ETV Bharat / state

ಸರ್ಕಾರಿ ಆಸ್ತಿ ಹಾನಿ.. ತನಿಖೆಗಾಗಿ ನಿವೃತ್ತ ನ್ಯಾಯಾಧೀಶರ ಹೆಸರು ಸೂಚಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ..

author img

By

Published : Sep 17, 2019, 7:44 AM IST

ಡಿ ಕೆ ಶಿವಕುಮಾರ ಬಂಧನ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಸರ್ಕಾರದ ಆಸ್ತಿ ನಷ್ಟವಾಗಿದ್ದು, ಇದರ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ಹೆಸರು ಸೂಚಿಸಲು ಸರ್ಕಾರಕ್ಕೆ ಹೈಕೋರ್ಟ್​ ಆದೇಶಿಸಿದೆ.

ತನಿಖೆಗೆ ಹೈಕೋರ್ಟ್​ ಸೂಚನೆ

ಬೆಂಗಳೂರು: ಡಿಕೆಶಿ ಬಂಧನ ಖಂಡಿಸಿ ನಡೆದ ಪ್ರತಿಭಟನೆ ಹಾಗೂ ಕಳೆದ ವರ್ಷ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಗಳನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

High Court notice to investigate government property damage
ತನಿಖೆಗೆ ಹೈಕೋರ್ಟ್​ ಸೂಚನೆ..

ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ಪ್ರತಿಭಟನೆ ವೇಳೆ ಆಗಿರುವ ಅಂದಾಜು ವೆಚ್ಚ, ನಷ್ಟದ ಬಗ್ಗೆ ತನಿಖೆ ನಡೆಸಲು ಇಬ್ಬರು ನಿವೃತ್ತ ಜಿಲ್ಲಾ ನ್ಯಾಯಾಧೀಶರ ಹೆಸರುಗಳನ್ನು ಕೇಳಿ, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘದ ನಾಗರಾಜ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ಸರ್ಕಾರದ ಪರ ವಕೀಲರು 2018ರಿಂದ ಈವರೆಗೆ ಬಂದ್ ವೇಳೆ ಕೈಗೊಂಡಿರುವ ಮುಂಜಾಗೃತ ಕ್ರಮದ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಯಿತು. ಇದನ್ನ ಪರಿಶೀಲಿಸಿದ ನ್ಯಾಯಾಲಯ ಜಿಲ್ಲಾ ನಿವೃತ್ತ ನ್ಯಾಯಾಧೀಶರ ಹೆಸರುಗಳನ್ನು ಮುಂದಿನ ವಿಚಾರಣೆ‌ ವೇಳೆ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಬೇಕೆಂದು ಆದೇಶಿಸಿ ವಿಚಾರಣೆ ಮುಂದೂಡಿದೆ.

ಸರ್ಕಾರಿ ಆಸ್ತಿ ಹಾನಿ: ಜಾರಿ ನಿರ್ದೇಶನಾಲಯದಿಂದ ಡಿಕೆಶಿ ಬಂಧನ ಖಂಡಿಸಿ ಕನಕಪುರ, ರಾಮನಗರ ಸೇರಿ ಇತರೆ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನ ನಡೆಸಲಾಗಿತ್ತು. ಈ ವೇಳೆ ಕೆಎಸ್​ಆರ್​ಟಿಸಿ ಬಸ್‌ಗಳಿಗೆ ಬೆಂಕಿ ಹಚ್ಚಿ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಲಾಗಿದೆ. ಈ ಸಂಬಂಧ ಪೊಲೀಸರು ರಾಜಕೀಯ ಮುಖಂಡರ ಮೇಲೆ ಯಾವುದೇ ದೂರನ್ನು ದಾಖಲಿಸದೇ ಅಮಾಯಕರ ಮೇಲೆ ದೂರನ್ನು ದಾಖಲಿಸಲಾಗಿದೆ. ರಾಜ್ಯದಲ್ಲಿ ನಡೆಯುವ ಕೆಲ ಪ್ರತಿಭಟನೆಗೆ ಯಾರು ಹೊಣೆ ಎಂದು ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್ ಪಿ ಅಮೃತೇಶ್ ನ್ಯಾಯಾಲಯಕ್ಕೆ ತಿಳಿಸಿದ್ದರು.

Intro:ಬಂದ್ ನಷ್ಟದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ಹೆಸರು ಸೂಚಿಸಿ:-
ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ

ಡಿಕೆ ಬಂಧನ ಖಂಡಿಸಿ ಪ್ರತಿಭಟನೆ ಹಾಗೂ ಕಳೆದ ವರ್ಷ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಂದ್ ಆಚರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಪ್ರತಿಭಟನೆ ವೇಳೆ ಆಗಿರುವ ಅಂದಾಜು ವೆಚ್ಚ,ನಷ್ಟದ ಬಗ್ಗೆ ತನಿಖೆ ನಡೆಸಲು ಇಬ್ಬರು ನಿವೃತ್ತ ಜಿಲ್ಲಾ ನ್ಯಾಯಾಧೀಶರ ಹೆಸರುಗಳನ್ನು ಸೂಚಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಈ ಕುರಿತು ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘ, ನಾಗರಾಜ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದ ಪರ ವಕೀಲರು 2018ರಿಂದ ಇಲ್ಲಿಯವರೆಗೆ ಬಂದ್ ವೇಳೆ ಕೈಗೊಂಡಿರುವ ಮುಂಜಾಗ್ರತ ಕ್ರಮದ ಮಾಹಿತಿಯನ್ನು ನ್ಯಾಯಲಯಕ್ಕೆ ಸಲ್ಲಿಸಿದರು.

ಇದನ್ನ ಪರಿಶೀಲಿಸಿದ ನ್ಯಾಯಲಯ ಬಂದ್ ವೇಳೆಯಾದ ನಷ್ಟದ ತನಿಖೆ ನಡೆಸಲು ಜಿಲ್ಲಾ ನಿವೃತ್ತ ನ್ಯಾಯಾಧೀಶರ ಹೆಸರುಗಳನ್ನು ಮುಂದಿನ ವಿಚಾರಣೆ‌ ವೇಳೆ ರಾಜ್ಯ ಸರಕಾರ ಹೈಕೋರ್ಟ್ಗೆ ಸೂಚಿಸಬೇಕು ಎಂದು ಹೇಳಿ ವಿಚಾರಣೆಯನ್ನು ಮುಂದೂಡಿಕೆ ಮಾಡಿತು.

ಏನಿದು‌ ಪ್ರಕರಣ

ಇಡಿ( ಜಾರಿ ನಿರ್ದೇಶನಾಲಯ) ಡಿಕೆಶಿ ಬಂಧನ ಖಂಡಿಸಿ ಕನಕಪುರ, ರಾಮನಗರ ಸೇರಿ ಇತರೆ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನ ನಡೆಸಲಾಗಿತ್ತು. . ಈ ವೇಳೆ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಬೆಂಕಿ ಹಚ್ಚಿ ಕೋಟ್ಯಂತರ ರೂ.ನಷ್ಟ ಉಂಟು ಮಾಡಲಾಗಿದ್ದು ಪೊಲೀಸರು ರಾಜಕೀಯ ಮುಖಂಡರ ಮೇಲೆ ಯಾವುದೇ ದೂರನ್ನು ದಾಖಲಿಸದೇ ಅಮಾಯಕರ ಮೇಲೆ ದೂರನ್ನು ದಾಖಲಿಸಿದ್ದಾರೆ . ಹಾಗೆ ರಾಜ್ಯದಲ್ಲಿ ನಡೆಯುವ ಕೆಲ ಪ್ರತಿಭಟನೆಗೆ ಯಾರು ಹೊಣೆ ಎಂದು ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್.ಪಿ.ಅಮೃತೇಶ್ ನ್ಯಾಯಲಯಕ್ಕೆ ತಿಳಿಸಿದ್ದರು.Body:KN_BNG_09_BANDU_7204498Conclusion:KN_BNG_09_BANDU_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.