ETV Bharat / state

ಸಂಸ್ಥೆ ವಾಹನದಿಂದ ಘಟನೆ ನಡೆದಿಲ್ಲ:  ಕೆಎಸ್‌ಆರ್‌ಟಿಸಿ ವಾದ ತಳ್ಳಿ ಹಾಕಿದ ಹೈಕೋರ್ಟ್ - Motor Vehicles Tribunal

ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರೂ, ಅಪಘಾತಕ್ಕೆ ನಮ್ಮ ವಾಹನ ಕಾರಣವಲ್ಲ ಎಂಬುದಾಗಿ ಕೆಎಸ್‌ಆರ್‌ಟಿಸಿ ಮಂಡಿಸಿದ್ದ ವಾದವನ್ನು ನ್ಯಾಯಮೂರ್ತಿ ಎನ್. ಎಸ್ ಸಂಜಯ್ ಗೌಡ ಅವರಿದ್ದ ನ್ಯಾಯಪೀಠ ತಳ್ಳಿಹಾಕಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Nov 1, 2022, 10:52 PM IST

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರೂ, ಅಪಘಾತಕ್ಕೆ ನಮ್ಮ ವಾಹನ ಕಾರಣವಲ್ಲ ಎಂಬುದಾಗಿ ಕೆಎಸ್‌ಆರ್‌ಟಿಸಿ ಮಂಡಿಸಿದ್ದ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.

ಮೃತರಿಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್. ಎಸ್ ಸಂಜಯ್ ಗೌಡ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ. ಅಲ್ಲದೇ, ಘಟನೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿ ಮೃತಪಡುವುದಕ್ಕೂ ಮುನ್ನ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಇದೇ ಆಧಾರದಲ್ಲಿ ಪೊಲೀಸ್ ಸಿಬ್ಬಂದಿ ತನಿಖೆ ನಡೆಸಿದೆ.

ಅಲ್ಲದೇ, ನಿರ್ವಾಹಕ ಬಸ್‌ನ ಹಿಂಬದಿಯಲ್ಲಿ ಕುಳಿತಿದ್ದು, ಮುಂದೆ ಆಗುವ ಘಟನೆ ಬಗ್ಗೆ ಗಮನಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ, ಪ್ರಕರಣದಿಂದ ರಕ್ಷಣೆ ಪಡೆಯಲು ಚಾಲಕ ಘಟನೆ ನಡೆದಿಲ್ಲ ಎಂಬುದಾಗಿ ಹೇಳುವ ಅವಕಾಶವಿದೆ. ಹೀಗಾಗಿ ಇಬ್ಬರ ಸಾಕ್ಷ್ಯಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬುದಾಗಿ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: 2011ರ ಮಾರ್ಚ್ 3ರಂದು ಬೆಳಗಿನ ಜಾವ 1.45ರ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದವರಿಗೆ ಬಸ್ ಡಿಕ್ಕಿ ಹೊಡೆದಿತ್ತು. ಘಟನೆಯಿಂದ ಮದ್ದೂರು ತಾಲೂಕಿನ ಶಿವಪುರ ಗ್ರಾಮದ ಆರ್.ರವಿ, ಎಸ್.ಆರ್.ರವಿ ಸಾವನ್ನಪ್ಪಿದ್ದರು. ಹರೀಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಮೃತರ ಕುಟುಂಬಸ್ಥರು ಹಾಗೂ ಹರೀಶ್ ಅವರ ಸಂಬಂಧಿಕರು ಪರಿಹಾರ ಕೋರಿ ಒತ್ತಾಯಿಸಿದ್ದರು.

ಆದರೆ, ಘಟನೆಗೂ ನಮಗೂ ಸಂಬಂಧವೇ ಇಲ್ಲ. ನಮ್ಮ ಸಂಸ್ಥೆಗೆ ಸೇರಿ ಯಾವುದೇ ಬಸ್ ಅಪಘಾತವನ್ನುಂಟು ಮಾಡಿಲ್ಲ ಎಂದು ಮೋಟಾರು ವಾಹನಗಳ ನ್ಯಾಯಮಂಡಳಿಯಲ್ಲಿ ಕೆಎಸ್‌ಆರ್‌ಟಿಸಿ ವಾದ ಮಂಡಿಸಿತ್ತು. ಆದರೂ, ನ್ಯಾಯಮಂಡಳಿ ಮೃತ ಆರ್.ರವಿ ಕುಟುಂಬಸ್ಥರಿಗೆ 5,89,000 ರು. ಎಸ್.ಆರ್.ರವಿ ಅವರ ಕುಟುಂಬಸ್ಥರಿಗೆ 7,30,136 ರೂ ಹಾಗೂ ಗಾಯಗೊಂಡಿದ್ದ ಹರೀಶ್ ಅವರಿಗೆ 7,13,000 ರೂ. ಗಳ ಪರಿಹಾರ ನೀಡುವಂತೆ ಕೆಎಸ್‌ಆರ್‌ಟಿಸಿಗೆ ಸೂಚನೆ ನೀಡಿತ್ತು.

ಕೆಎಸ್‌ಆರ್‌ಟಿಸಿ ವಾದವೇನು?: ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಕೆಎಸ್‌ಆರ್‌ಟಿಸಿ, ನಮ್ಮ ಸಂಸ್ಥೆಯ ವಾಹನದಿಂದ ಯಾವುದೇ ಅಪಘಾತ ನಡೆದಿಲ್ಲ. ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿ ಸತ್ಯಕ್ಕೆ ದೂರವಾಗಿದೆ. ಘಟನೆ ನಡೆದ ಸ್ಥಳದಲ್ಲಿ ಬಸ್ ಸಂಚರಿಸಿದೆ ಎಂಬ ಮಾತ್ರಕ್ಕೆ ಘಟನೆಗೆ ಕಾರಣ ಎನ್ನುವುದಕ್ಕೆ ಸಾಧ್ಯವಿಲ್ಲ. ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಮಾಡಬೇಕು ಎಂದು ಕೋರಿದ್ದರು.

ಅಲ್ಲದೆ, ಘಟನೆ ನಡೆದ ಸಮಯದಲ್ಲಿ ಅದೇ ಮಾರ್ಗದಲ್ಲಿ ಸಂಚರಿಸಿದ ಬಸ್‌ಗೆ ಯಾವುದೇ ರೀತಿಯಲ್ಲಿಯೂ ಹಾನಿಯಾಗಿಲ್ಲ ಎಂಬುದಾಗಿ ತಪಾಸಣಾ ವರದಿ ತಿಳಿಸಿದೆ. ಚಾಲಕ ಮತ್ತು ನಿರ್ವಾಹಕರೂ ಘಟನೆ ನಡೆದಿಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ವಾದಿಸಿತ್ತು.

ಓದಿ: ಪೋಕ್ಸೋ ಕಾಯಿದೆಯನ್ನು ಯಾವುದೇ ವೈಯಕ್ತಿಕ ಕಾನೂನು ಅತಿಕ್ರಮಿಸುವುದಿಲ್ಲ: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.