ETV Bharat / state

ವಿಡಿಎ ತುಟ್ಟಿ ಭತ್ಯೆ ಮುಂದೂಡಿದ ಸರ್ಕಾರ : ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್

author img

By

Published : Sep 11, 2020, 9:17 PM IST

ವಿಡಿಎ ಪಾವತಿ ಮುಂದೂಡಿ ಕಾರ್ಮಿಕ ಇಲಾಖೆ ಕಳೆದ ಜುಲೈ 20ರಂದು ಅಧಿಸೂಚನೆ ಹೊರಡಿಸಿದೆ. ಇದು ದೋಷಪೂರಿತ ಹಾಗೂ ಕಾನೂನು ಬಾಹಿರ ಎಂದು ಆರೋಪಿಸಿರುವ ಅರ್ಜಿದಾರರು, ಸರ್ಕಾರದ ಈ ಆದೇಶ ಕನಿಷ್ಠ ವೇತನ ಕಾಯ್ದೆಗೆ ವಿರುದ್ಧವಾಗಿದೆ. ಲಾಕ್‍ಡೌನ್‍ನಿಂದ ಆರ್ಥಿಕ ನಷ್ಟವಾಗಿದೆ ಎಂಬ ಕಾರಣದಿಂದ ವಿಡಿಎ ಪಾವತಿಸುವುದನ್ನು ಮುಂದೂಡಲಾಗಿದೆ..

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ರಾಜ್ಯದ ಉದ್ದಿಮೆಗಳು ಹಾಗೂ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ 2020-21ನೇ ಸಾಲಿನ ವ್ಯತ್ಯಸ್ಥ ತುಟ್ಟಿಭತ್ಯೆ (ವಿಡಿಎ) ಪಾವತಿಯನ್ನು ಕೊರೊನಾ ಕಾರಣದಿಂದಾಗಿ ಮುಂದೂಡಲು ಅನುಮತಿ ನೀಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಕುರಿತು ಎಐಟಿಯುಸಿ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಕಾರ್ಮಿಕರ ಪರ ವಕೀಲರು ಹಾಗೂ ಉದ್ದಮೆಗಳ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ಪೀಠ, 2020-21ನೇ ಸಾಲಿನ ವ್ಯತಸ್ಥ ತುಟ್ಟಿಭತ್ಯೆ ಪಾವತಿಯನ್ನು 2021ರ ಮಾ.31ರವರೆಗೆ ಮುಂದೂಡಿ ಸರ್ಕಾರ ಕಳೆದ ಜುಲೈ 20ರಂದು ಹೊರಡಿಸಿರುವ ಆದೇಶ ಮೇಲ್ನೋಟಕ್ಕೆ ಕಾನೂನು ಬಾಹಿರವಾಗಿದೆ. ಕಾಯ್ದೆಯಡಿ ಇದನ್ನು ಅನುಮತಿಸಲು ಸಾಧ್ಯವಿಲ್ಲ. ವ್ಯತಸ್ಥ ತುಟ್ಟಿಭತ್ಯೆ ಕನಿಷ್ಠ ವೇತನದ ಅವಿಭಾಜ್ಯ ಅಂಗ. ಹೀಗಾಗಿ ಸರ್ಕಾರ ಆದೇಶದ ಮೂಲಕ ಅದನ್ನು ತಡೆ ಹಿಡಿಯಲು ಅಥವಾ ಮುಂದೂಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಡೆಯಾಜ್ಞೆ ನೀಡುವ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ : ವಿಡಿಎ ಪಾವತಿ ಮುಂದೂಡಿ ಕಾರ್ಮಿಕ ಇಲಾಖೆ ಕಳೆದ ಜುಲೈ 20ರಂದು ಅಧಿಸೂಚನೆ ಹೊರಡಿಸಿದೆ. ಇದು ದೋಷಪೂರಿತ ಹಾಗೂ ಕಾನೂನು ಬಾಹಿರ ಎಂದು ಆರೋಪಿಸಿರುವ ಅರ್ಜಿದಾರರು, ಸರ್ಕಾರದ ಈ ಆದೇಶ ಕನಿಷ್ಠ ವೇತನ ಕಾಯ್ದೆಗೆ ವಿರುದ್ಧವಾಗಿದೆ. ಲಾಕ್‍ಡೌನ್‍ನಿಂದ ಆರ್ಥಿಕ ನಷ್ಟವಾಗಿದೆ ಎಂಬ ಕಾರಣದಿಂದ ವಿಡಿಎ ಪಾವತಿಸುವುದನ್ನು ಮುಂದೂಡಲಾಗಿದೆ. ಇದರಿಂದ ಲಕ್ಷಾಂತರ ಕಾರ್ಮಿಕರಿಗೆ ತೊಂದರೆಯಾಗಿದ್ದು, ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಗಂಡ-ಹೆಂಡತಿ ಸಂಬಂಧ : ವಿಚಾರಣೆ ವೇಳೆ ಉದ್ದಿಮೆಗಳ ಪರ ವಾದಿಸಿದ ಹಿರಿಯ ವಕೀಲ ಉದಯ್ ಹೊಳ್ಳ, ಗಾರ್ಮೆಂಟ್ಸ್ ಮತ್ತು ಹೋಟೆಲ್ ಉದ್ದಿಮೆಗಳು ಸಂಪೂರ್ಣ ನೆಲ ಕಚ್ಚಿವೆ. ಹೀಗಾಗಿ, ಉದ್ದಿಮೆದಾರರೂ ಸಂಕಷ್ಟದಲ್ಲಿದ್ದಾರೆ. ಕಾರ್ಮಿಕರಿಲ್ಲದೆ ಉದ್ದಿಮೆಗಳಿಲ್ಲ. ಉದ್ದಿಮೆಗಳಿಲ್ಲದೆ ಕಾರ್ಮಿಕರಿಲ್ಲ. ಇವರದ್ದೊಂದು ರೀತಿ ಗಂಡ-ಹೆಂಡತಿ ಸಂಬಂಧವಿದ್ದಂತೆ. ಇಬ್ಬರೂ ಕೂತು ಚರ್ಚಿಸಿ, ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಗಂಡ ಹೆಂಡತಿ ಹೋಲಿಕೆಗೆ ನಸು ನಕ್ಕು ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಗಂಡ-ಹೆಂಡತಿ ಸಂಬಂಧವೆಂದ ಮೇಲೆ ಜೀವನಾಂಶ(ಮೇಂಟೆನೆನ್ಸ್) ನೀಡುವ ಜವಾಬ್ದಾರಿ ತಪ್ಪಿಸಿಕೊಳ್ಳಬಹುದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.