಮಿ ತಂತ್ರಜ್ಞಾನ ಸಂಸ್ಥೆಯ 5551.27 ಕೋಟಿ ರೂ. ಜಪ್ತಿ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.

ಹೈಕೋರ್ಟ್​
ಹೈಕೋರ್ಟ್​
author img

By

Published : Nov 17, 2022, 8:35 PM IST

ಬೆಂಗಳೂರು: ಚೀನಾದ ಶಓಮಿ ತಂತ್ರಜ್ಞಾನ ಸಂಸ್ಥೆಗೆ ಸೇರಿದ 5551.27 ಕೋಟಿ ರೂ. ಜಪ್ತಿಗಾಗಿ ನೋಟಿಸ್​ ನೀಡಿದ್ದ ಜಾರಿ ನಿರ್ದೇಶನಾಲಯದ ಕ್ರಮವನ್ನು ಎತ್ತಿ ಹಿಡಿದಿದ್ದ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) 1999ರ ಅಡಿ ರಚಿಸಿರುವ ಸಕ್ಷಮ ಪ್ರಾಧಿಕಾರದ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್​ ತೀರ್ಪು ಕಾಯ್ದಿರಿಸಿದೆ.

ಶಓಮಿ ಟೆಕ್ನಾಲಜಿ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನ್ಯಾಯಪೀಠ ಆದೇಶವನ್ನು ಕಾಯ್ದಿರಿಸಿದೆ.

ಪ್ರಕರಣವೇನು? ಚೀನಾ ಮೂಲದ ಶಓಮಿ ಬಳಗದ ಅಧೀನ ಕಂಪನಿಯಾಗಿರುವ ಶಓಮಿ ಟೆಕ್ನಾಲಜಿ ಇಂಡಿಯಾಗೆ ಸೇರಿದ 5551.27 ಕೋಟಿ ರೂ. ಮುಟ್ಟುಗೋಲು ಹಾಕಿಕೊಳ್ಳಲು ಏ.29ರಂದು ಇಡಿ ಆದೇಶ ಹೊರಡಿಸಿತ್ತು. ರಾಯಧನದ ಸೋಗಿನಲ್ಲಿ ಒಂದು ಶಓಮಿ ಗ್ರೂಪ್ ಘಟಕ ಸೇರಿ ಮೂರು ವಿದೇಶಿ ಮೂಲದ ಸಂಸ್ಥೆಗಳಿಗೆ ಹಣವನ್ನು ಅಕ್ರಮವಾಗಿ ರವಾನೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿತ್ತು. ಜತೆಗೆ, ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಅಕ್ರಮವಾಗಿ ಹಣ ಪಾವತಿಸಲಾಗಿದೆ ಎಂಬ ಆರೋಪ ಕುರಿತು ತನಿಖೆಯನ್ನೂ ಆರಂಭಿಸಿತ್ತು. ಇದರಿಂದ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.

ಈ ಹಿಂದೆ ಶಓಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಪ್ರತಿವಾದಿಯಾಗಿರುವ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್‌ ಜಾರಿ ಮಾಡಿತ್ತು. ಅಲ್ಲದೆ, ದೈನಂದಿನ ಚಟುವಟಿಕೆಗಳನ್ನು ನಡೆಸಲು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವ ಖಾತೆಯಿಂದ ಹಣ ಪಡೆದುಕೊಳ್ಳುವುದಕ್ಕೆ ಅವಕಾಶವನ್ನು ನೀಡಲಾಗಿತ್ತು. ಜತೆಗೆ, ವಿಚಾರಣೆಗೆ ಬಾಕಿ ಇರುವಾಗ ತಡೆಯಾಜ್ಞೆ ಮುಂದುವರಿಸಿರುವ ಹೊರತಾಗಿಯೂ ಸ್ಮಾರ್ಟ್‌ ಫೋನ್‌ಗಳ ಮಾರಾಟ ಮತ್ತು ಉತ್ಪಾದನೆಗೆ ಅಗತ್ಯವಾದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದಕ್ಕೆ ಹಣ ಪಾವತಿಸಲು ಶಓಮಿಗೆ ಅನುಮತಿ ನೀಡಲಾಗಿತ್ತು. ಸಕ್ಷಮ ಪ್ರಾಧಿಕಾರ ಆದೇಶ ಮಾಡುವವರೆಗೆ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ಹೈಕೋರ್ಟ್‌ ಹೇಳಿತ್ತು.

ಅಲ್ಲದೆ, ಶಓಮಿ ಖಾತೆ ಜಪ್ತಿ ಆದೇಶ ಮಾಡಿರುವ ಅಧಿಕಾರಿಯು ಕಾಯಿದೆಯ ಅನ್ವಯ 30 ದಿನಗಳಲ್ಲಿ ಸದರಿ ಆದೇಶವನ್ನು ಸಕ್ಷಮ ಪ್ರಾಧಿಕಾರದ ಮುಂದೆ ಇಡಬೇಕು. ಭಾದಿತರಿಗೆ ಅವಕಾಶ ಮಾಡಿಕೊಟ್ಟು, ಸಕ್ಷಮ ಪ್ರಾಧಿಕಾರವು 180 ದಿನಗಳಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಬೇಕು. ಈ ಆದೇಶವನ್ನು ಮೇಲ್ಮನವಿ ನ್ಯಾಯ ಮಂಡಳಿಯ ಮುಂದೆ ಪ್ರಶ್ನಿಸಬಹುದಾಗಿದೆ ಎಂದು ಆದೇಶದಲ್ಲಿ ಪೀಠ ಹೇಳಿತ್ತು. ಅಲ್ಲದೇ, ಕಾಯಿದೆಯ ಅನ್ವಯ ಜಪ್ತಿ ಆದೇಶ ಮಾಡಿರುವ ಜಾರಿ ನಿರ್ದೇಶನಾಲಯದ ವ್ಯಾಪ್ತಿಯ ವಿಚಾರವನ್ನು ಸಕ್ಷಮ ಪ್ರಾಧಿಕಾರ ನಿರ್ಧರಿಸಬೇಕು. ಸಕ್ಷಮ ಪ್ರಾಧಿಕಾರದ ಮುಂದೆ ಈಗಾಗಲೇ ಜಪ್ತಿ ಆದೇಶ ಇಟ್ಟಿರುವುದರಿಂದ ಈ ಆದೇಶ ಮಾಡಿದ 60 ದಿನಗಳ ಒಳಗೆ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಸೂಚನೆ ನೀಡಿತ್ತು.

(ಓದಿ: 5,551 ಕೋಟಿ ರೂ. ಜಪ್ತಿ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ: ಶಿಯೋಮಿಗೆ ಮರು ಅರ್ಜಿಯಲ್ಲೂ ಸಿಗದ ರಿಲೀಫ್​)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.