ETV Bharat / state

ತೆರಿಗೆ ವಂಚಿಸಿರುವುದು ಪತ್ತೆಯಾಗುವವರೆಗೂ ಪ್ರಾಸಿಕ್ಯೂಷನ್ ಆರಂಭಿಸುವಂತಿಲ್ಲ: ಹೈಕೋರ್ಟ್ ತೀರ್ಪಿನಿಂದ ಡಿಕೆಶಿ ನಿರಾಳ

ಒಮ್ಮೆ ಆರೋಪಗಳು ನಿಜವೆಂದೇ ಒಪ್ಪಿಕೊಂಡರೂ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 276 ಸಿ(1) ರ ಅಡಿ ಪ್ರಕರಣ ದಾಖಲಿಸಲು ಬರುವುದಿಲ್ಲ.

High court
High court
author img

By

Published : Apr 9, 2021, 10:40 PM IST

ಬೆಂಗಳೂರು: ಲೆಕ್ಕವಿಲ್ಲದ ಪ್ರತಿಯೊಂದು ವಹಿವಾಟಿಗೂ ತೆರಿಗೆ ವಿಧಿಸಬಹುದು ಎಂದು ಪೂರ್ವಭಾವನೆ ಮಾಡಲು ಬರುವುದಿಲ್ಲ. ಹಾಗೆಯೇ, ಐಟಿ ತಪಾಸಣೆ ವೇಳೆ ಪತ್ತೆಯಾದ ಹಣ ತೆರಿಗೆ ವಂಚಿಸಿರುವುದು ಖಚಿತವಾಗುವವರೆಗೆ ಕಾನೂನು ಕ್ರಮ ಜರುಗಿಸುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ವಿರುದ್ಧದ ತೆರಿಗೆ ವಂಚನೆ, ಸಾಕ್ಷ್ಯ ನಾಶ ಆರೋಪ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಳಿಸುವ ಸಂದರ್ಭದಲ್ಲಿ ನ್ಯಾ. ಜಾನ್ ಮೈಕಲ್ ಕುನ್ಹ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಒಮ್ಮೆ ಆರೋಪಗಳು ನಿಜವೆಂದೇ ಒಪ್ಪಿಕೊಂಡರೂ ಸಹ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 276 ಸಿ(1) ರ ಅಡಿ ಪ್ರಕರಣ ದಾಖಲಿಸಲು ಬರುವುದಿಲ್ಲ. ಹೀಗಾಗಿ ಡಿ.ಕೆ ಶಿವಕುಮಾರ್ ವಿರುದ್ಧ ದಾಖಲಿಸಿರುವ ಪ್ರಕರಣ ನಿಯಮಬಾಹಿರವಾಗಿದ್ದು, ಅದನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ:

ಆದಾಯ ತೆರಿಗೆ ವಂಚನೆ ಆರೋಪದಡಿ ಐಟಿ ಅಧಿಕಾರಿಗಳು 2017ರಲ್ಲಿ ಈಗಲ್ ಟನ್ ರೆಸಾರ್ಟ್ ಮೇಲೆ ದಾಳಿ ಮಾಡಿದ್ದರು.

ಈ ವೇಳೆ ಡಿಕೆಶಿ ತಮ್ಮ ಪರ್ಸ್ ನಲ್ಲಿದ್ದ ಚೀಟಿಯೊಂದನ್ನು ಹರಿದು ಹಾಕಿದ್ದರು. ಆ ಬಳಿಕ ಐಟಿ ಅಧಿಕಾರಿಗಳು ಸಾಕ್ಷ್ಯ ನಾಶಪಡಿಸಿದ, ತೆರಿಗೆ ವಂಚಿಸಿದ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಆ ಬಳಿಕ ಪ್ರಕರಣವನ್ನು ಐಟಿ ಪ್ರಕರಣಗಳ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸಿ, ಒಂದು ವರ್ಷದ ಬಳಿಕ ಜನಪ್ರತಿನಿಧಿಗಳ ಕೋರ್ಟ್​​​​ಗೆ ವರ್ಗಾಯಿಸಿತ್ತು.

ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಡಿಕೆಶಿ ವಿರುದ್ಧದ ಪ್ರಕರಣ ಕೈಬಿಟ್ಟಿತ್ತು. ಈ ಆದೇಶ ಪ್ರಶ್ನಿಸಿ ಐಟಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.