ETV Bharat / state

ಬಾರ್​​ಗಳಿಂದ ಶಬ್ದಮಾಲಿನ್ಯ: ಹೈಕೋರ್ಟ್​​​ಗೆ ವರದಿ ಸಲ್ಲಿಕೆ - ಶಬ್ದ ಮಾಲಿನ್ಯ

ಬಾರ್​ಗಳ ಶಬ್ದಮಾಲಿನ್ಯ ಕುರಿತ ಅರ್ಜಿ ವಿಚಾರಣೆ. ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ.

ಬಾರ್​​ಗಳಿಂದ ಶಬ್ದಮಾಲಿನ್ಯ : ಹೈಕೋರ್ಟ್​​​ಗೆ ವರದಿ ಸಲ್ಲಿಕೆ
author img

By

Published : Jun 27, 2019, 3:19 AM IST

ಬೆಂಗಳೂರು: ಬಾರ್​ಗಳ ಶಬ್ದಮಾಲಿನ್ಯ ಅಳೆಯಲು ತೆಗೆದುಕೊಂಡಿರುವ ಕ್ರಮದ ಕುರಿತು ಪೊಲೀಸರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಸ್ತುಸ್ಥಿತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದಾರೆ.

ಈ ಕುರಿತಂತೆ ಡಿಫೆನ್ಸ್‌ ಕಾಲೋನಿ ನಿವಾಸಿಗಳ ಸಂಘದ 20 ಜನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಹೆಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಬಾರ್​​ಗಳ ಶಬ್ದ ಮಾಲಿನ್ಯದ ಬಗ್ಗೆ ಸಾರ್ವಜನಿಕರು ಪೊಲೀಸ್​ ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ದೂರು ನೀಡುವ ವ್ಯವಸ್ಥೆ ಮಾಡಿ, ದೂರುದಾರರ ಗುರುತು ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಗೌಪ್ಯವಾಗಿಡಿ. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಶಬ್ದ ಮಾಪನ ಉಪಕರಣಗಳು ಇರುವಂತೆ ನೋಡಿಕೊಂಡು, ಪೊಲೀಸ್ ಠಾಣೆಯಲ್ಲಿ ಶಬ್ದ ಮಾಲಿನ್ಯ ಅಳೆಯಲು ಸೂಕ್ತ ಮಾಪಕಗಳಿವೆಯೇ ಎಂದು ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಇಂದಿರಾನಗರದಲ್ಲಿ ಪಬ್ ಮತ್ತು ಬಾರ್‌ಗಳಿಂದ ಶಬ್ಧ ಮಾಲಿನ್ಯ ಉಂಟಾಗುತ್ತಿದೆ ಎಂದು ಕೆಲ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ವಿಚಾರಣೆ ವೇಳೆ ಬಾರ್​ಗಳ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಹೀಗಾಗಿ ಬಾರ್​ಗಳ ಕುರಿತು ವರದಿ ನೀಡಲಾಗಿದೆ

Intro:ಬಾರ್ ಗಳ ಶಬ್ದಮಾಲಿನ್ಯ ಹೈಕೋರ್ಟ್ ಗೆ ವರದಿ ಸಲ್ಲಿಕೆ.

ಬೆಂಗಳೂರು :
ಭವ್ಯ
ಬಾರ್ ಗಳ ಶಬ್ದಮಾಲಿನ್ಯ ಅಳೆಯಲು ತೆಗೆದುಕೊಂಡಿರುವ ಕ್ರಮದ ಕುರಿತು ಪೊಲೀಸರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು ವಸ್ತುಸ್ಥಿತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದ್ದಾರೆ.

ಈ ಕುರಿತಂತೆ ಡಿಫೆನ್ಸ್‌ ಕಾಲೋನಿ ನಿವಾಸಿಗಳ ಸಂಘದ 20 ಜನರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು..

ಬಾರ್ ಗಳ ಶಬ್ದ ಮಾಲಿನ್ಯದ ಬಗ್ಗೆ ಸಾರ್ವಜನಿಕರು ನಮ್ಮ 100 ಸಂಖ್ಯೆಗೆ ದೂರವಾಣಿ ಕರೆ ಮಾಡಿ ದೂರು ನೀಡುವ ವ್ಯವಸ್ಥೆ ಮಾಡಿ, ದೂರುದಾರರ ಗುರುತು ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಗೌಪ್ಯವಾಗಿಡಿ. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಶಬ್ದ ಮಾಪನ ಉಪಕರಣಗಳು ಇರುವಂತೆ ನೋಡಿಕೊಂಡು ಪೊಲೀಸ್ ಠಾಣೆಯಲ್ಲಿ ಶಬ್ದ ಮಾಲಿನ್ಯ ಅಳೆಯಲು ಸೂಕ್ತ ಮಾಪಕಗಳಿವೆಯೇ ಎಂದು ಜುಲೈ 17ಕ್ಕೆ ತಿಳಿಸಿ‌ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿದೆ

ಇಂದಿರಾನಗರದಲ್ಲಿ ಪಬ್ ಮತ್ತು ಬಾರ್‌ಗಳಿಂದ ಶಬ್ಧ ಮಾಲಿನ್ಯ ಉಂಟಾಗುತ್ತಿದೆ . ಎಂದು ಕೆಲ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.. ಕಳೆದ ವಿಚಾರಣೆ ವೇಳೆ ಬಾರ್ ಗಳ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಹೀಗಾಗಿ ಇಂದು ಮುಚ್ಚಿದ ಲಕೋಟೆಯಲ್ಲಿ ಬಾರ್ ಗಳ ಕುರಿತು ವರದಿ ನೀಡಲಾಗಿದೆBody:KN_BNG_13_25_HIGCOURT_BHAVYA_7204498Conclusion:KN_BNG_13_25_HIGCOURT_BHAVYA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.